ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

೧೨ ವರ್ಷದಲ್ಲಿ ೪೦೦೦ ಹಾವುಗಳನ್ನು ರಕ್ಷಿಸಿದ ಉರಗ ಪ್ರಶಾಂತ್

೧೨ ವರ್ಷದಿಂದ ಹಾವು ಹಿಡಿಯುತ್ತಿರುವ ೨೪ ವರ್ಷದ ಉರಗ ಪ್ರಶಾಂತ್ ಅವರು ಇಲ್ಲಿಯವರೆಗೂ ೪೦೦೦ ಹಾವುಗಳನ್ನು ಹಿಡಿದಿದ್ದಾರಂತೆ.

Updated On : 28 Oct 2014, 12:43 pm

ಗುಲ್ಬರ್ಗಾ: ೧೨ ವರ್ಷದಿಂದ ಹಾವು ಹಿಡಿಯುತ್ತಿರುವ ೨೪ ವರ್ಷದ ಉರಗ ಪ್ರಶಾಂತ್ ಅವರು ಇಲ್ಲಿಯವರೆಗೂ ೪೦೦೦ ಹಾವುಗಳನ್ನು ಹಿಡಿದಿದ್ದಾರಂತೆ.

"ಹಾವುಗಳಿಗೂ ಬದುಕುವ ಹಕ್ಕಿದೆ. ನೀವು ಮುಂದಿನ ಬಾರಿ ಹಾವು ಕಂಡಾಗ ದಯವಿಟ್ಟು ಕೊಲ್ಲಬೇಡಿ, ನನಗೆ ಕರೆ ಮಾಡಿ" ಎನ್ನುತ್ತಾರೆ ಪ್ರಶಾಂತ್.

 "ನನಗೆ ಹಾವುಗಳೆಂದರ ಬಹಳ ಪ್ರೀತಿ. ನಾನು ಹನ್ನೆರಡನೆ ವಯಸ್ಸಿನಲ್ಲಿದ್ದಾಗ ವಿಷಕಾರಿಯಲ್ಲದ 'ಕೆರೆ ಹಾವು' ಹಿಡಿದಿದ್ದೆ. ಆಗ ಸ್ವಲ್ಪ ಹೆದರಿಕೆ ಇದ್ದದ್ದರಿಂದ ಕಡ್ಡಿಯ ಸಹಾಯದಿಂದ ಹಾವು ಹಿಡಿದಿದ್ದೆ" ಎನ್ನುತ್ತಾರೆ ೧೦ ತರಗತಿಯವರೆಗೆ ಓದಿರುವ ಸ್ನೇಕ್ ಚಿನ್ನು ಎಂದೇ ಹೆಸರಾಗಿರುವ ಪ್ರಶಾಂತ್. ನನ್ನ ತಂದೆ-ತಾಯಿಯವರಿಗೆ ನಾನು ಹಾವುಗಳನ್ನು ರಕ್ಷಿಸುವುದು ಇಷ್ಟವಿರಲಿಲ್ಲ, ಏಕೆಂದರೆ ಅವುಗಳು ಬಹಳ ವಿಷಪೂರಿತ.

"ನಾನು ಮೊದಲ ಬಾರಿ ಕೆರೆ ಹಾವು ಹಿಡಿದಾಗ ನನ್ನ ತಂದೆ-ತಾಯಿ ಏನು ಹೇಳಿರಲಿಲ್ಲ. ನಾಲ್ಕೈದು ದಿನಗಳ ನಂತರ ಒಂದು ಅಪಾಯಕಾರಿ ಕೆಲಸಕ್ಕೆ ಕರೆ ಬಂತು. ಆಗಲೇ ನಾನು ನಾಗರಹಾವು ಹಿಡಿದದ್ದು. ನಾನು ಆಗ ಹನ್ನೆರಡು ವರ್ಷದ ಹುಡುಗನಾಗಿದ್ದರಿಂದ ಜನೆರೆಲ್ಲಾ ಖುಷಿ ಪಟ್ಟಿದ್ದರು. ಆದರೆ ನನ್ನ ತಂದೆ-ತಾಯಿ ನನ್ನ ಮೇಲಿನ ಆಸ್ಥೆಯಿಂದ ಚೆನ್ನಾಗಿ ಬೈದಿದ್ದರು" ಎಂದು ನೆನಪಿಸಿಕೊಳ್ಳುತ್ತಾರೆ ಈಗ ಸದ್ಯಕ್ಕೆ ಒಂದು ಖಾಸಗಿ ಕಂಪನಿಯಲ್ಲಿ ದುಡಿಯುತ್ತಿರುವ ಪ್ರಶಾಂತ್.

"ಅಗತ್ಯವಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂದು ಹಾವುಗಳನ್ನು ರಕ್ಷಿಸುವ ಕಾರ್ಯ  ಮುಂದುವರೆಸಿದೆ" ಎನ್ನುತ್ತಾರೆ ಪ್ರಶಾಂತ್.

ವಿಷಪೂರಿತ ಮತ್ತು ವಿಷರಹಿತ ಹಾವುಗಳ ಮಧ್ಯ ವ್ಯತ್ಯಾಸ ಕಂಡು ಹಿಡಿಯುವುದು ಕಷ್ಟ, ಆದುದರಿಂದ ಹಾವುಗಳನ್ನು ಕಂಡಾಗ ತಮ್ಮನ್ನೂ ಅಥವಾ ಅನ್ಯ ಉರಗ ತಜ್ಞರನ್ನೊ ಕರೆಯುವಂತೆ ಸೂಚಿಸುತ್ತಾರೆ.

ಪ್ರಶಾಂತ್ ಹಾವುಗಳನ್ನು ರಕ್ಷಿಸುವುದಲ್ಲದೆ, ಜನರಿಗೆ ಅವುಗಳ ಬಗ್ಗೆ ತಿಳುವಳಿಕೆಯನ್ನು ನೀಡುತ್ತಾರೆ. "ನಾನು ಹಾವನ್ನು ಹಿಡಿದಾಗಲೆಲ್ಲಾ, ಹಾವಿನ ಬಗ್ಗೆ ಜನರಿಗೆ ತಿಳಿಸಿ, ಜನರಿಗೆ ಹಾವನ್ನು ಮುಟ್ಟುವಂತೆ ಹೇಳುತ್ತೇನೆ. ಜನರು ಹಾವನ್ನು ಪ್ರೀತಿಸಬೇಕು ಎಂಬುದೇ ನನ್ನ ಗುರಿ" ಎನ್ನುತ್ತಾರೆ ಪ್ರಶಾಂತ್.

ಈ ಭಾಗದ ಎಲ್ಲ ಹಾವುಗಳನ್ನು ಹಿಡಿದಿದ್ದೇನೆ ಎಂದು ಹೇಳುವ ಪ್ರಶಾಂತ್, ಶಾಲೆಗಳಿಗೆ ಭೇಟಿ ಕೊಟ್ಟು ಮಕ್ಕಳಿಗೆ ಹಾವುಗಳ ಬಗ್ಗೆ ತಿಳಿಸಿ ಅವರಲ್ಲಿ ಹಾವುಗಳ ಬಗ್ಗೆ ಇರುವ ಭೀತಿಯನ್ನು ನಿರ್ಮೂಲನೆ ಮಾಡಬೇಕೆಂದಿದ್ದೇನೆ" ಎನ್ನುತ್ತಾರೆ.

ಜನರು ಇವರನ್ನು ಹಾವುಗಳ ರಕ್ಷಣೆಗೆ ಕರೆದಾಗ ಇವರು ಯಾವುದೇ ದುಡ್ಡನ್ನು ಜನರಿಂದ ನಿರೀಕ್ಷಿಸುವುದಿಲ್ಲ ಬದಲಾಗಿ ತಮ್ಮ ಮೋಟಾರ್ ಗಾಡಿಗೆ ಬೇಕಾದ ಇಂಧನ ಧನದ ವೆಚ್ಚವನ್ನಷ್ಟೆ ಸ್ವೀಕರಿಸುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement