ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಕೊನೆಗೂ ಶುರುವಾದ ಪಬ್ ದಾಳಿ ವಿಚಾರಣೆ

ಐದೂವರೆ ವರ್ಷಗಳ ಬಳಿಕ ಪಬ್ ದಾಳಿ ವಿಚಾರಣೆ ಇಲ್ಲಿನ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಆರಂಭವಾಗಿದೆ...

Rashmi Kasaragodu
Updated On : 29 Oct 2014, 2:37 am

ಮಂಗಳೂರು: ಐದೂವರೆ ವರ್ಷಗಳ ಬಳಿಕ ಪಬ್ ದಾಳಿ ವಿಚಾರಣೆ ಇಲ್ಲಿನ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಆರಂಭವಾಗಿದೆ.

2009ರ ಜ.24 ರಂದು ರಾತ್ರಿ ಅಮ್ನೇಶಿಯ ಪಬ್ ದಾಳಿ ನಡೆಸಿ ಪಾರ್ಟಿಯಲ್ಲಿದ್ದ  ಶ್ರೀಮಂತ ಯುವತಿಯರ ಮೇಲೆ ಶ್ರೀರಾಮಸೇನೆ ಕಾರ್ಯಕರ್ತರು ಹಲ್ಲೆ ಮಾಡಿದ್ದಕು. ತಾನು ದಾಳಿಯಲ್ಲಿ ಪಾಲ್ಗೊಂಡಿಲ್ಲ ಆದ್ದರಿಂದ ಎಫ್‌ಐಆರ್ ರದ್ದು ಮಾಡಬೇಕು ಎಂದು ಪ್ರಕರಣದ 29ನೇ ಆರೋಪಿಯಾಗಿರುವ ವಕೀಲ ದಿನಕರ ಶೆಟ್ಟಿ ಹೈಕೋರ್ಟ್‌ನಲ್ಲಿ ಐದೂವರೆ ವರ್ಷದ ಹಿಂದೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ  ನಡೆಸಿದ ಕೋರ್ಟ್ ತಡೆಯಾಜ್ಞೆ ನೀಡಿತ್ತು. ಇದೀಗ ತಡೆಯಾಜ್ಞೆ ತೆರವಾಗಿದ್ದು, ದಾಳಿಯಲ್ಲಿ ಭಾಗಿಯಾಗಿದ್ದಾರೋ ಇಲ್ಲವೋ ಎನ್ನುವದು ಕೆಳ ನ್ಯಾಯಾಲಯದ ವಿಚಾರಣೆಯಿಂದ ಮಾತ್ರ ಸಾಧ್ಯ ಎಂದು ಹೈಕೋರ್ಟ್ ಪೀಠ ಅಭಿಪ್ರಾಯ ಪಟ್ಟು, ವಿಚಾರಣೆ ಮುಂದುವರಿಸುವಂತೆ ಕೆಳ ನ್ಯಾಯಾಲಯಕ್ಕೆ ಸೂಚಿಸಿದೆ. ಅದರಂತೆ ಎರಡನೇ ಜೆಎಂಎಫ್‌ಸಿ ಕೋರ್ಟಲ್ಲಿ ಸೋಮವಾರ ವಿಚಾರಣೆ ಆರಂಭವಾಗಿದೆ.

ಈ ಐದೂವರೆ ವರ್ಷದಲ್ಲಿ ಸಾಕಷ್ಟು ಸ್ಥಿತ್ಯಂತರಗಳು ಆಗಿವೆ. ದಾಳಿ ಮಾಡುವಾಗ ಶ್ರೀರಾಮ ಸೇನೆಯಲ್ಲಿದ್ದ ಪ್ರಮುಖ ಆರೋಪಿಗಳು ಸೇನೆಯಿಂದ ಸಿಡಿದು ಐದು ಹಿಂದೂ ಸಂಘಟನೆಗಳಲ್ಲಿ ಚದುರಿ ಹೋಗಿದ್ದಾರೆ. ದಾಳಿಗೊಳಗಾದ ಅಮ್ನೇಶಿಯಾ ಪಬ್ ಬಳಿಕ ಅದೇ ಜಾಗದಲ್ಲಿ ಬಿಯರ್ ಫ್ಯಾಕ್ಟರಿ ಪಬ್ ಆರಂಭವಾಯಿತು. ದಾಳಿಗೊಳಗಾದ ಸಂತ್ರಸ್ತ  ಯುವತಿಯರು ಇದುವರೆದೂ ದೂರು ನೀಡಿಲ್ಲ. ಕೇಂದ್ರ ಮಹಿಳಾ ಆಯೋಗ ಸದಸ್ಯೆ ನಿರ್ಮಲಾ ವೆಂಕಟೇಶ್ ನೀಡಿದ ದಾಳಿ ವರದಿಯನ್ನು ಕೇಂದ್ರ ಸರ್ಕಾರ ಸ್ವೀಕರಿಸಲೇ ಇಲ್ಲ. ಬಳಿಕ ನಿರ್ಮಲಾ ವೆಂಕಟೇಶ್ ಬಿಜೆಪಿ ಸೇರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement