ರಾಜ್ಯೋತ್ಸವ: ಮಗ್ ಟು ಮೈಕ್ ನಿಂದ ವಿಶೇಷ ಕಾರ್ಯಕ್ರಮ
ಯುವ ಗಾಯಕ ಸುನಿಲ್ ಕೋಶಿ ನೇತೃತ್ವದಲ್ಲಿ 'ಮಗ್ ಟು ಮೈಕ್ ' ಕನ್ನಡ ರಾಜ್ಯೋತ್ಸವ ವಿಶೇಷ ಕಾರ್ಯಕ್ರಮವನ್ನು ....
ಬೆಂಗಳೂರು: ಯುವ ಗಾಯಕ ಸುನಿಲ್ ಕೋಶಿ ನೇತೃತ್ವದಲ್ಲಿ 'ಮಗ್ ಟು ಮೈಕ್ ' ಕನ್ನಡ ರಾಜ್ಯೋತ್ಸವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದೆ. 2014 ನವೆಂಬರ್ 2ರಂದು ಸಂಜೆ 4 ಗಂಟೆಗೆ ಸ್ವಾಮಿ ವಿವೇಕಾನಂದ ಮೆಟ್ರೋ ಸ್ಟೇಷನ್, ಬೆಂಗಳೂರು ಹಾತ್ ರಂಗಮಂದಿರದಲ್ಲಿ ಕನ್ನಡ ಹಿಟ್ ಗೀತೆಗಳ ಗಾಯನ ನಡೆಯಲಿದೆ.
ಕಾರ್ಯಕ್ರಮದ ವಿಶೇಷವೇನೆಂದರೆ, ಇಲ್ಲಿ ಹಾಡುವವರು ಯಾರೂ ಖ್ಯಾತ ಗಾಯಕರಲ್ಲ, ಬದಲಾಗಿ ಸಂಗೀತಲೋಕಕ್ಕೆ ಹೊಸದಾಗಿ ಕಾಲಿಡುತ್ತಿರುವ ಯುವಕ ಯುವತಿಯರು. ಕನ್ನಡಿಗರ ಜತೆ ಕನ್ನಡೇತರರು ಕೂಡಾ ಕನ್ನಡ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ಮನರಂಜಿಸಲಿದ್ದಾರೆ ಅಂತಾರೆ ಸುನೀಲ್ ಕೋಶಿ.
ಸುಮಾರು 30 ಗಾಯಕರು ಕನ್ನಡದ ಎವರ್ಗ್ರೀನ್ ಹಿಟ್ ಸೇರಿದಂತೆ ಕನ್ನಡದ ಭಾವಗೀತೆಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಲಿದ್ದಾರೆ.
ಕನ್ನಡದ ಕಂಪನ್ನು ಪಸರಿಸುವ ಹಾಗೂ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಮ್ಮ ಮೆಟ್ರೋದ ಸಹಯೋಗದೊಂದಿಗೆ ಈ ಶೋ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು, ಹೆಚ್ಚಿನ ವಿವರಗಳಿಗಾಗಿ
ಸುನಿಲ್ ಕೋಶಿ
ಮೊಬೈಲ್: 9845286308
ಇಮೇಲ್: FromMugToMike@gmail.com