ಮತಾಂತರಕ್ಕೆ ಒಪ್ಪದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ
ಮಂಗಳೂರು: ಮತಾಂತರಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮಂಗಳೂರಿನ ಕಾವೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದೇರೇಬೈಲ್ ಕೊಂಚಾಡಿಯ ನಿವಾಸಿ 23 ವರ್ಷದ ರೂಪರ್ಟ್ ಮೇಲೆ ದುಷ್ಕರ್ಮಿಗಳ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿದೆ.
ನ್ಯೂ ಲೈಫ್ ಎಂಬ ಮತಾಂತರ ತಂಡವೊಂದು ರೂಪರ್ಟ್ ಕುಟುಂಬಕ್ಕೆ ಆಮಿಷವೊಡ್ಡಿತ್ತು. ರೂಪರ್ಟ್ ತಂದೆ ಮತ್ತು ಸಹೋದರಿಯರು ಮತಾಂತರ ಹೊಂದಿದ್ದರು. ಆದರೆ, ರೂಪರ್ಟ್ ಮಾತ್ರ ಕ್ರಿಶ್ಚಿಯನ್ ಧರ್ಮ ತೊರೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲೇ ನ್ಯೂ ಲೈಫ್ ತಂಡ ಹಲ್ಲೆ ನಡೆಸಿದೆ. ಘಟನೆಯ ಬಗ್ಗೆ ಕಾವೂರು ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆದಿದೆ.