ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ನ. 12 ರಂದು ಬ್ಯಾಂಕ್ ನೌಕರರ ಮುಷ್ಕರ

ವೇತನ ಪರಿಷ್ಕರಣೆ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನ. 12ರಂದು ಮುಷ್ಕರ ...

ಸಾಂದರ್ಭಿಕ ಚಿತ್ರ
Rashmi Kasaragodu
Updated On : 30 Oct 2014, 11:39 am

ಬೆಂಗಳೂರು: ವೇತನ ಪರಿಷ್ಕರಣೆ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ  ಒತ್ತಾಯಿಸಿ ನ. 12ರಂದು ಮುಷ್ಕರ ನಡೆಸಲು ಬ್ಯಾಂಕ್ ನೌಕರರು ನಿರ್ಧರಿಸಿದ್ದಾರೆ.
ಬೇಡಿಕೆಗಳಿಗೆ ಸರ್ಕಾರದಿಂದ ಸಕಾರಾತ್ಮಕ ಉತ್ತರ ಸಿಗದಿದ್ದರೆ ಡಿ.2ರಿಂದ 5ರವರೆಗೆ ವಲಯವಾರು ಸರದಿ ಮುಷ್ಕರಗಳನ್ನು ನಡೆಸಲಾಗುವುದು ಎಂದು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್ಬಿಯು ) ಸಂಚಾಲಕ ವಸಂತ ರೈ ಹುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿ ಐದು ವರ್ಷಕ್ಕೊಮ್ಮ ವೇತನ ಪರಿಷ್ಕರಣೆಯಾಗಬೇಕು. ಅದರಂತೆ 2007ರ ದ್ವಿಪಕ್ಷೀಯ ಒಪ್ಪಂದಕ್ಕೆ ಅನ್ವಯ ಶೇ.17.5ರಷ್ಟು ವೇತನ ಏರಿಸಿದ್ದರು. ಇದು 2012ರ  ನ.1 ರಿಂದ ಶೇ.17.5ಕ್ಕಿಂತ ಹೆಚ್ಚಾಗಿ ವೇತನ ಪರಿಷ್ಕರಣೆಯಾಗಬೇಕಿತ್ತು. ಆದರೆ ಶೇ. 11ರಷ್ಟು ಮಾತ್ರ ಹೆಚ್ಚಿಸಿದ್ದಾರೆ. ವೇತನ ಹೆಚ್ಚಿಸುವಂತೆ ಸಾಕಷ್ಟು ಬಾರಿ ಹೋರಾಟ ಮಾಡಿದ್ದೇವೆ. ಆದರೆ ಕೇಂದ್ರ ಸರ್ಕಾರ ಮತ್ತು ಭಾರತೀಯ ಬ್ಯಾಂಕುಗಳಉ ಸಂಘಗಳು ನಮ್ಮ ಬೇಡಿಕೆಗಳನ್ನು ತಿರಸ್ಕರಿಸುತ್ತಿವೆ. ಹೀಗಾಗಿ ಹೋರಾಟದ ಹಾದಿಯೊಂದೇ ನಮ್ಮ ಮುಂದಿರುವ ಅಸ್ತ್ರ ಎಂದು ಅವರು ವಿವರಿಸಿದರು.

ನ.12ರಂದು ಮುಷ್ಕರಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಡಿ.2 ರಂದು ದಕ್ಷಿಣ ವಲಯ, ಡಿ.3 ರಂದು ಉತ್ತರ ವಲಯ, ಡಿ.4ರಂದು ಪೂರ್ವ ವಲಯ ಮತ್ತು 5ರಂದು ಪಶ್ಚಿಮ ವಲಯದಲ್ಲಿ ಆಯಾ  ವ್ಯಾಪ್ತಿಯ ಬ್ಯಾಂಕ್ಗಳ ನೌಕರರು ಮುಷ್ಕರ ನಡೆಸಲಿದ್ದಾರೆ. ವೇತನ ಪರಿಷ್ಕರಣೆಯ ಒಪ್ಪಂದವನ್ನು ಅಂತಿಮಗೊಳಿಸದೆ ವಿಳಂಬ ಮಾಡುತ್ತಿರುವುದರಲ್ಲಿ ಭಾರತೀಯ ಬ್ಯಾಂಕುಗಳ ಸಂಘ (ಐಬಿಎ)ದ ಕುತಂತ್ರವೂ ಅಡಗಿದೆ ಎಂದರು. ಎಐಬಿಒಎ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ , ಅಧಿಕಾರಿಗಳ ಸಂಘದ ಅಧ್ಯಕ್ಷ ಎ.ಎನ್. ಕೃಷ್ಣಮೂರ್ತಿ ಹಾಜರಿದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement