ಹೆಂಡತಿ ರಹಸ್ಯ ಕಾರ್ಯಾಚರಣೆ: ಸಲಿಂಗರತಿ ಗಂಡನ ಬಂಧನ
ತನ್ನ ಗಂಡ ಇನ್ನೊಬ್ಬ ಗಂಡಸಿಸ ಜೊತೆ...
ಬೆಂಗಳೂರು: ತನ್ನ ಗಂಡ ಇನ್ನೊಬ್ಬ ಗಂಡಸಿಸ ಜೊತೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದ ಎಂದು ಆಪಾದಿಸಿ, ಬೆಂಗಳೂರು ಮೂಲದ ದಂತ ವೈದ್ಯೆ ರಹಸ್ಯ ಕ್ಯಾಮರಾ ಬಳಸಿ ಸೆರಿಹಿಡಿದು ಪೊಲೀಸರಿಗೆ ದೂರು ಕೊಟ್ಟ ಹಿನ್ನಲೆಯಲ್ಲಿ ಇನ್ಫೋಸಿಸ್ ನಲ್ಲಿ ಉದ್ಯೋಗದಲ್ಲಿರುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇಂಡಿಯನ್ ಪೀನಲ್ ಕೋಡ್ ೩೭೭ ಪ್ರಕಾರ ೩೨ ವರ್ಷದ ಯುವಕನನ್ನು ಬಂಧಿಸಲಾಗಿದೆ.
ನವೆಂಬರ್ ನಲ್ಲಿ ಮದುವೆಯಾಗಿದ್ದ ಇವರು, ಬೇರೆಯಾಗಿಯೇ ಬದುಕುತ್ತಿದ್ದರು. ಗಂಡ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದರೆ, ಹೆಂಡತಿ ಬೆಂಗಳೂರಿನಲ್ಲಿ ದಂತವೈದ್ಯ ಕ್ಲಿನಿಕ್ ನಡೆಸುತ್ತಿದ್ದರು. ಸ್ವಲ್ಪ ಸಮಯ ಕಳೆದು ಗಂಡ ಬೆಂಗಳೂರಿಗೆ ಬಂದ ಮೇಲೆ ಮಲ್ಲೇಶ್ವರಂ ನಲ್ಲಿ ಬಾಡಿಗೆ ಮನೆ ಹಿಡಿದು ಇಬ್ಬರೂ ಒಟ್ಟಿಗೆ ವಾಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಗಂಡನ ನಡವಳಿಕೆಯಲ್ಲಿ ಬದಲಾವಣೆ ಗಮನಿಸಿದೆ ಎಂದು ಹೇಳುವ ಹಂಡತಿ, ತನ್ನ ಗಂಡ ಲಿಪ್ ಸ್ಟಿಕ್ ಹಚ್ಚಿಕೊಳ್ಳುತ್ತಿದ್ದರು, ಕನ್ನಡಿ ಮುಂದೆ ಹೆಚ್ಚು ಸಮಯ ಕಳೆಯುತ್ತಿದ್ದರು, ನನ್ನನು ಮುಟ್ಟಲು ನಿರಾಕರಿಸುತ್ತಿದ್ದರು, ಮತ್ತು ಅಪರಿಚಿತರಂತೆ ಬೇರೆ ಕೋಣೆಯಲ್ಲಿ ಮಲಗುತ್ತಿದ್ದರು ಎಂದು ದೂರಿದ್ದಾರೆ.
ಇದರಿಂದ ಅನುಮಾನ ಬಂದಾಗ ಆ ಯುವತಿ ರೂಮಿನಲ್ಲಿ ರಹಸ್ಯ ಕ್ಯಾಮರಾ ಅಡವಳಿಸಿ ತನ್ನ ಗಂಡನ ಸಲಿಂಗರತಿ ಚಟುವಟಿಕೆಗಳನ್ನು ಸೆರೆ ಹಿಡಿದು ಪೊಲೀಸರಿಗೆ ದೂರು ನೀಡಿದ್ದಾರೆ.
ಕೆಲವು ತಿಂಗಳ ಹಿಂದೆ ಸುಪ್ರೀಂ ಕೋರ್ಟ್ ಸಲಿಂಗಕಾಮ ಕ್ರಿಮಿನಲ್ ಆಕ್ಟ್ ಎಂಬ ಸರ್ಕಾರದ ಲಾ ವನ್ನು ಎತ್ತಿ ಹಿಡಿದಿತ್ತು.