ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ನಮ್ಮ ಬೆಂಗಳೂರು ಪ್ರತಿಷ್ಠಾನ ಪ್ರಶಸ್ತಿಗೆ ಅರ್ಜಿ ಆಹ್ವಾನ

ನಮ್ಮ ಬೆಂಗಳೂರು ಪ್ರತಿಷ್ಠಾನ (ಎನ್‌ಬಿಎಫ್) ನೀಡುವ ನಮ್ಮ ಬೆಂಗಳೂರು ಪ್ರಶಸ್ತಿಯ 6 ನೇ ಆವೃತ್ತಿಗೆ ಅರ್ಜಿ ಆಹ್ವಾನಿಸಲಾಗಿದೆ...

Rashmi Kasaragodu
Updated On : 1 Nov 2014, 11:31 am

ಬೆಂಗಳೂರು: ನಮ್ಮ ಬೆಂಗಳೂರು ಪ್ರತಿಷ್ಠಾನ (ಎನ್‌ಬಿಎಫ್) ನೀಡುವ ನಮ್ಮ ಬೆಂಗಳೂರು ಪ್ರಶಸ್ತಿಯ 6 ನೇ ಆವೃತ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಬೆಂಗಳೂರನ್ನು ಮೌಲ್ಯಯುತ ಹಾಗೂ ಪ್ರತಿಷ್ಠಿತ ನಗರವನ್ನಾಗಿ ಬೆಳೆಸಲು ಕಾರಣರಾದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ. 2014 ನೇ  ಸಾಲಿನಲ್ಲಿ 10 ವಿಭಾಗಗಳಲ್ಲಿ 14 ಪ್ರಶಸ್ತಿ  ನೀಡಲಾಗುತ್ತದೆ. ನಾಗರಿಕರು- ವ್ಯಕ್ತಿ ಮತ್ತು ಯುವಜನರು ಸರ್ಕಾರಿ ಮಟ್ಟ ನೌಕರ ಹಾಗೂ ಸಂಸ್ಥೆ , ಚುನಾಯಿತ ಪ್ರತಿನಿಧಿ , ನಾಗರಿಕ ಗುಂಪು ಸರ್ಕಾರೇತರ ಸಂಸ್ಥೆ ಹಾಗೂ ಸಮುದಾಯ ಆಧಾರಿತ ಸಂಸ್ಥೆ,  ಮಾಧ್ಯಮ- ವ್ಯಕ್ತಿ ಹಾಗೂ ಸಂಸ್ಥೆ , ಸಾಮಾಜಿಕ ಉದ್ಯಮಿ, ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ, ಅನಿವಾಸಿ ಬೆಂಗಳೂರಿಗ , ಬೆಂಗಳೂರಿನ ವಿದೇಶಿ  ನಿವಾಸಿಗ, 2013 ನೇ ಸಾಲಿನ ನಮ್ಮ ಬೆಂಗಳೂರಿಗ ಎಂಬ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುವುದು.
ಅರ್ಜಿಗಳನ್ನು ಆನ್‌ಲೈನ್ ಅಥವಾ ಪತ್ರ ಮೂಲಕ ಕಳುಹಿಸಬಹುದು. www.nammabengaluruawards.org ತಾಣದಲ್ಲಿ  ಅರ್ಜಿ ಪಡೆದು ಭರ್ತಿ ಮಾಡಿ nba@namma-bengaluru.org ಗೆ ಮಿಂಚಂಚೆ ಕಳುಹಿಸಬಹುದು.

ಬೆಂಗಳೂರು ಒನ್ ಕೇಂದ್ರಗಳು, ಬಿಬಿಎಂಪಿ ಮುಖ್ಯ ಕಚೇರಿ, ಜಗದೀಶ್  ಟೂರ್ಸ್ ಆ್ಯಂಡ್ ಟ್ರಾವೆಲ್ಸ್ , ಸಿ. ಕೃಷ್ಣಯ್ಯ  ಚೆಟ್ಟಿ ಆ್ಯಂಡ್ ಸನ್ಸ್  ಔಟ್ ಲೆಟ್ಸ್‌ಗಳಲ್ಲೂ ಅರ್ಜಿ ಪಡೆದು ಭರ್ತಿ ಮಾಡಿ ಸಲ್ಲಿಸಲು ಅವಕಾಶವಿದೆ. ಸಾರ್ವಜನಿಕರು ತಾವು ಸೂಚಿಸುವ ಹೆಸರನ್ನು ಸಂಗ್ರಹಿಸಲು ಕ್ಯಾಂಟರ್ ವ್ಯವಸ್ಥೆ ಮಾಡಲಾಗಿದ್ದು, ನಗರದ ಮಾಹಿತಿಯನ್ನು ಸಂಸ್ಥೆಯ ವೆಬ್ ಸೈಟ್‌ನಲ್ಲಿ ಪಡೆಯಬಹುದು.

ಪ್ರಶಸ್ತಿಗೆ ಸೂಕ್ತರನ್ನು ಆರಿಸಲು 23 ಸದಸ್ಯರ ಆಯ್ಕೆ ಸಮಿತಿ ರಚಿಸಿದ್ದು, ವಿವಿಧ ಕ್ಷೇತ್ರಗಳ ಪರಿಣಿತರನ್ನು ಸಮಿತಿಗೆ ಆರಿಸಲಾಗಿದೆ. ನ್ಯಾ. ಸಂತೋಷ್ ಹೆಗ್ಡೆ, ಪ್ರದೀಪ್ ಖರ್, ಆರ್.ಕೆ ಮಿಶ್ರಾ, ಡಾ. ಅಶ್ವಿನ್ ಮಹೇಶ್, ಡಾ. ಅನಿಲ್ ಮೆನನ್, ಪ್ರೊ.ಜಿ.ಎಸ್ ಸಿದ್ಧಲಿಂಗಯ್ಯ , ಸೃಜನ್ ಪೂವಯ್ಯ , ವಸಂತಿ ಹರಿಪ್ರಕಾಶ್, ಎಚ್.ಎಸ್ ಬಲರಾಂ, ಸುಭಾಷಿನಿ ವಸಂತ್ , ಎನ್.ಎಸ್. ಮುಕುಂದ, ಮರ್ರೇ ಕಲ್ಶಾ, ರವಿ ಚಂದರ್, ಸಯದ್ ಎಂ.ಎಚ್ ಕಿರ್ಮಾನಿ, ಮಹೇಂದ್ರ ಮಿಶ್ರಾ, ತಾರಾ ಅನುರಾಧ, ಟಿ. ಆರ್ ರಘುನಂದನ್, ಗೌತಮ್ ಮಾಚಯ್ಯ, ಜಿಶ್ನು ದಾಸ್ ಗುಪ್ತ, ಡಿವಿಎಸ್ ಗುಪ್ತ, ಎಚ್ ಎಸ್ ವೆಂಕಟೇಶಮೂರ್ತಿ, ಟಿಎನ್ ಸೀತಾರಾಂ, ಡಾ. ಸುದರ್ಶನ ಬಲ್ಲಾಳ ಸಮಿತಿಯಲ್ಲಿದ್ದಾರೆ.

ಎಲೆಮರೆಕಾಯಿಯಂತೆ ಇದ್ದು, ಅನೇಕ ಕ್ಷೇತ್ರಗಳಲ್ಲಿ ಬೆಂಗಳೂರನ್ನು ಬೆಳೆಸಲು ಕಾರಣರಾದ ಸಾಧಕರನ್ನು ಸಾರ್ವಜನಿಕರೇ ಗುರುತಿಸಬೇಕಾಗಿದೆ. ನಗರದ ಅಭಿವೃದ್ಧಿಗೆ ಕಾರಣರಾದ ಸಾಧಕರನ್ನು ಸಾರ್ವಜನಿಕರೇ ಗುರುತಿಸಬೇಕಾಗಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಶ್ರೀಧರ್ ಪಬ್ಬಿಸೆಟ್ಟಿ ಹೇಳಿದ್ದಾರೆ. ಹೆಚ್ಚಿನ ಮಾಹಿತಿಗೆ ದೂ.ಸಂ. 9591982287/080-41102457 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement