ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಅನಾಥರಿಗೆ ಕನ್ನಡ ಶಿಕ್ಷಣ

Lingaraj Badiger
Updated On : 1 Nov 2014, 11:35 am

ಬಳ್ಳಾರಿ: ಆಕೆ ಆಂಧ್ರದ ಕನ್ನಡ ಹುಡುಗಿ, ಅನಾಥೆ ಓದುವ ಹಂಬಲ ಇದ್ದ ಆಕೆಗೆ ದೇವರ ರೂಪದಲ್ಲಿ ಬಂದ ದಾನಿ ಶ್ರೀಧರಗಡ್ಡೆ ಸಿದ್ದಬಸಪ್ಪ. ಆ ಹುಡುಗಿಯ ಓದಿನ ಜವಾಬ್ದಾರಿ ವಹಿಸಿಕೊಂಡರು. ಪಿಯುಸಿ ಮುಗಿದ ಬಳಿಕ 30 ಸಾವಿರ ರುಪಾಯಿ ಕೊಟ್ಟು ಬಳ್ಳಾರಿ ಕನ್ನಡದ ಖಾಸಗಿ ಕಾಲೇಜಿನಲ್ಲಿ ಡಿ.ಇಡಿಗೆ ಪ್ರವೇಶ ಕೊಡಿಸಿದ್ದಾರೆ.

ಸಿದ್ದಬಸಪ್ಪ ಅವರ ಕನ್ನಡ ಸೇವೆಗೆ ಇದು ಒಂದು ನಿದರ್ಶನ ಅಷ್ಟೆ. ಅನಾಥ ಹಾಗೂ ಬಡ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸುವ ಮೂಲಕ 37 ವರ್ಷಗಳಿಂದ ಕನ್ನಡಾಂಬೆ ಕಾಯಕದಲ್ಲಿ ತೊಡಗಿ ಕೊಂಡಿದ್ದಾರೆ ಅವರು. ಇವರೇನೂ ಸಿರಿವಂತರಲ್ಲ. ತಿಂಗಳ ದುಡಿಮೆ 18 ಸಾವಿರ ರುಪಾಯಿ. ಅದರಲ್ಲಿ 10 ಸಾವಿರ ರು. ಕನ್ನಡ ಸೇವೆಗೆ ವಿನಿಯೋಗ. ಅವರಿಗೆ ಸಂಸಾರವಿಲ್ಲ ಅಂತಲ್ಲ, ಪತ್ನಿ, ಮೂವರು ಮಕ್ಕಳಿದ್ದಾರೆ. ಮಕ್ಕಳಿಗೆ ಮದುವೆಯಾಗಿದೆ. ಹೆಂಡತಿ ಆಂಧ್ರಪ್ರದೇಶದ ಹೊಳಗುಂದಿಯಲ್ಲಿ ನೆಲೆಸಿದ್ದಾರೆ. ಬಳ್ಳಾರಿಯ ವಾಸು ಸೈಂಟಿಫಿಕ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿರುವ ಸಿದ್ದಬಸಪ್ಪ ಸಂಬಳ ಬಂದ ತಕ್ಷಣ 5 ಸಾವಿರ ರುಪಾಯಿ ಪತ್ನಿಗೆ ಕಳುಹಿಸುತ್ತಾರೆ. 750 ಮನೆ ಬಾಡಿಗೆ ಸೇರಿತ ತಮ್ಮ ಖರ್ಚಿಗೆ 3 ಸಾವಿರ. ಇನ್ನುಳಿದದ್ದು ಕನ್ನಡಾಂಬೆ ಮಡಿಲಿಗೆ.

ಸಿದ್ದಬಸಪ್ಪ ಇಲ್ಲಿಯವರೆಗೆ ಕನ್ನಡಕ್ಕೆ ಕನ್ನಡ ಮಕ್ಕಳಿಗೆ ದಾನ ಮಾಡಿದ್ದು 30 ಲಕ್ಷ ರುಪಾಯಿ. ವಯಸ್ಸು 64 ಆದರೂ ದಾನ ಮಾಡುವ ಉತ್ಸಾಹ ಕಡಿಮೆಯಾಗಿಲ್ಲ. ಮೊಬೈಲ್ ಕೊಂಡಿಲ್ಲ. ಹವಾಯಿ ಚಪ್ಪಲಿ. ಚಿಕ್ಕಮನೆಯಲ್ಲಿ ವಾಸ. ನೆರವು ಪಡೆದ 162 ಮಕ್ಕಳು ಈಗ ಒಳ್ಳೆ ಉದ್ಯೋಗದಲ್ಲಿದ್ದಾರೆ. ಸಹಾಯ ಪಡೆದವರ ವಿವವರವನ್ನು ದಾಖಲಿಸುತ್ತಾರೆ. ಆದರೆ ಯಾರಲ್ಲಿಯೂ ಹೇಳುವುದಿಲ್ಲ. ವಿಶೇಷವೆಂದರೆ ಇವರ ಸೇವೆಗೆ ಜಾತಿಮತಗಳ ಹಂಗಿಲ್ಲ.

ಕನ್ನಡ ಸೇವೆ ಮಾಡಬೇಕು ಎನ್ನುವುದು ನನ್ನ ತಂದೆಯ ಆದೇಶ. ಅದನ್ನು ನಾನು ಪಾಲಿಸುತ್ತಿದ್ದೇನೆ. ಇದರಲ್ಲಿ ನನ್ನ ಹೆಗ್ಗಳಿಕೆ ಏನೂ ಇಲ್ಲ-ಸಿದ್ದಬಸಪ್ಪ

-ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement