ರಾಜ್ಯೋತ್ಸವಕ್ಕೆ ಹೊಸ ರೈಲು
ರೈಲ್ವೆ ಸಚಿವ ಸದಾನಂದಗೌಡ ಬಜೆಟ್ನಲ್ಲಿ ಘೋಷಣೆ ಮಾಡಿದಂತೆ 7 ಹೊಸ ರೈಲುಗಳನ್ನು ರಾಜ್ಯೋತ್ಸವಕ್ಕೆ ಕೊಡುಗೆಯಾಗಿ...
ಬೆಂಗಳೂರು: ರೈಲ್ವೆ ಸಚಿವ ಸದಾನಂದಗೌಡ ಬಜೆಟ್ನಲ್ಲಿ ಘೋಷಣೆ ಮಾಡಿದಂತೆ 7 ಹೊಸ ರೈಲುಗಳನ್ನು ರಾಜ್ಯೋತ್ಸವಕ್ಕೆ ಕೊಡುಗೆಯಾಗಿ ನೀಡಿದ್ದಾರೆ . ಈ ನೂತನ ರೈಲುಗಳು ನ.1 ರಿಂದ ಕಾರ್ಯಾರಂಭ ಮಾಡಲಿವೆ.
ಬೆಂಗಳೂರು-ತುಮಕೂರು- ಬೆಂಗಳೂರು ಫಾಸ್ಟ್ ಪ್ಯಾಸೆಂಜರ್ (ಪ್ರತಿದಿನ) , ಯಶವಂತಪುರ- ನೆಲಮಂಗಲ-ಯಶವಂತಪುರ ಡೆಮು ಪ್ಯಾಸೆಂಜರ್, ಯಶವಂತಪುರ-ಹೊಸೂರು- ಯಶವಂತಪುರ ಡೆಮು ಪ್ಯಾಸೆಂಜರ್ ರೈಲುಗಳಿಗೆ ಸಚಿವ ಸದಾನಂದಗೌಡ ಯಶವಂತಪುರ ರೈಲು ನಿಲ್ದಾಣದಲ್ಲಿ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಚಾಮರಾಜನಗರ ರೈಲು ನಿಲ್ದಾಣದಲ್ಲಿ ಸಂಸದ ಧ್ರುವನಾರಾಯಣ ಅವರು ಬೆಂಗಳೂರು ನಗರ- ಚಾಮರಾಜನಗರ ಫಾಸ್ಟ್ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಲಿದ್ದಾರೆ. ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸಂಸದ ಪ್ರಹ್ಲಾದ್ ಜೋಶಿ, ಹುಬ್ಬಳ್ಳಿ-ಬೆಳಗಾವಿ- ಹುಬ್ಬಳ್ಳಿ ಪ್ಯಾಸೆಂಜರ್ ರೈಲು, ಹುಬ್ಬಳ್ಳಿ- ಮುಂಬೈ (ವಾರಕ್ಕೊಮ್ಮೆ) ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ಚಿಕ್ಕಮಗಳೂರು-ಯಶವಂತಪುರ ಫಾಸ್ಟ್ ಪ್ಯಾಸೆಂಜರ್ ರೈಲಿಗೆ ಚಿಕ್ಕಮಗಳೂರು ರೈಲು ನಿಲ್ದಾಣದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಚಾಲನೆ ನೀಡಲಿದ್ದಾರೆ.