ಕಂಬಿ ಕದಿಯಲು ಬಂದಿದ್ದ ಕಳ್ಳರ ಮೇಲೆ ಗುಂಡಿನ ದಾಳಿ
ಕಬ್ಬಿಣದ ಕಂಬಿಗಳನ್ನು ಕದಿಯಲು ಬಂದಿದ್ದ ಕಳ್ಳರ ಮೇಲೆ ಸೆಕ್ಯೂರಿಟಿ ಗಾರ್ಡ್‌ಗಳು ಗುಂಡು ಹಾರಿಸಿರುವ...
ಬೆಂಗಳೂರು: ಕಬ್ಬಿಣದ ಕಂಬಿಗಳನ್ನು ಕದಿಯಲು ಬಂದಿದ್ದ ಕಳ್ಳರ ಮೇಲೆ ಸೆಕ್ಯೂರಿಟಿ ಗಾರ್ಡ್‌ಗಳು ಗುಂಡು ಹಾರಿಸಿರುವ ಘಟನೆ ನಗರದ ದೊಮ್ಮಸಂದ್ರದಲ್ಲಿ ನಡೆದಿದೆ.
ನಗರದ ದೊಮ್ಮಸಂದ್ರದಲ್ಲಿರುವ ನಾರಾಯಣ ಲೈಔಟ್‌ನಲ್ಲಿ ನಿನ್ನೆ ರಾತ್ರಿ ಈ ಘಟನೆ ಸಂಭವಿಸಿದೆ.
ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಕಬ್ಬಿಣದ ಕಂಬಿಗಳನ್ನು ಕದಿಯಲು ಕಳ್ಳರು ಬಂದಿದ್ದರು. ಈ ವೇಳೆ ಅಲ್ಲೇ ಸೆಕ್ಯೂರಿಟಿ ಗಾರ್ಡ್‌ಗಳಾಗಿದ್ದ ಸಂತೋಷ್ ಮತ್ತು ಉತ್ತಪ್ಪ ಕಳ್ಳರನ್ನು ಓಡಿಸಲು ಯತ್ನಿಸಿದ್ದಾರೆ. ಕಳ್ಳರು ಗಾರ್ಡ್‌ಗಳ ಮೇಲೆ ಕಲ್ಲುಗಳನ್ನು ಎಸೆದು ದಾಳಿ ಮಾಡಿದ್ದಾರೆ. ಹಾಗಾಗಿ, ಸೆಕ್ಯೂರಿಟಿಗಳು ಕಳ್ಳರ ಮೇಲೆ ಗುಂಡು ಹಾರಿಸಿದ್ದಾರೆ.
ಘಟನೆಯಲ್ಲಿ ಕದಿಯಲು ಬಂದಿದ್ದ ಕಿಶೋರ್ ಎಂಬುವವನು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.