ಕೇಂದ್ರೀಯ ಸದನ: ಕನ್ನಡಕ್ಕಿಲ್ಲ ಸ್ಪಂದನ
ಸರ್ಕಾರಿ ಕಚೇರಿ ಎಂಬುದಕ್ಕೆ ಅಪವಾದವೆಂಬಂತೆ ಇರುವ ಇದು ಬೆಂಗಳೂರಿನ ಕೋರಮಂಗಲದ ಕೇಂದ್ರೀಯ ಸದನದಲ್ಲಿ ...
ಬೆಂಗಳೂರು: ಸರ್ಕಾರಿ ಕಚೇರಿ ಎಂಬುದಕ್ಕೆ ಅಪವಾದವೆಂಬಂತೆ ಇರುವ ಇದು ಬೆಂಗಳೂರಿನ ಕೋರಮಂಗಲದ ಕೇಂದ್ರೀಯ ಸದನದಲ್ಲಿ ಎಲ್ಲವೂ ಸರಿ ಇದೆ ಎಂಬುದು ಸತ್ಯ. ಆದರೆ, ಕನ್ನಡ ಮಾತ್ರ ಇಲ್ಲಿ ಹಿಂದೆ, ಹಿಂದಿ ಎಲ್ಲಕ್ಕಿಂತ ಮುಂದೆ. ದಕ್ಷಿಣವೋ, ಉತ್ತರವೋ ಕೇಂದ್ರ ಸರ್ಕಾರದ ಕಚೇರಿಗಳು ಅಂದ್ರೆ ಅಲ್ಲಿ ಹಿಂದಿ ಭಾಷಿಕರದ್ದೇ ದರ್ಬಾರು. ಕೇಂದ್ರೀಯ ಸದನದಲ್ಲೂ ಸತ್ಯ.
ಕೇಂದ್ರೀಯ ಸದನದಲ್ಲಿ ಹಿಂದಿ ಭಾಷಿಕರ ಸಂಖ್ಯೆ ಶೆ.85ರಷ್ಟು ಉಳಿದಂತೆ ಕನ್ನಡ ಹಾಗೂ ತಮಿಳು ಮಾತನಾಡುವವರು ತಲಾ ಶೇ.5ರಷ್ಟು. ಕೇಂದ್ರ ಸರ್ಕಾರದ ಕಚೇರಿಗಳೆಂದ ಮೇಲೆ ಅಲ್ಲಿ ಹಿಂದಿ ಇರಲೇಬೇಕು. ಈ ಬಗ್ಗೆ ಯಾರು ಕೂಡ ತಕರಾರು ಎತ್ತಲಾರರು. ಆದರೆ, ನಿತ್ಯ ಅಲ್ಲಿಗೆ ಕೆಲಸಕಾರ್ಯಗಳ ಮೇಲೆ ಬಂದು ಹೋಗುವ ಸಾರ್ವಜನಿಕರ ಪೈಕಿ ಕನ್ನಡದವರೇ ಹೆಚ್ಚು.
ಭಾಷೆಯ ವಿಚಾರದಲ್ಲಿ ಇವರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ ಎನ್ನುವುದು ನಾವು ನಡೆಸಿದ ರಿಯಾಲಿಟಿ ಚೆಕ್‌ನಿಂದ ತಿಳಿಯಿತು. ಇಲ್ಲಿನ ಆಡಳಿತ ವ್ಯವಸ್ಥೆಯಲ್ಲಿ ಸಾರ್ವಜನಿಕರು ಮತ್ತು ಅಧಿಕಾರಿಗಳ ನಡುವೆ ಭಾಷೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ ಎನ್ನುವುದು ನಾವು ನಡೆಸಿದ ರಿಯಾಲಿಟಿ ಚೆಕ್‌ನಿಂದ ತಿಳಿಯಿತು. ಇಲ್ಲಿನ ಆಡಳಿತ ವ್ಯವಸ್ಥೆಯಲ್ಲಿ ಸಾರ್ವಜನಿಕರು ಮತ್ತು ಅಧಿಕಾರಿಗಳ ನಡುವೆ ಭಾಷೆ ಸಾಕಷ್ಟು ತೊಡಕುಂಟು ಮಾಡಿದೆ.