ಡಿಸಿಎಂ ವಿಚಾರ ಹೈಕಮಾಂಡ್ ಜತೆ ಚರ್ಚಿಸುವೆ
ದೆಹಲಿಗೆ ಹೋಗ್ತಾ ಇದ್ದೇನೆ, ಆದರೆ ಸಂಪುಟ ವಿಸ್ತರಣೆ ಚರ್ಚೆಗೆ ಅಲ್ಲ...! ಸುದ್ದಿಗಾರರು ದೆಹಲಿ ಭೇಟಿ...
ಬೆಂಗಳೂರು: ದೆಹಲಿಗೆ ಹೋಗ್ತಾ ಇದ್ದೇನೆ, ಆದರೆ ಸಂಪುಟ ವಿಸ್ತರಣೆ ಚರ್ಚೆಗೆ ಅಲ್ಲ...!
ಸುದ್ದಿಗಾರರು ದೆಹಲಿ ಭೇಟಿ ಬಗ್ಗೆ ಪದೇ ಪದೆ ಪ್ರಶ್ನಿಸಿದಾಗ ತುಸು ತಾಳ್ಮೆ ಕಳೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿ ಉತ್ತರಿಸಿದರು.
ಸಂಪುಟ ವಿಸ್ತರಣೆ ದೆಹಲಿಯಲ್ಲಿ ನಡೆಯುವುದಿಲ್ಲ ಇಲ್ಲೇ ಆಗುತ್ತದೆ. ಹೀಗಾಗಿ ಇದಕ್ಕೂ ದೆಹಲಿ ಭೇಟಿಗೂ ಸಂಬಂಧವಿಲ್ಲ ಎನ್ನುವ ಮೂಲಕ ಹೊಸ ತಿರುವು ನೀಡಿದ್ದಾರೆ. ಎರಡು ತಿಂಗಳಿಂದ ಹೈಕಮಾಂಡ್ ಭೇಟಿ ಸಾಧ್ಯವಾಗಿರಲಿಲ್ಲ. ಹೈಕಮಾಂಡ್ ನನಗೆ ಬುಲಾವ್ ನೀಡಿಲ್ಲ. ಜತೆಗೆ ಕಾರ್ಯಕ್ರಮವೊಂದಕ್ಕೆ ರಾಷ್ಟ್ರಪತಿಯವರನ್ನು ಆಹ್ವಾನಿಸಬೇಕಿದೆ. ಇದು ಬಿಟ್ಟರೆ ದೆಹಲಿ ಭೇಟಿಗೆ ವಿಶೇಷ ಅರ್ಥವಿಲ್ಲ ಎಂದರು.
ಡಾ.ಜಿ. ಪರಮೇಶ್ವರ್ಗೆ ಉಪಮುಖ್ಯಮಂತ್ರಿ ಹುದ್ದೆ ಬಗೆಗಿನ ಪ್ರಶ್ನೆಗೆ ಈ ವಿಚಾರದಲ್ಲಿ ಯಾವುದೇ ವಿವಾದವಿಲ್ಲ. ಇದು ಮಾಧ್ಯಮ ಸೃಷ್ಟಿ. ಈ ಬಗ್ಗೆ ನಾನು ಯಾರ ಜತೆಯೂ ಚರ್ಚಿಸಿಲ್ಲ ಎಂದರು.
ಸದನ ಸಮಿತಿಗೆ ಡಿಕೆಶಿ
ಇಂಧನ ಸಚಿವ ಡಿ.ಕೆ ಶಿವಕುಮಾರ್ ಅಧ್ಯಕ್ಷತೆಯಲ್ಲೇ ವಿದ್ಯುತ್ ಖರೀದಿ ಮತ್ತು ಉತ್ಪಾದನೆ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ಸದನ ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಗ್ಗೆ ಈಗಾಗಲೇ ಸಿದ್ಧತೆ ಆರಂಭವಾಗಿದೆ. ಸದ್ಯದಲ್ಲೇ ನಿಯಮ ಮತ್ತು ವ್ಯಾಪ್ತಿ ನಿಗದಿ ಮಾಡಿ ಸದಸ್ಯರ ನೇಮಕ ಮಾಡುತ್ತೇವೆ ಎಂದು ತಿಳಿಸಿದರು.