ಶಂಕರ ಕಣ್ಣಿನ ಆಸ್ಪತ್ರೆಯಿಂದ ನೇತ್ರದಾನ ಬಗ್ಗೆ ಜನ ಜಾಗೃತಿ
ಬೆಂಗಳೂರು: ನೇತ್ರದಾನ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ “ಲೆಟ್ ದೆಮ್ ಸೀ” ಎಂಬ ಸ್ಪರ್ಧೆಯನ್ನು ಪ್ರೆಸ್ಕ್ಲಬ್ನಲ್ಲಿ ಶಂಕರ ಕಣ್ಣಿನ ಆಸ್ಪತ್ರೆಯು ಆಯೋಜಿಸಿತ್ತು.
ಭಾರತದ ಜನತೆಯಲ್ಲಿ ದೃಷ್ಟಿ ಆರೋಗ್ಯವನ್ನು ಹೆಚ್ಚಿಸುವ ಹಾಗೂ ಅನಗತ್ಯ ದೃಷ್ಟಿ ಮಾಂದ್ಯತೆಯಿಂದ ಅವರನ್ನು ಪಾರುಮಾಡುವ ಉದ್ದೇಶದಿಂದಾಗಿ “ಲೆಟ್ ದೆಮ್ ಸೀ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎಂದು ಶಂಕರ ಕಣ್ಣಿನ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ವೈ ಉಮೇಶ್ ಹೇಳಿದ್ದಾರೆ.
ದೃಷ್ಟಿ ಮಾಂದ್ಯತೆ ಅಭಿವೃದ್ಧಿಹೊಂದುತ್ತಿರುವ ದೇಶಗಳಲ್ಲಿರುವ ಒಂದು ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ. ಕಣ್ಣಿನ ಪೊರೆ ಮತ್ತು ಕಾರ್ನಿಯಾಗೆ ಸಂಬಂಧಿಸಿದ ರೋಗಗಳು ಇನ್ನೂ ಅಭಿವೃದ್ಧಿ ಹೊಂದದ ದೇಶಗಳಲ್ಲಿರುವ ದೃಷ್ಟಿ ಮಾಂದ್ಯತೆಗೆ ಪ್ರಮುಖ ಕಾರಣಗಳಾಗಿವೆ
ಭಾರತದಲ್ಲಿ ಒಂದು ಅಂದಾಜಿನ ಪ್ರಕಾರ ಕಾರ್ನಿಯಾಗೆ ಸಂಬಂಧಿಸಿದ ರೋಗಗಳ ಕಾರಣದಿಂದಾಗಿ ಸುಮಾರು 6.8 ಮಿಲಿಯನ್ ಜನರು ಕನಿಷ್ಟ ಒಂದು ಕಣ್ಣಿನ ಅರೆ ಮಾಂದ್ಯತೆಯನ್ನು ಹೊಂದಿದ್ದಾರೆ. ಅವರಲ್ಲಿ, ಸುಮಾರು ಒಂದು ಮಿಲಿಯನ್ ಜನರು ಎರಡೂ ಕಣ್ಣಿನ ದೋಷ ಹೊಂದಿದ್ದಾರೆ. 2020 ರ ಹೊತ್ತಿಗೆ ಒಂದು ಕಣ್ಣಿನ ಅರೆ ಮಾಂದ್ಯತೆಯನ್ನು ಹೊಂದಿರುವ ಜನರ ಸಂಖ್ಯೆ 10.6 ಗೆ ಏರುವ ನಿರೀಕ್ಷೆಯಿದೆ ಎಂದರು.
"ಪ್ರಸ್ತುತ 1,00,000 ಕಾರ್ನಿಯಾಗಳ ಅಗತ್ಯವಿದ್ದು, ಭಾರತಾದ್ಯಂತ ಸಂಗ್ರಹ ಮಾಡಿರುವ ಕಾರ್ನಿಯಾಗಳ ಸಂಖ್ಯೆಯು ಅಗತ್ಯದ ಅರ್ಧಕ್ಕಿಂತ ಕಡಿಮೆ ಇದೆ. ಆದ್ದರಿಂದಾಗಿ, ನೇತ್ರದಾನದ ಕುರಿತು ಸಂಘಟಿತ ಪ್ರಚಾರದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ"
ಈ ಸಂದರ್ಭದಲ್ಲಿ ಚಿತ್ರ ನಿರ್ದೇಶಕ ಪವನ್ ಒಡೆಯರ್, ಶಂಕರ ಕಣ್ಣಿನ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ವೈ.ಉಮೇಶ್ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ವಿಕ್ರಮ್ ಚೌಧರಿ ಉಪಸ್ಥಿತರಿದ್ದರು.
ಹೆಚ್ಚಿನ ವಿವರಕ್ಕೆ: ಕೆ2 ಕಮ್ಯೂನಿಕೇಶನ್ಸ್ ಪ್ರೈ.ಲಿ. ಶಿಫಾಲಿ ಪೂಜಾರಿ / ಉಮಾಶಂಕರ್ ಶರ್ಮಾ ಮೊ: 91 9964026154 / 9845989228
ಇಮೇಲ್: shipali.poojary@k2communications.in