ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಪಾಸ್‌ಪೋರ್ಟ್ ಅರ್ಹತೆ ಅವಧಿ 10 ವರ್ಷ

ಪಾಸ್‌ಪೋರ್ಟ್ ಅರ್ಹತೆ ಅವಧಿಯನ್ನು ವಿದೇಶಾಂಗ ಸಚಿವಾಲಯದ ಮಾರ್ಗಸೂಚಿಯ ನುಸಾರ...

Mainashree
Updated On : 4 Sept 2014, 11:06 am

ಬೆಂಗಳೂರು: ಪಾಸ್‌ಪೋರ್ಟ್ ಅರ್ಹತೆ ಅವಧಿಯನ್ನು ವಿದೇಶಾಂಗ ಸಚಿವಾಲಯದ ಮಾರ್ಗಸೂಚಿಯ ನುಸಾರ ಈಗ ಹತ್ತು ವರ್ಷಗಳಿಗೆ ಮಿತಿಗೊಳಿಸಲಾಗಿದೆ. ಇದರ ಆಧಾರದಲ್ಲಿಯೇ ಪಾಸ್‌ಪೋರ್ಟ್ ವಿತರಿಸಲಾಗುತ್ತಿದೆ ಎಂದು ಪ್ರಾದೇಶಿಕ ಪಾಸ್ ಪೋರ್ಟ್ ಅಧಿಕಾರಿ ಪಿ.ಎಸ್ ಕಾರ್ತಿಕೇಯನ್ ತಿಳಿಸಿದ್ದಾರೆ.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಸ್‌ಪೋರ್ಟ್ ವಿತರಣೆಯಲ್ಲಿ ವಿದೇಶಾಂಗ ಸಚಿವಾಲಯ ಕೈಗೊಂಡ ಹಲವು ಸುಧಾರಿತ ಕಾರ್ಯಕ್ರಮಗಳನ್ನು ವಿವರಿಸಿದರು.

ಪಾಸ್‌ಪೋರ್ಟ್ ಅರ್ಹತೆ ಅವಧಿ 20 ವರ್ಷಗಳಿಗೆ ಮಿತಿಗೊಳಿಸಲಾಗಿತ್ತು. ಆದರೆ, ಪಾಸ್‌ಪೋರ್ಟ್ ಸೇವೆಯಲ್ಲಿ ಇನ್ನಷ್ಟು ಪಾರದರ್ಶಕತೆಯನ್ನು ಕಾಪಾಡುವ ಉದ್ದೇಶದಿಂದ ಹತ್ತು ವರ್ಷಗಳಿಗೆ ಮಿತಿಗೊಳಿಸಲಾಗಿದೆ. ಈಗಾಗಲೇ 20 ವರ್ಷಗಳ ಅವಧಿಯ ಮಿತಿಗೆ ಪಾಸ್‌ಪೋರ್ಟ್ ಹೊಂದಿರುವವರು 2015ರ ನವೆಂಬರ್ ಒಳಗೆ ತಮ್ಮ ಕಾರ್ಡ್‌ಗಳನ್ನು ಇಲಾಖೆಗೆ ಒಪ್ಪಿಸಿ, ಹೊಸದಾಗಿ ಪಾಸ್‌ಪೋರ್ಟ್ ಹೊಂದುವುದು ಕಡ್ಡಾಯವಾಗಿದೆ ಎಂದರು.

ಪಾಸ್‌ಪೋರ್ಟ್ ಸೇವೆಯಲ್ಲಿನ ಪೊಲೀಸ್ ಪರಿಶೀಲನೆ ಅವಧಿಯನ್ನು ಈಗಾಗಲೇ 40 ದಿನಗಳಿಗೆ ಇಳಿಸಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಮತ್ತೆ 21 ದಿನಗಳಿಗೆ ಇಳಿಕೆ ಮಾಡುವ ಚಿಂತನೆ ಇದೆ. ಅಲ್ಲದೇ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪ್ರತ್ಯೇಕವಾಗಿ ಪಾಸ್‌ಪೋರ್ಟ್ ಘಟಕ ತೆರೆಯುವ ಬಗ್ಗೆ ಮಾತುಕತೆ ನಡೆಸಲಾಗಿದೆ. ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ತಮ್ಮ ಕಚೇರಿ ಅಗತ್ಯಕ್ರಮಗಳನ್ನು ಕೈಗೊಳ್ಳಲಿದೆ ಎಫ್‌ಕೆಸಿಸಿಐ ಅಹವಾಲಿಗೆ ಅವರು ಪ್ರತಿಕ್ರಿಯಿಸಿದರು.

ದೇಶದಲ್ಲಿ 37 ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗಳಿವೆ. ಈ ಪೈಕಿ ಬೆಂಗಳೂರು ಪ್ರಾದೇಶಿಕ ಕಚೇರಿಯು ಪಾಸ್‌ಪೋರ್ಟ್ ವಿತರಣೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಗುಲ್ಬರ್ಗದಲ್ಲಿರುವ ಪಾಸ್‌ಪೋರ್ಟ್ ಅರ್ಜಿ ಸಂಗ್ರಹ ಕೇಂದ್ರವನ್ನು ಇಷ್ಟರಲ್ಲಿಯೇ ಮಿನಿ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನಾಗಿ ಪರಿವರ್ತಿಸಲಾಗುವುದು. ಹಿರಿಯ ನಾಕರಿಕರು, ವಿಕಲಚೇತನರು, ಅತಿ ಗಣ್ಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಅರ್ಜಿ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಆನ್‌ಲೈನ್ ಮೂಲಕ ಮಾತ್ರವಲ್ಲದೆ, ದೂರವಾಣಿ ಕರೆ ಮಾಡಿಯೂ ಮಾಹಿತಿ ಪಡೆಯುವ ವ್ಯವಸ್ಥೆ ಇದೆ ಎಂದರು. ಎಫ್‌ಕೆಸಿಸಿಐ ಅಧ್ಯಕ್ಷ ಸಂಪತ್ ರಾಮನ್ ಸಾರ್ವಜನಿಕರು ಅನುಭವಿಸುವ ತೊಂದರೆಗಳನ್ನು ವಿವರಿಸಿದರು. ಎಫ್‌ಕೆಸಿಸಿಐ ಉಪಾಧ್ಯಕ್ಷ ದಿನೇಶ್, ಪದಾಧಿಕಾರಿಗಳಾದ ಸುಮಿತ್ರಾ ಅಯ್ಯಂಗಾರ್, ಎಂ.ಎಂ ಹರೀಶ್ ತಲ್ಲಂ ಆರ್. ದ್ವಾರಕನಾಥ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement