ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಕಾಳಿಂಗರಾವ್ ಹೆಸರಲ್ಲಿ ರಾಜ್ಯ ಪ್ರಶಸ್ತಿ: ಉಮಾಶ್ರೀ ಭರವಸೆ

ಸುಗಮ ಸಂಗೀತ ಕ್ಷೇತ್ರದ ಮೇರು ಕಳಸ ಪಿ.ಕಾಳಿಂಗರಾವ್ ಹೆಸರಿನಲ್ಲಿ ಶ್ರೇಷ್ಠ ಗಾಯಕರಿಗೆ ಪ್ರತಿ ವರ್ಷ ಸರ್ಕಾರವೇ...

Mainashree
Updated On : 7 Sept 2014, 12:31 pm

ಬೆಂಗಳೂರು: ಸುಗಮ ಸಂಗೀತ ಕ್ಷೇತ್ರದ ಮೇರು ಕಳಸ ಪಿ.ಕಾಳಿಂಗರಾವ್ ಹೆಸರಿನಲ್ಲಿ ಶ್ರೇಷ್ಠ ಗಾಯಕರಿಗೆ ಪ್ರತಿ ವರ್ಷ ಸರ್ಕಾರವೇ ರಾಜ್ಯ ಪ್ರಶಸ್ತಿ ನೀಡುವ ಸಂಬಂಧ ಚಿಂತನೆ ನಡೆಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಪಿ.ಕಾಳಿಂಗರಾವ್ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಕಾಳಿಂಗರಾವ್ ಹಾಡಿದ ವಿವಿಧ ಗೀತೆಗಳ ಸಿ.ಡಿ, ಅವರ ಜೀವನ ಸಾಧನೆಯ ಕೃತಿ ಹಾಗೂ ಸಾಕ್ಷ್ಯ ಚಿತ್ರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಕಾಳಿಂಗರಾವ್ ಸಂಗೀತ ಕ್ಷೇತ್ರದ ದಿಗ್ಗಜರು. ನಾಡಿನ ಸಂಗೀತ ಕ್ಷೇತ್ರಕ್ಕೆ ಹೊಸತನ ನೀಡಿದ ಆದ್ಯ ಪ್ರವರ್ತಕರು. ಅವರ ಹೆಸರಲ್ಲಿ ಸರ್ಕಾರವೇ ಪ್ರಶಸ್ತಿ ನೀಡಬೇಕೆಂಬುದು ಅವರ ಅಭಿಮಾನಿಗಳ ಬೇಡಿಕೆ ಆಗಿದೆ. ಈ ಬಗ್ಗೆ ಹಿರಿಯರು, ಸಂಗೀತ ಕ್ಷೇತ್ರದ ಗಣ್ಯರೊಂದಿಗೆ ಚರ್ಚೆ ನಡೆಸಿ, ಅದಕ್ಕೊಂದು ಸ್ಪಷ್ಟ ರೂಪ ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement