ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಜಯಲಲಿತಾ ಕೇಸ್‌ಗೆ ರು.2.87 ಕೋಟಿ ವೆಚ್ಚ

ತಮಿಳುನಾಡು ಸಿಎಂ ಜಯಲಲಿತಾ, ಆಪ್ತರ ವಿರುದ್ಧದ ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಪ್ರಕರಣ ಚೆನ್ನೈನಿಂದ ಬೆಂಗಳೂರಿಗೆ...

Mainashree
Updated On : 7 Sept 2014, 9:36 am

ಬೆಂಗಳೂರು: ತಮಿಳುನಾಡು ಸಿಎಂ ಜಯಲಲಿತಾ, ಆಪ್ತರ ವಿರುದ್ಧದ ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಪ್ರಕರಣ ಚೆನ್ನೈನಿಂದ ಬೆಂಗಳೂರಿಗೆ ವರ್ಗಾವಣೆಯಾದ ಬಳಿಕ ವಿಚಾರಣೆಗಾಗಿ ಕಳೆದ ಹತ್ತು ವರ್ಷಗಳಲ್ಲಿ ರಾಜ್ಯ ಸರ್ಕಾರದ ಬೊಕ್ಕಸದಿಂದ ರು.2 ಕೋಟಿ 87 ಲಕ್ಷ ವೆಚ್ಚವಾಗಿದೆ.

ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅನ್ವಯ ಸಾಮಾಜಿಕ ಹೋರಾಟಗಾರ ಟಿ.ನರಸಿಂಹಮೂರ್ತಿ ಅವರು ಪಡೆದ ಮಾಹಿತಿಯಿಂದ ಈ ವಿಚಾರ ಬಹಿರಂಗವಾಗಿದೆ.

ಜಯಲಲಿತಾ ವಿರುದ್ಧದ ರು.66.65 ಕೋಟಿ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ಮೇಲೆ ಯಾವುದೇ ಪರಿಣಾಮ ಹಾಗೂ ಒತ್ತಡ ಬೀಳಬಾರದು ಎನ್ನುವ ಕಾರಣಕ್ಕೆ ಸುಪ್ರೀಂ ಕೋರ್ಟ್, ಈ ಪ್ರಕಣರಣವನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ 2003ರಲ್ಲಿ ವರ್ಗಾವಣೆಗೊಳಿಸಿತ್ತು. 2004-05ರಿಂದ ಪ್ರಕರಣದ ವಿಚಾರಣೆ ಆರಂಭವಾಗಿದ್ದು 2004-05ರಲ್ಲಿ ರು.20.57 ಲಕ್ಷ ವೆಚ್ಚವಾಗಿತ್ತು. 2005-06ರಲ್ಲಿ 35.07 ಲಕ್ಷ ವೆಚ್ಚವಾಗಿದೆ. ಹೀಗೆ ವರ್ಷದಿಂದ ವರ್ಷಕ್ಕೆ ವೆಚ್ಚ ಹೆಚ್ಚು ಕಡಿಮೆಯಾಗುತ್ತಾ ಬಂದಿದ್ದು 2013-14ನೇ ನಾಲಿನಲ್ಲಿ ಬರೋಬ್ಬರಿ ರು.86.50 ಲಕ್ಷ ವೆಚ್ಚವಾಗಿದೆ.

ವಿಶೇಷ ನ್ಯಾಯಾಲಯ ಸ್ಥಾಪನೆ, ಸಾರ್ವಜನಿಕ ಅಬಿಯೋಜಕರು, ಸಹಾಯಕ ಸಾರ್ವಜನಿಕ ಅಭಿಯೋಜಕರು, ಸಿಬ್ಬಂದಿ ಸಂಬಳ, ಪ್ರತಿ ಬಾರಿ ವಿಚಾರಣೆ ಇದ್ದಾಗ ಚೆನ್ನೈನಿಂದ ಬೆಂಗಳೂರಿಗೆ ದಾಖಲೆಗಳ ವರ್ಗಾವಣೆ, ವಾಹನಗಳ ಡೀಸೆಲ್ ವೆಚ್ಚ, ದೂರವಾಣಿ ವೆಚ್ಚ, ಫರ್ನಿಚರ್‌ಗಳು, ತಮಿಳಿನಿಂದ ಕನ್ನಡ ಹಾಗೂ ಇಂಗ್ಲಿಷ್‌ಗೆ ತರ್ಜುಮೆ ಹಾಗೂ ಇತರ ವೆಚ್ಚಳಿಗಳಿಗಾಗಿ ರಾಜ್ಯ ಸರ್ಕಾರ ರು.2.87 ಕೋಟಿ ವ್ಯಯಿಸಿದೆ. ಈ ಪೈಕಿ ಸಾರ್ವಜನಿಕ ಅಭಿಯೋಜಕರು ಹಾಗೂ ಸಹಾಯಕರ ವೆಚ್ಚವನ್ನು ಮಾತ್ರ ತಮಿಳುನಾಡು ಸರ್ಕಾರ ಭರಿಸಲಿದ್ದು ಅದರ ಮೊತ್ತ ರು.1.46 ಕೋಟಿ ಆಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement