ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಇಟ್ಟೆ ಬಣ್ಣದ ಮೊಟ್ಟೆ, ಆದ್ರೂ ಕೊಂದೇ ಬಿಟ್ಟೆ!

ಕೇಡುಗಾಲಕ್ಕೆ ಕೋಳಿ ಚಿನ್ನದ ಮೊಟ್ಟೆ ...

Mainashree
Updated On : 8 Sept 2014, 1:22 am

-ದಿನಕ್ಕೊಂದು ಬಣ್ಣದ ಮೊಟ್ಟೆ ಇಡುತ್ತಿತ್ತು ಕೋಳಿ, ಬಲಿಕೊಟ್ಟ ಮಾಲೀಕ ಜ್ಯೋತಿಷಿ ಮಾತು ಕೇಳಿ
ಚಾಮರಾಜನಗರ:
ಕೇಡುಗಾಲಕ್ಕೆ ಕೋಳಿ ಚಿನ್ನದ ಮೊಟ್ಟೆ ಇಡುತ್ತೆ ಎಂಬ ಮಾತು ಕೇಳಿರಬಹುದು. ಇಲ್ಲೊಂದು ಕೋಳಿ ಬಣ್ಣದ ಮೊಟ್ಟೆ ಇಟ್ಟು ತನಗೆ ತಾನೇ ಕೇಡುಗಾಲ ತಂದುಕೊಂಡಿದೆ!

ಚಾಮರಾಜನಗರ ತಾಲೂಕಿನ ಬಿಸಲವಾಡಿ ಗ್ರಾಮದ ಕೋಳಿ ಹಸಿರು, ಕಡುಗೆಂಪು ಮತ್ತು ಬಿಳಿ ಮೊಟ್ಟೆಯನ್ನಿಟ್ಟು ಎಲ್ಲರನ್ನೂ ಬೆರಗಾಗುವಂತೆ ಮಾಡಿದೆ. ಆದರೆ ಕೋಳಿ ಮಾಲೀಕ ಜ್ಯೋತಿಷಿಗಳ ಮಾತು ನಂಬಿ ಭೀತನಾಗಿ ಕೋಳಿಯನ್ನೇ ಕೊಂದು ಹಾಕಿದ್ದಾನೆ.

ಬಿಸಲವಾಡಿಯ ಸಿದ್ದರಾಮಯ್ಯ- ಭವಾನಿ ದಂಪತಿ ಉಪ ಕಸುಬಾ3ಗಿ ನಾಟಿ ಕೋಳಿ ಸಾಕಣೆ ಮಾಡುತ್ತಿದ್ದರು. 20್ಛ30 ಕೋಳಿಗಳು ಇವರ ಬಳಿ ಸದಾ ಇರುತ್ತವೆ. ಕೋಳಿ ಸಾಕಣೆಯಲ್ಲಿ ಅನುಭವ ಹೊಂದಿದ್ದ ಈ ಕುಟುಂಬ ಕೋಳಿ ಮೊಟ್ಟೆ ಇಡುತ್ತದೆ ಎಂಬ ಸೂಚನೆ ಅರಿತು ಕೋಳಿಯ ಮೇಲೆ ಬುಧವಾರ ಬಿದಿರಿನ ಪಂಜರ ಹಾಗಿದ್ದರು. ಮರುದಿನ ಅವರಿಗೆ ಆಶ್ಚರ್ಯ ಕಾದಿತ್ತು. ಅಂದು ಗುರುವಾರ, ಕೋಳಿ ಗಡಗೆಂಪು ಮೊಟ್ಟೆ ಇಟ್ಟಿತ್ತು. ಒಂದು ದಿನ ಏನೋ ಆಗರಬಹುದು ಶುಕ್ರವಾರ ಮಾಮೂಲಿ ಮೊಟ್ಟೆ ಇಡಬಹುದು ಎಂಬ ನಿರೀಕ್ಷೆಯೂ ಹುಸಿಯಾಗಿತ್ತು. ಕುತೂಹಲದಿಂದ ಕಾದು ನೋಡಿದರೆ ಅಂದು ಕೋಳಿ ಹಸಿರು ಮೊಟ್ಟೆ ಇಟ್ಟಿತ್ತು. ಮತ್ತಷ್ಟು ಅಚ್ಚರಿಗೊಂಡ ಕುಟುಂಬದವರು ವಿಚಾರವನ್ನು ಅಕ್ಕ ಪಕ್ಕದವರಿಗೆ ತಿಳಿಸಿದರು. ಬಣ್ಣದ ಮೊಟ್ಟೆಯನ್ನು ತೊಳೆದು ನೋಡಿದರೂ ಬಣ್ಣ ಹೋಗಲಿಲ್ಲ, ಇದರ ಮರುದಿನ ಶನಿವಾರ ಮಾತ್ರ ಮಾಮೂಲಿಯಂತೆ ಬಿಳಿ ಬಣ್ಣದ ಮೊಟ್ಟೆ ಇಟ್ಟಿತ್ತು.

ಕೆಲವರು ಕೋಳಿ ಬಣ್ಣ ಬಣ್ಣದ ಮೊಟ್ಟೆ ಇಟ್ಟಿರುವುದು ಅಪಶಕುನ ಎಂದರು. ಇದರಿಂದ ಭಯಗೊಂಡ ಕುಟುಂಬದವರು ತಮಿಳುನಾಡಿನ ಮೆಟ್ಟಲವಾಡಿಯ ಜ್ಯೋತಿಷಿಯೊಬ್ಬರ ಮೊರೆ ಹೋದರು. ಜ್ಯೋತಿಷಿ ಸಹ, 'ಹೌದೌದು. ಕೋಳಿ ಬಣ್ಣ ಬಣ್ಣದ ಮೊಟ್ಟೆಯಿಟ್ಟಿರುವುದು ಕೇಡುಗಾಲಕ್ಕೆ. ಅದನ್ನು ಮನೆಯಲ್ಲಿಟ್ಟುಕೊಳ್ಳಬೇಡಿ, ಆ ಕೋಳಿಯನ್ನು ಬಲಿಕೊಟ್ಟು ರಕ್ತವನ್ನು ಮನೆ ಹೊಸಲಿಗೆ ಹಾಕಿ. ಆ ಕೋಳಿ ಇಟ್ಟ ಮೊಟ್ಟೆಯನ್ನು ಹರಿಯುವ ನೀರಿಗೆ ಬಿಟ್ಟು ಮನೆಯ ಹಿಂಬಾಗಿಲಿನಿಂದ ಪ್ರವೇಶಿಸಿ' ಎಂದು ಸಲಹೆ ನೀಡಿದರಂತೆ. ಅವರ ಮಾತು ನಂಬಿದ ಸಿದ್ದರಾಮಯ್ಯ, ಶನಿವಾರ ಸಂಜೆ ಕೋಳಿ ಬಲಿ ಕೊಟ್ಟು ಕೈತೊಳೆದುಕೊಂಡರು. ಆ ಮೂಲಕ ಸಂಶೋಧನೆಯೊಂದಕ್ಕೆ ವಸ್ತವಾಗಿದ್ದ ವಿಜ್ಞಾನಗ ವಿಸ್ಮಯವೊಂದನ್ನು ಹೂತು ಹಾಕಿದ್ದಾರೆ.

-ದೇವರಾಜು ಕಪ್ಪಸೋಗೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement