ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಪುರುಷತ್ವ ಪರೀಕ್ಷೆ: ಅಂತೂ ಹಸ್ತಮೈಥುನಕ್ಕೆ ಒಪ್ಪಿದ ನಿತ್ಯಾನಂದ

ರಾಸಲೀಲೆ ಹಾಗೂ ಲೈಂಗಿಕ ಕಿರುಕುಳದ ಆರೋಪಕ್ಕೆ ಸಂಬಂಧಿಸಿದಂತೆ ಹಸ್ತಮೈಥುನಕ್ಕೆ ಒಪ್ಪದ ಬಿಡದಿ ಮಠದ...

Mainashree
Updated On : 9 Sept 2014, 4:41 am

ಬೆಂಗಳೂರು: ರಾಸಲೀಲೆ ಹಾಗೂ ಲೈಂಗಿಕ ಕಿರುಕುಳದ ಆರೋಪಕ್ಕೆ ಸಂಬಂಧಿಸಿದಂತೆ ಹಸ್ತಮೈಥುನಕ್ಕೆ ಒಪ್ಪದ ಬಿಡದಿ ಮಠದ ಸ್ವಾಮೀಜಿ ನಿತ್ಯಾನಂದ, ಯುವತಿಯ ಮನವೊಲಿಕೆ ನಂತರ ಹಸ್ತಮೈಥುನಕ್ಕೆ ಒಪ್ಪಿದ್ದಾನೆ.

ನಗರದ ವಿಕ್ಟೋರಿಯಾ ಆಸ್ಪತ್ರೆಗೆಯಲ್ಲಿ ನಿತ್ಯಾನಂದನ ಪುರುಷತ್ವಕ್ಕೆ ಸಂಬಂಧಿಸಿದಂತೆ ನಾನಾ ಪರೀಕ್ಷೆಗಳನ್ನು ಮಾಡುತ್ತಿದ್ದು, ಆಸ್ಪತ್ರೆಯ ಪ್ರಮುಖ ವೈದ್ಯರು ಪರೀಕ್ಷೆ ನಡೆಸುತ್ತಿದ್ದಾರೆ. ಪುರುಷತ್ವ ಪರೀಕ್ಷೆಯಲ್ಲಿ ಮುಖ್ಯವಾಗಿ ಆತನ ಗುಪ್ತಾಂಗದ ಉದ್ರೋಕ ಸಾಮಥ್ಯ ಹಾಗೂ ವೃಷಣಗಳ ಸಾಮಥ್ಯವನ್ನು ತಿಳಿಯುವುದಕ್ಕಾಗಿ ವೈದ್ಯರು ಆತನಿಗೆ ಹಸ್ತ ಮೈಥುನ ಮಾಡಿಕೊಳ್ಳುವಂತೆ ಸೂಚಿಸಿದರು.

ನಾನು ಧರ್ಮಾಚರಣೆ ಸನ್ಯಾಸಿಯಾಗಿದ್ದು ಹಸ್ತಮೈಥುನ ಮಾಡಿಕೊಳ್ಳುವುದಿಲ್ಲ ಎಂದು ಹಸ್ತಮೈಥುನಕ್ಕೆ ನಿತ್ಯಾನಂದ ವಿರೋಧಿಸಿದ್ದ. ಆದರೆ ಎನ್‌ಜಿಒನ ಇಬ್ಬರು ಯುವತಿಯರು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮನವೊಲಿಸಿದ ಪರಿಣಾಮ ಕೊನೆಗೂ ನಿತ್ಯಾನಂದ ಹಸ್ತಮೈಥುನಕ್ಕೆ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿತ್ಯಾನಂದನಿಗೆ 3 ರೀತಿಯ ಪರೀಕ್ಷೆಗಳು ನಡೆದಿದ್ದು, ನಾಲ್ಕನೇಯ ಪರೀಕ್ಷೆಗೆ ವೈದ್ಯರು ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕರೆ ತಂದು ಅಲ್ಲಿ ನಿತ್ಯಾನಂದನ ಧ್ವನಿ ಪರೀಕ್ಷೆ ಸೇರಿದಂತೆ ನಾನಾ ರೀತಿಯ ಪರೀಕ್ಷೆಗೊಳಪಡಿಸಲಿದ್ದಾರೆ.





Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement