ಪುರುಷತ್ವ ಪರೀಕ್ಷೆ: ವಿಕ್ಟೋರಿಯಾ ಆಸ್ಪತ್ರೆಗೆ ನಿತ್ಯಾನಂದ ಹಾಜರ್
ಬೆಂಗಳೂರು: ರಾಸಲೀಲೆ ಹಾಗೂ ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಬಿಡದಿ ಮಠದ ಸ್ವಾಮೀಜಿ ನಿತ್ಯಾನಂದ ಸೋಮವಾರ ವಿಕ್ಟೋರಿಯಾ ಆಸ್ಪತ್ರೆಗೆ ಪುರುಷತ್ವ ಪರೀಕ್ಷೆಗೆ ಹಾಜರಾಗಿದ್ದಾನೆ.
ಈ ಮಧ್ಯೆ ಬಿಡದಿ ಆಶ್ರಮದ ಬಳಿ ನಿತ್ಯಾನಂದ ಶಿಷ್ಯಂದಿರು ಮಾಧ್ಯಮದವರ ಕಣ್ಣು ತಪ್ಪಿಸಲು ನಿತ್ಯಾನಂದ ವೇಷ ಧರಿಸಿ ನಾಟಕೀಯ ದೃಶ್ಯ ಪ್ರದರ್ಶಿಸಿದ್ದಾರೆ.
ಆಗಸ್ಟ್ 6ರಂದು ನಿತ್ಯಾನಂದ ಪುರುಷತ್ವ ಪರೀಕ್ಷೆಗೆ ಹಾಜರಾಗಬೇಕು ಎಂದು ಹೈಕೋರ್ಟ್ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ನಿತ್ಯಾನಂದ ಪರ ವಕೀಲ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯನ್ನು ವಜಾಗೊಳಿಸಿರುವ ಸುಪ್ರೀಂ ಕೋರ್ಟ್, ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದಿತ್ತು.
ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನಿತ್ಯಾನಂದ ಪುರಷತ್ವ ಪರೀಕ್ಷೆ ನಡೆಸಲೇಬೇಕು ಎಂದು ಸೂಚಿಸಿತ್ತು.
ಸುಪ್ರೀಂ ಆದೇಶದ ಮೇರೆಗೆ ಇಂದು ನಿತ್ಯಾನಂದ ಪುರುಷತ್ವ ಪರೀಕ್ಷೆಗೆ ಹಾಜರಾಗಿದ್ದಾರೆ.