ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಫೋರಮ್ ಮಾಲ್ನಲ್ಲಿ 'ಮ್ಯಾಡ್ ಇಂಡಿಯಾ ಬ್ಯಾಕ್ -ಥಾನ್'

Lingaraj Badiger
Updated On : 9 Sept 2014, 4:41 am

ಬೆಂಗಳೂರು: ಜಾಗತಿಕ ಸಾಕ್ಷರತಾ ದಿನದ ಅಂಗವಾಗಿ ದೇಶದಲ್ಲಿನ ಅನಕ್ಷರತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮಕ್ಕಳ ಕಲ್ಯಾಣದ ಸ್ವಯಂಸೇವಾ ಸಂಘಟನೆಯ ಯುವ ಸ್ವಯಂಸೇವಕರು ಮೇಕ್ ಎ ಡಿಫರೆನ್ಸ್ (ಮ್ಯಾಡ್) ಎಂಬ ಬ್ಯಾಕ್ -ಥಾನ್ ಅನ್ನು ಬೆಂಗಳೂರಿನಲ್ಲಿ ಕೋರಮಂಗಲದ ಫೋರಮ್ ಮಾಲ್ನಲ್ಲಿ ಆಯೋಜಿಸಲಾಗಿತ್ತು.

ಸಾಮಾನ್ಯ ಜನಪ್ರಿಯ ಮ್ಯಾರಥಾನ್ನಂತಲ್ಲದ ಈ ಬ್ಯಾಕ್ -ಥಾನ್ ಒಂದು ಕಾರ್ಯಕ್ರಮವಾಗಿದ್ದು, ಭಾಗವಹಿಸಿದವರು ಇಲ್ಲಿ ವಿಶಿಷ್ಟ ರೀತಿಯಲ್ಲಿ ಹಿಂದಕ್ಕೆ ನಡೆದರು. ಕ್ರೀಡಾ ಕಾರ್ಯಕ್ರಮಕ್ಕಿಂತ ಹೆಚ್ಚಾಗಿ ಇದೊಂದು ಸಾಮಾಜಿಕ ಸಮ್ಮಿಲನವಾಗಿತ್ತು. ದೇಶದಲ್ಲಿ ಸದ್ಯ ಅನಕ್ಷರತೆ ಭೂತ ಕಾಡುತ್ತಿದ್ದು, ಇಂತಹ ಸಾಮಾಜಿಕ ಪಿಡುಗುಗಳನ್ನು ಹಿಂದಕ್ಕೆ ಓಡಿಸುವ ಸಂಜ್ಞೆಯನ್ನು ಈ ಹಿಮ್ಮುಖ ನಡೆಯು ಹೊಂದಿದೆ. ಇತ್ತೀಚಿನ ಸರ್ಕಾರಿ ಅಂಕಿಅಂಶಗಳ ಪ್ರಕಾರ ಪ್ರತಿ ಮೂರು ಮಕ್ಕಳಲ್ಲಿ ಒಂದು ಮಗು ಮಾತ್ರ 12ನೇ ತರಗತಿ ಪಾಸ್ ಮಾಡಲು ಶಕ್ತವಾಗಿದ್ದು, ಇನ್ನುಳಿದ ಶೇ 97ರಷ್ಟು ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಾರೆ.

ಮಕ್ಕಳ ಶಿಕ್ಷಣಕ್ಕಾಗಿನ ಹೋರಾಟಗಾರರು ಮತ್ತು ಸಮಾನ ಮನೋಸ್ಥಿತಿಯ ನೂರಾರು ನಾಗರಿಕರು ಈ ಬ್ಯಾಕ್ -ಥಾನಲ್ಲಿ ಭಾಗವಹಿಸಿದರು. ಸಮಾನ ಮನಸ್ಕ ಶಾಪರ್ಗಳು ಮತ್ತು ಇತರ ಗ್ರಾಹಕರೂ ಬ್ಯಾಕಥಾನ್ಗೆ ಬೆಂಬಲ ನೀಡಿ ಭಾಗವಹಿಸಿದರು.

ಮ್ಯಾಡ್ ಬಗ್ಗೆ   - ಮೇಕ್ ಎ ಡಿಫರೆನ್ಸ್ (ಬದಲಾವಣೆ ತನ್ನಿ) ಎಂಬುದು ಅನಾಥಾಶ್ರಮದಲ್ಲಿ ಮತ್ತು ರಸ್ತೆ ಬದಿಯಲ್ಲಿ ಶೆಲ್ಟರುಗಳಲ್ಲಿ ಬೆಳೆಯುವ ಮಕ್ಕಳ ಸಾಮಥ್ರ್ಯ ಮತ್ತು ಅವರ ಸಮಗ್ರ ಸಾಧ್ಯತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಸಂಘಟನೆಯಾಗಿದೆ.
ವಿವಿಧ ಶ್ರೇಣಿಯ ಸ್ವಯಂಸೇವಕರು ಚಾಲ್ತಿಯಲ್ಲಿದ್ದು ಶಿಕ್ಷಣ ಬೆಂಬಲಿಸುವ ಶಿಕ್ಷಕರು (ಇವರು ಹತ್ತನೇ ವರ್ಗದ ಮಕ್ಕಳಿಗೆ ಇಂಗ್ಲಿಷ್, ಗಣಿತ ಮತ್ತು ವಿಜ್ಞಾನವನ್ನು ಬೋಧಿಸುತ್ತಾರೆ), ಪ್ರೊಪೆಲ್ ಸ್ವಯಂಸೇವಕರು (ಉತ್ತಮ ವೃತ್ತಿಜೀವನವನ್ನು ಆರಿಸಿಕೊಳ್ಳಲು ಮಕ್ಕಳಿಗೆ ಮಾರ್ಗದರ್ಶನ ಮಾಡುವವರು), ಶೋಧಕ ಸ್ವಯಂಸೇವಕರು (ಮಕ್ಕಳ ವೃತ್ತಿಜೀವನದ ವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳುವವರು), ಹಣಕಾಸು ಸಂಗ್ರಹಿಸುವ ಇಂಟನರ್್ಗಳು (ಮಕ್ಕಳ ಶಿಕ್ಷಣಕ್ಕೆ ಅಗತ್ಯವಿರುವ ಹಣಕಾಸನ್ನು ಇವರು ಸಂಗ್ರಹಿಸುತ್ತಾರೆ. ಸದ್ಯ ದೇಶದ 23 ನಗರಗಳಲ್ಲಿ 2 ಸಾವಿರ ಸ್ವಯಂಸೇವಕರಿದ್ದು 5 ಸಾವಿರ ಮಕ್ಕಳಿಗೆ ನೆರವು ಒದಗಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement