ರಾಜ್ಯದ 75 ಪ್ರವಾಸಿಗರ ರಕ್ಷಣೆ
ಪ್ರವಾಹದಲ್ಲಿ ರಾಜ್ಯದ 549ಕ್ಕೂ ಹೆಚ್ಚು ಪ್ರವಾಸಿಗರು ಸಿಲುಕಿಕೊಂಡಿದ್ದು 75 ಜನರನ್ನು ರಕ್ಷಿಸಲಾಗಿದೆ...
ಬೆಂಗಳೂರು: ಪ್ರವಾಹದಲ್ಲಿ ರಾಜ್ಯದ 549ಕ್ಕೂ ಹೆಚ್ಚು ಪ್ರವಾಸಿಗರು ಸಿಲುಕಿಕೊಂಡಿದ್ದು 75 ಜನರನ್ನು ರಕ್ಷಿಸಲಾಗಿದೆ.
ಐಎಎಸ್ ಅಧಿಕಾರಿ ರಮಣ್‌ದೀಪ್ ಹಾಗೂ ದೆಹಲಿ ಕರ್ನಾಟಕ ಭವನದ ಪ್ರಾದೇಶಿಕ ಆಯುಕ್ತ ವಾಲಿಯಾ ನೇತೃತ್ವದ ತಂಡ ಜಮ್ಮು ತಲುಪಿದ್ದು, ಪರಿಹಾರ ಕಾರ್ಯ ಚುರುಕುಗೊಳಿಸಲಾಗಿದೆ.
ಈ ಅಧಿಕಾರಿಗಳ ತಂಡ ಮೊಬೈಲ್ ಸಿಮ್, ಬ್ಯಾಟರಿ ಹಾಗೂ ಇತರೆ ವಸ್ತುಗಳೊಂದಿಗೆ ತೆರಳಿದೆ. ಕನ್ನಡಿಗರನ್ನು ಸಂಪರ್ಕಿಸಿದ ತಕ್ಷಣ ಕುಟುಂಬ ವರ್ಗದವರ ಜನತೆ ಮಾತನಾಡಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಜತೆಗೆ ದೆಹಲಿಗೆ ಕರೆತರುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಆದರೆ, ಜಮ್ಮು-ಕಾಶ್ಮೀರದಲ್ಲಿ ಶೇ.80ರಷ್ಟು ವಿದ್ಯುತ್ ಕಡಿತವಾಗಿದ್ದು, ಮೊಬೈಲ್ ಸಂಪರ್ಕಕ್ಕೆ ಅಡೆಚಣೆಯಾಗಿದೆ.
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಎಲ್ಲ ಕ್ರಮ ತೆಗೆದುಕೊಂಡಿದೆ. ರಾಜ್ಯದ ಐಎಎಸ್ ಅಧಿಕಾರಿಗಳ ತಂಡ ಜಮ್ಮು ತಲುಪಿದೆ. ಅಗತ್ಯ ಬಿದ್ದರೆ ರಾಜ್ಯದ ಒಬ್ಬ ಸಚಿವರನ್ನು ಜಮ್ಮು ಕಾಶ್ಮೀರಕ್ಕೆ ಕಳುಹಿಸಿಕೊಡುತ್ತೇವೆ ಎಂದು ಹೇಳಿದ್ದಾರೆ.