ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಶ್ರೀಕೃಷ್ಣ ಮಠಕ್ಕೆ ಎಷ್ಟು ಗಂಧ ಕೊಡುತ್ತೀರಿ?

ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಎಷ್ಟು ಪ್ರಮಾಣದಲ್ಲಿ ಶ್ರೀಗಂಧ ನೀಡಲು ಸಾಧ್ಯ ಎಂದು ಮುಂದಿನ...

Mainashree
Updated On : 12 Sept 2014, 9:22 am

ಬೆಂಗಳೂರು: ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಎಷ್ಟು ಪ್ರಮಾಣದಲ್ಲಿ ಶ್ರೀಗಂಧ ನೀಡಲು ಸಾಧ್ಯ ಎಂದು ಮುಂದಿನ ವಿಚಾರಣೆ ವೇಳೆ ತಿಳಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಮಠಕ್ಕೆ ಈ ಹಿಂದೆ ರಾಜ್ಯ ಸರ್ಕಾರ ಪ್ರತಿ ವರ್ಷ 1087 ಕೆಜಿ ಶ್ರೀಗಂಧ ನೀಡುವುದನ್ನು ಸ್ಥಗಿತಗೊಳಿಸಿತು. ಇದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದಾಗ ಸರ್ಕಾರ 200 ಕೆಜೆ ಶ್ರೀಗಂಧ ನೀಡಿತ್ತು. ಆದರೆ 2008ರಿಂದ ಶ್ರೀಗಂಧ ನೀಡುವುದನ್ನು ಸರ್ಕಾರ ಮತ್ತೊಮ್ಮೆ ಸ್ಧಗಿತಗೊಳಿಸಿದೆ.

ಸರ್ಕಾರದ ಈ ಕ್ರಮದಿಂದ ಮಠ ಶ್ರೀಗಂಧದ ಅಭಾವ ಎದುರುಸುತ್ತಿದ್ದು, ಶೀಘ್ರವೇ ಗಂಧವನ್ನು ಮಠಕ್ಕೆ ವಿತರಿಸುವಂತೆ ನಿರ್ದೇಸಿಬೇಕೆಂದು ಅರ್ಜಿಯಲ್ಲಿ ಕೋರಿದ್ದಾರೆ.

ಅಲ್ಲದೇ ಹೈದರಾಲಿ ಕಾಲದಿಂದಲೂ ಶ್ರೀಕೃಷ್ಣ ಮಠಕ್ಕೆ ಶ್ರೀಗಂಧ ನೀಡುವುದು ವಾಡಿಕೆಯಾಗಿ ನಡೆದುಕೊಂಡು ಬಂದಿದ್ದು ಸರ್ಕಾರ ಏಕಾಏಕಿ ಮಠಕ್ಕೆ ಗಂಧ ನೀಡುವುದು ಸ್ಥಗಿತಗೊಳಿಸಿದೆ ಎಂದು ಪೀಠದ ಗಮನಕ್ಕೆ ತಂದರು.

ವಿಚಾರಣೆ ನಡೆಸಿದ ನ್ಯಾ.ವೇಣುಗೋಪಾಲ್ ಗೌಡ ಅವರ ಪೀಠ, ಈ ಕುರಿತು ಸರ್ಕಾರ ಸ್ಪಷ್ಟನೆ ನೀಡುವಂತೆ ಸೂಚಿಸಿ ವಿಚಾರಣೆ ಮುಂದೂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement