ಜಿಲ್ಲಾ ಸುದ್ದಿ

ಪ್ರೀತಿ ಮಾಡಿ ಕೊಲೆಯಾದರು

ಧಾರವಾಡ: ತಾಲೂಕಿನ ಶಿವಳ್ಳಿಯಲ್ಲಿ 16 ವರ್ಷದ ಬಾಲಕಿ ಹಾಗೂ 19 ವರ್ಷದ ಯುವಕನನ್ನು ಹಾಡು ಹಗಲೇ ಬರ್ಬರವಾಗಿ ಕೊಲೆ ಮಾಡಿದ ಘಟನೆ ಭಾನುವಾರ ನಡೆದಿದೆ.

ಮನೆಯವರ ವಿರೋಧದ ಮಧ್ಯೆಯೂ ಪ್ರೀತಿ ಮಾಡಿದ ಕಾರಣದಿಂದ ಗ್ರಾಮದ ನೀಲವ್ವ ಲಕ್ಕಮನವರ (16) ಹಾಗೂ ಮಹೇಶ ನಾಯ್ಕರ್ (19) ಎಂಬುವರು ಕೊಲೆಯಾದವರು. ತೀವ್ರ ಮದ್ಯ ಸೇವಿಸಿದ್ದ ಬಾಲಕಿ ಚಿಕ್ಕಪ್ಪ ರಂಗಪ್ಪ ಲಕ್ಕಮ್ಮನವರ್(48) ಬಡಿಗೆ, ಕುಡುಗೋಲಿನಿಂದ ಕೊಲೆ ಮಾಡಿ ಸದ್ಯ ಗ್ರಾಮೀಣ ಪೊಲೀಸರ ವಶದಲ್ಲಿದ್ದಾನೆ.

ಹೇಗಾಯ್ತು ಕೊಲೆ: ಎಸ್ಸೆಸ್ಸೆಲ್ಲಿ ಓದುತ್ತಿದ್ದ ನೀಲವ್ವ ಹಾಗೂ ಓದು ನಿಲ್ಲಿಸಿದ್ದ ಅದೇ ಗ್ರಾಮದ ಮಹೇಶ ಹಲವು ದಿನಗಳಿಂದ ಪ್ರೀತಿಸುತ್ತಿದ್ದರು. ನೀಲವ್ವ ಕುರುಬ ಸಮಾಜಕ್ಕೆ ಸೇರಿದ್ದರೆ ಮಹೇಶ ಎಸ್ಸಿ ಸಮುದಾಯಕ್ಕೆ ಸೇರಿದ್ದು ನೀಲವ್ವನ ಮನೆಯಿಂದ ಇವರಿಬ್ಬರ ಪ್ರೀತಿಗೆ ಅಡ್ಡಿ ಇತ್ತು. ಹಲವು ಬಾರಿ ಇಬ್ಬರಿಗೂ ಎಚ್ಚರಿಕೆ ನೀಡಲಾಗಿತ್ತು.

ಭಾನುವಾರ ಶಾಲೆಗೂ ರಜೆ ಇದ್ದ ಕಾರಣ ಗ್ರಾಮದ ಹೊರ ವಲಯದಲ್ಲಿನ ಮನೆಯಲ್ಲಿ ಇಬ್ಬರೂ ಭೇಟಿಯಾಗಿ ಮಾತನಾಡುತ್ತ ಕುಳಿತಿದ್ದಾರೆ. ಈ ವಿಷಯ ತಿಳಿದ ರಂಗಪ್ಪ ಮನೆ ಬಾಗಿಲು ಮುರಿದು ಬಡಿಗೆ ಹಾಗೂ ಕುಡಗೋಲಿನಿಂದ ಇಬ್ಬರು ಕತ್ತು ಹಾಗೂ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!