ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

'ಕತ್ತಿ' ಹುಚ್ಚ ಹುಚ್ಚ...: ವಾಟಾಳ್

ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸುತ್ತಿರುವ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಒಬ್ಬ...

Mainashree
Updated On : 15 Sept 2014, 12:23 pm

ಬೆಂಗಳೂರು: ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸುತ್ತಿರುವ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಒಬ್ಬ ಹುಚ್ಚ ಹುಚ್ಚ... ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.

ಕತ್ತಿ ದೊಡ್ಡ ಹುಚ್ಚರಾಗಿದ್ದು, ಕೂಡಲೇ ಅವರನ್ನು ನಿಮ್ಹಾನ್ಸ್ಗೆ ಸೇರಿಸಬೇಕು. ಇಲ್ಲವಾದರೇ ಹುಚ್ಚುತನ ಇನ್ನಷ್ಟು ಹೆಚ್ಚಾಗುತ್ತದೆ ಎಂದು ವಾಟಾಳ್ ತಿಳಿಸಿದ್ದಾರೆ.

ಪ್ರತ್ಯೇಕ ರಾಜ್ಯಬೇಕು ಎಂದು ಹೇಳುವ ಮೂಲಕ ಶಾಸಕ ಉಮೇಶ್ ಕತ್ತಿ ಪ್ರಚಾರ ಗಿಟ್ಟಿಸುತ್ತಿದ್ದಾರೆ ಎಂದು ವಾಟಾಳ್ ಆರೋಪಿಸಿದ್ದಾರೆ.

ಕತ್ತಿಯವರಿಗೆ ವಿಭಜನೆ ಮಾಡಲೇ ಬೇಕು ಎಂದಾದರೇ ಅವರ ಮನೆಗೆ ನಾನೇ ಒಂದು ಬನ್ನ್ನು ತೆಗೆದುಕೊಂಡು ಹೋಗುತ್ತೀನಿ. ಅದನ್ನ ಬೇಕಾದರೆ ವಿಭಜಿಸಿ ಅರ್ಧ ಅವರು ಇಟ್ಟಿಕೊಳ್ಳಲಿ, ಇನ್ನರ್ಧ ನಾನು ಇಟ್ಟಿಕೊಳ್ಳುತ್ತೇನೆ.

ಇದನ್ನು ಬಿಟ್ಟು ರಾಜ್ಯ ವಿಭಜನೆ ಮಾಡಬೇಕು ಎಂಬ ಕನಸಿದ್ದರೆ, ಅದನ್ನು ಕೈಬಿಡಬೇಕು. ಏಕೆಂದರೆ ಅದು ಸಾಧ್ಯವಾಗದ ಮಾತು ಎಂದು ವಾಟಾಳ್ ಹೇಳಿದ್ದಾರೆ.

ರಾಜಕೀಯದಲ್ಲಿ ಪ್ರಚಾರಕ್ಕಾಗಿ ಈ ರೀತಿ ಹುಚ್ಚು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಯಾವುದೇ ರೀತಿಯ ಜನತೆಯ ಅಭಿವೃದ್ಧಿಗಾಗಿ ಅಲ್ಲ. ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ನಾವು ಹೋರಾಡುತ್ತೇವೆ. ಆದರೆ ರಾಜ್ಯ ವಿಭಜನೆಗೆ ನಾವು ಬಿಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement