ಹಡಗಲಿ: ಖಾಸಗಿ ಲೈನ್ ಮ್ಯಾನ್ ಒಬ್ಬರು ವಿದ್ಯುತ್ ಕಂಬ ಏರಿ ಲೈನ್ ಸರಿ ಮಾಡುತ್ತಿದ್ದ ವೇಳೆ ಏಕಾಏಕಿ ವಿದ್ಯುತ್ ಹರಿದು ಆತ ಕಂಬದ ಮೇಲೆಯೇ ಸುಟ್ಟು ಭಸ್ಮವಾದ ಹೃದಯ ವಿದ್ರಾಹಕ ಘಟನೆ ಬಳ್ಳಾರಿಯ ಹಡಗಲಿಯಲ್ಲಿ ನಡೆದಿದೆ.
ಸರ್ಕಾರಿ ಲೈನ್ ಮ್ಯಾನ್ ಅನಾರೋಗ್ಯದ ಹಿನ್ನೆಲೆಯಲ್ಲಿ ಖಾಸಗಿ ಲೈನ್ ಮ್ಯಾನ್ ಅರುಣ್ ಕುಮಾರ್‌ನನ್ನು ಕಳುಹಿಸಲಾಗಿತ್ತು. ಈ ವೇಳೆ ದುರಸ್ಥಿಯಲ್ಲಿ ತೊಡಗಿದ್ದ ಅರುಣ್ ಅವರಿಗೆ ವಿದ್ಯುತ್ ಹರಿದು ಬೆಂಕಿ ಹೊತ್ತಿಕೊಂಡಿದೆ ಈ ವೇಳೆ ಕಂಬದಿಂದ ಕೆಳಗಿಳಿಯಲು ಪ್ರಯತ್ನಿಸಿದರು. ಆದರೆ ಅವರ ಕೈಗಳು ತಂತಿಗಳಿಗೆ ಸಿಕ್ಕಿ ಹಾಕಿಕೊಂಡಿದ್ದರಿಂದ ಗ್ರಾಮಸ್ಥರ ಕಣ್ಣೇದುರೆ ಸುಟ್ಟು ಕರಕಲಾಗಿದ್ದಾರೆ.
ವಿದ್ಯುತ್ ಇಲಾಖೆ ಮತ್ತು ಲೈನ್‌ಮನ್ ಬೇಜವಾಬ್ದಾರಿಯಿಂದ ಇಂತಹ ಅವಘಡ ಸಂಭವಿಸಿದೆ. 20 ದಿನಗಳ ಹಿಂದೆ ಘಟನೆ ನಡೆದಿದ್ದರೂ ಇದು ಬೆಳಕಿಗೆ ಬಂದಿರಲಿಲ್ಲ. ಮೃತನ ಕುಟುಂಬಕ್ಕೆ ಕೆಇಬಿ ಒಂದಿಷ್ಟು ಹಣ ನೀಡುವ ಮೂಲಕ ಈ ಪ್ರಕರಣವನ್ನು ಮುಚ್ಚಿಹಾಕುವ ವ್ಯವಸ್ಥಿತ ಸಂಚು ನಡೆಸಿತ್ತು ಎಂದು ತಿಳಿದುಬಂದಿದೆ.