ಜಿಲ್ಲಾ ಸುದ್ದಿ

ಅರಮನೆಗೆ ಮತ್ತೊಂದು ಆಘಾತ

ಮೈಸೂರು: ದಸರಾ ಮಹೋತ್ಸವ ಸಿದ್ಧತೆಯಲ್ಲಿರುವ ಅರಮನೆಯಲ್ಲೀಗ ಮತ್ತೊಂದು ಸೂತಕದ ಛಾಯೆ.

ಮಂಗಳವಾರ ಮಧ್ಯಾಹ್ನ ಅರಮನೆ ಹೊರಾವರಣದ ಅರಳಿ ಮರ ಬಿದ್ದು ಕೋಟೆ ಮಾರಮ್ಮ ದೇವಸ್ಥಾನ ಸಂಪೂರ್ಣವಾಗಿ ಧ್ವಂಸವಾಗಿದೆ. ಇಬ್ಬರು ಮಹಿಳೆಯರು ಮೃತಪಟ್ಟು ಮೂವರು ಗಾಯಗೊಂಡಿದ್ದಾರೆ.

ಅಂಬಾವಿಲಾಸ ಅರಮನೆ ಕೋಟೆಯ ಹೊರಾವರಣದಲ್ಲಿರುವ ಬೃಹತ್ ಅರಳಿ ಮರದ ಅಡಿಯಲ್ಲಿ ಕೋಟೆ ಮಾರಮ್ಮ ದೇವಸ್ಥಾನ ಇದೆ. ಅರಳಿ ಮರ ಬೇರು ಸಮೇತ ಉರಳಿದ್ದರಿಂದ ದೇವಸ್ಥಾನವು ಧ್ವಂಸವಾಗಿದೆ.

ಕೆ.ಆರ್ ಮೊಹಲ್ಲಾ ಸುಣ್ಣದಕೇರಿ ನಿವಾಸಿ ಹಾಗೂ ದೇವಸ್ಥಾನದ ಪೂಜರಿ ಸಿದ್ದರಾಜು ಎಂಬವರ ಪತ್ನಿ ಸುಶೀಲಮ್ಮ (65) ಮತ್ತು ರಮೇಶ್ ಎಂಬವರ ಪತ್ನಿ ಶೈಲಜಾ (35) ಮೃತಪಟ್ಟವರು.

ಸುಣ್ಣದಕೇರಿ ಕಾಲಭೈರವ ಎಂಬವರ ಪತ್ನಿ ಮಂಜಳಾ (65), ಕಾಕರವಾಡಿ ಜಯರಾಮ ಎಂಬವರ ಪುತರ್ ರವಿಚಂದ್ರ (9) ಮತ್ತು ಬಸವೇಶ್ವರ ರಸ್ತೆ ನಿವಾಸಿ ವಿಜೇಂಗಂದ್ರ ಎಂಬುವರ ಪತ್ನಿ ಕನಕ (38) ಗಾಯಗೊಂಡಿದ್ದು, ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಚಿವ ವಿ.ಶ್ರೀನಿವಾಸ ಪ್ರಸಾದ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಮೃತರ ಕುಟುಂಬಕ್ಕೆ ತಲಾ ರು.1.50 ಲಕ್ಷ ಸರ್ಕಾರದ ವತಿಯಿಂದ ಪರಿಹಾರ ನೀಡಲಾಗುವುದು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': 'ಜೈಲರ್ 2' ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!