"ಕೋಲಾರ' ಚಿತ್ರದ ನಿರ್ದೇಶಕನ ವಿರುದ್ಧ ದೂರು
ಪೊಲೀಸ್ ಎನ್ಕೌಂಟರ್ಗೆ ಬಲಿಯಾದ ಒಂದೇ ಕುಟುಂಬದ ನಾಲ್ವರು ರೌಡಿಗಳ ಜೀವನ ಕಥೆ ಆಧರಿಸಿ ನಿರ್ಮಿಸಲಾಗುತ್ತಿರುವ...
ಕೆಜಿಎಫ್: ಪೊಲೀಸ್ ಎನ್ಕೌಂಟರ್ಗೆ ಬಲಿಯಾದ ಒಂದೇ ಕುಟುಂಬದ ನಾಲ್ವರು ರೌಡಿಗಳ ಜೀವನ ಕಥೆ ಆಧರಿಸಿ ನಿರ್ಮಿಸಲಾಗುತ್ತಿರುವ ಕನ್ನಡದ ವಿವಾದಿತ 'ಕೋಲಾರ' ಸಿನಿಮಾ ನಿರ್ದೇಶಕ ಎ.ಎಂ ಮಹೇಶ್ಕುಮಾರ್ ವಿರುದ್ಧ ರಾಬರ್ಟಸನ್ಪೇಟೆ ಪೊಲೀಸರು ವಂಚನೆ ಹಾಗೂ ಹಲ್ಲೆ ಆರೋಪದ ದೂರು ದಾಖಲಿಸಿಕೊಂಡಿದ್ದಾರೆ.
ಕೆಜಿಎಫ್ ಪೊಲೀಸರ ಎನ್ಕೌಂಟರ್ಗೆ ಬಲಿಯಾದ ಕುಖ್ಯಾತ ರೌಡಿಗಳಾದ ತಂಗಂ, ಸಗಾಯಂ, ಗೋಪಿ ಮತ್ತು ಜಯಕುಮಾರ್ ಅವರ ತಾಯಿ ಪೌಳಿ ಅವರು ಮಹೇಶ್ಕುಮಾರ್ ವಿರುದ್ಧ ದೂರು ನೀಡಿದ್ದಾರೆ.
ಸಿನಿಮಾದ ಹಕ್ಕಿಗಾಗಿ ರು.25 ಲಕ್ಷ ನೀಡುತ್ತೇನೆ. ಸಿನಿಮಾದಿಂದ ಬಂದ ಲಾಭದಲ್ಲಿ ಶೇ.20ರಷ್ಟು ಹಣವನ್ನು ನೀಡುತ್ತೇನೆ ಎಂದು ಮಹೇಶ್ ಕುಮಾರ್ ತಿಳಿಸಿದ್ದರು.
ಕೇವಲ ರು.1.50 ಲಕ್ಷ ಮುಂಗಡ ನೀಡಿ ಉಳಿದ ಹಣ ನೀಡಿಲ್ಲ. ಶೂಟಿಂಗ್ ಸ್ಥಳಕ್ಕೂ ಕರೆದುಕೊಂಡು ಹೋಗಿಲ್ಲ. ಸಿನಿಮಾ ಶೂಟಿಂಗ್ ಈಗ ಕೆಜಿಎಫ್ ಸೈನೈಡ್ ಗುಡ್ಡದ ಮೇಲೆ ನಡೆಯುತ್ತಿದೆ.
ಅಲ್ಲಿ ಹೋದಾಗ ನಿರ್ದೇಶಕರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಕುರಿತು ದೂರು ನೀಡಲು ಹೋದರೆ ಪೊಲೀಸರು ಸ್ವೀಕರಿಸಲಿಲ್ಲ ಎಂದು ನ್ಯಾಯಾಲಯದ ಮೊರೆ ಹೋಗಿದ್ದೆ. ವಿಚಾರಣೆ ನಡೆಸಿದ ಜೆಎಂಎಫ್ಸಿ ನ್ಯಾಯಾಲಯ ಪ್ರಕರಣದ ತನಿಖೆ ನಡೆಸುವಂತೆ ರಾಬರ್ಟಸನ್ಪೇಟೆ ಸರ್ಕಲ್ ಇನ್ಸ್ಪೆಕ್ಟರ್ಗೆ ಸೂಚಿಸಿದೆ ಎಂದರು.
ಈ ಹಿನ್ನಲೆಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಸತ್ಯನಾರಾಯಣ ನಿರ್ಮಾಣದ ಕೋಲಾರ ಚಿತ್ರದ ನಾಯಕ ನಟ ಯೋಗಿಶ್. ಚಿತ್ರದ ಬಜೆಟ್ ರು.10 ಕೋಟಿ ಎಂದು ಹೇಳಲಾಗಿದೆ.