ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಮಂದಿರ ನಿರ್ಮಾಣ ಮೋದಿಗೆ ಗಡುವು

ರಾಮಮಂದಿರ ನಿರ್ಮಾಣ ವಿಚಾರದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ...

Mainashree
Updated On : 22 Sept 2014, 10:36 am

ಬೆಳ್ತಂಗಗಡಿ: ರಾಮಮಂದಿರ ನಿರ್ಮಾಣ ವಿಚಾರದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ವಿಚಾರವಾಗಿ ನಿರ್ಧಾರ ಕೈಗೊಳ್ಳಲು ಪ್ರಧಾನಿ ಮೋದಿ ಅವರಿಗೆ ಎರಡು ವರ್ಷದ ಗಡುವು ನೀಡಲಾಗಿದೆ ಎಂದು ಭಜರಂಗ ದಳ ರಾಷ್ಟ್ರೀಯ ಸಂಯೋಜಕ ರಾಜೇಶ್ ಪಾಂಡೆ ಹೇಳಿದ್ದಾರೆ.

ಭಾನುವಾರ ಕನ್ಯಾಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದಲ್ಲಿನ ಭ್ರಷ್ಟಾಚಾರ, ಭಯೋತ್ಪಾದನೆ, ಪ್ರತ್ಯೇಕವಾದ, ನಿರುದ್ಯೋಗ, ಅನಕ್ಷರತೆ ನಿರ್ಮೂನೆಗಾಗಿ ಜನತೆ ಮೋದಿಯನ್ನು ಆರಿಸಿದ್ದಾರೆ. ಈ ಸಮಸ್ಯೆಗಳಿಗೆ ಬ್ರೇಕ್ ಹಾಕಲು ಮೋದಿಯವರಿಗೆ ಅವಕಾಶ ನೀಡಬೇಕು ಎಂಬ ಕಾರಣದಿಂದ ಸದ್ಯಕ್ಕೆ ರಾಮಮಂದಿರ ನಿಮಾರ್ಣದ ವಿಚಾರದಲ್ಲಿ ಒತ್ತಡ ಹೇರದಿರಲು ನಿರ್ಧರಿಸಲಾಗಿದೆ.

ಆದರೆ ಎರಡು ವರ್ಷದ ಬಳಿಕ ಅವರು ಮಂದಿರ ನಿರ್ಮಾಣ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಈ ವಿಚಾರದಿಂದ ಅವರು ಹಿಂದೆ ಸರಿದಿದ್ದೇ ಆದಲ್ಲಿ ಬೃಹತ್ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ವರ್ಷದ ಡಿಸೆಂಬರ್, ಮುಂದಿನ ಜನವರಿ, ಫೆಬ್ರವರಿಯಲ್ಲಿ ಮುಂಬೈ, ಭೋಪಾಲ, ದಿಲ್ಲಿ, ಬೆಂಗಳೂರು, ಭೋಪಾಲ ಮತ್ತು ಕೋಲ್ಕತಾಗಳಲ್ಲಿ ಹಿಂದೂ ಸಮ್ಮೇಳಗಳನ್ನು ಆಯೋಜಿಸಲಾಗುವುದು.

ಅ.10,11 12ರಂದು ಹರಿದ್ವಾರದಲ್ಲಿ ಬಜರಂಗದಳದ ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ. ಅದರಲ್ಲಿ ದೇಶದ ಪ್ರಮುಖ ಸಂತ ಮಹಂತರು ಭಾಗವಹಿಸಿ ಮಾರ್ಗದರ್ಶನ ಮಾಡಲಿದ್ದಾರೆ. ಈ ಸಂದರ್ಭ ಹಲವಾರು ಪ್ರಮುಖ ವಿಚಾರಗಳನ್ನು ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಲಕ್ಷ ಯೂನಿಟ್ ರಕ್ತ ಸಂಗ್ರಹ: ಭಜರಂಗ ದಳವು ನ.2ರಂದು ದೇಶಾದ್ಯಂತ ಒಂದು ಲಕ್ಷ ಯುನಿಟ್ ರಕ್ತ ಸಂಗ್ರಹಿಸುವ ಬೃಹತ್ ಅಭಿಯಾನ ಹಮ್ಮಿಕೊಂಡಿದೆ. ಸಂಘಟನೆ ಕಾರ್ಯಕರ್ತರು ರಕ್ತದಾನ ಮಾಡುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಲಿದ್ದಾರೆ ಎಂದು ಪಾಂಡೆ ಹೇಳಿದ್ದಾರೆ.

ಕನ್ಯಾಡಿ ಸ್ವಾಮಿಕೃಪಾದಲ್ಲಿ ಭಜರಂಗ ದಳ ಕರ್ನಾಟಕ ದಕ್ಷಿಣ ಪ್ರಾಂತದ ಅಭ್ಯಾಸ ವರ್ಗ ಮತ್ತು ಬೈಠಕ್ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವ ಹಿಂದು ಪರಿಷತ್‌ನ ಸುವರ್ಣ ಮಹೋತ್ಸವ ಪ್ರಯುಕ್ತ ಅಂದು ರಾಷ್ಟ್ರಾದ್ಯಂತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗುವುದು.

ಎಲ್ಲೆಲ್ಲಿ ಬ್ಲಡ್‌ಬ್ಯಾಂಕ್ ಗಳಿವೆಯೋ ಅವೆಲ್ಲವನ್ನೂ ತುಂಬಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement