ಜಿಲ್ಲಾ ಸುದ್ದಿ

ಹೊಲಕ್ಕೂ ಸೆನ್ಸರ್

ಶಿವಮೊಗ್ಗ: ದೇಶದಲ್ಲೇ ಮೊಟ್ಟಮೊದಲ ಸೆನ್ಸರ್ ಕೃಷಿ ತಂತ್ರಜ್ಞಾನ ಸಂಶೋಧನಾ ಕೇಂದ್ರ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಸಹಯೋಗದಲ್ಲಿ ರಾಜ್ಯದಲ್ಲಿ ಆರಂಭವಾಗುತ್ತಿದೆ.

ಆರು ತಿಂಗಳಲ್ಲಿ ಕೇಂದ್ರ ಅಸ್ತಿತ್ವಕ್ಕೆ ಬರಲಿದ್ದು, ಒಂದು ವರ್ಷದೊಳಗೆ ಕಾರ್ಯಾರಂಭ ಮಾಡಲಿದೆ. ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯವು ಚಿತ್ರದುರ್ಗದಲ್ಲಿ ಆರಂಭಿಸಲಿರುವ ನೂತನ ಕ್ಯಾಂಪಸ್‌ನಲ್ಲಿ ಕೇಂದ್ರಕ್ಕೆ ಸ್ಥಳ ಗುರುತಿಸಲಾಗಿದೆ. ಕೃಷಿ ಕ್ಷೇತ್ರದ ಸ್ಥಳ ಗುರುತಿಸಲಾಗಿದೆ. ಕೃಷಿ ಕ್ಷೇತ್ರದ ಹೊಸ ತಂತ್ರಜ್ಞಾನ ರೂಪಿಸಲು ಭಾರತೀಯ ಕೃಷಿ ಸಂಶೋಧನಾ ಪರಿಷತ್, ಐಐಟಿ ಹೈದ್ರಾಬಾದ್ ಐಐಎಸ್ಸಿ ಬೆಂಗಳೂರು, ಅಣುಶಕ್ತಿ ಸಂಶೋಧನಾ ಸಂಸ್ಥೆಗಳು ಕೈಜೋಡಿಸುತ್ತಿವೆ.

ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಹಾಗೂ ಕೃಷಿ ಸಂಶೋಧನೆ ಮತ್ತು ಶಿಕ್ಷಣ ನಿರ್ದೇಶನಾಲಯದ ಕಾರ್ಯದರ್ಶಿ ಡಾ. ಎಸ್. ಅಯ್ಯಪ್ಪನ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಕೃಷಿಯಲ್ಲಿ ಸೆನ್ಸರ್ ಅಳವಡಿಸುವ ಮೂಲಕ, ಬೆಳೆಗಳಿಗೆ ಎಷ್ಟು ಪ್ರಮಾಣದಲ್ಲಿ ನೀರು ಬೇಕೋ, ಎಷ್ಟು ಪ್ರಮಾಣದಲ್ಲಿ ಗೊಬ್ಬರ, ಪೌಷ್ಟಿಕಾಂಶ, ಬೆಳಕು, ಉಷ್ಣಾಂಶ ಸಿಗಬೇಕೋ ಅಷ್ಟನ್ನು ಕೊಡುವ ವ್ಯವಸ್ಥೆ ಮಾಡಬಹುದು ಎಂದರು.

ಶೆ.3 ಬಿತ್ತನೆ ಕೊರತೆ: ಈ ಬಾರಿ ಮುಂಗಾರು ಕೊರತೆಯಿಂದ ದೇಶದಲ್ಲಿ ಅಂದಾಜು ಶೆ.3ರಷ್ಟು ಬಿತ್ತನೆ ಕಡಿಮೆಯಾಗಿದೆ ಎಂದು ಡಾ.ಎಸ್. ಅಯ್ಯಪ್ಪನ್ ತಿಳಿಸಿದರು.

2014ರ ಮುಂಗಾರಿನ ಬಗ್ಗೆ ಫೆಬ್ರವರಿ-ಮಾರ್ಚ್‌ನಿಂದಲೂ ಅನುಮಾನವಿತ್ತು. ಜುಲೈವರೆಗೆ ಮಳೆಯು ಶೆ.40 ಕಡಿಮೆಯಿತ್ತು.

ಜೂನ್-ಆಗಸ್ಟ್‌ರವರೆಗೆ ಶೆ.25 ಕಡಿಮೆ ಇತ್ತು. ಸೆಪ್ಟೆಂಬರ್‌ವರೆಗ ಶೆ.11ರಷ್ಟು ಕಡಿಮೆ ಇದೆ. ಮುಂಗಾರು 15-20ದಿನ ತಡವಾಗಿ ಬಂದಿದ್ದು ಬಿಟ್ಟರೆ ಮತ್ತೇನೂ ಆತಂಕವಿಲ್ಲ. ಸುಮಾರು ಶೇ.3ರಷ್ಟು ಬಿತ್ತನೆ ಕಡಿಮೆ ಆಗಬಹುದು ಎಂದು ಅಂದಾಜಿಸಲಾಗಿದೆ.

ಈ ಸಾಲಿನಲ್ಲಿ ದೇಶದಲ್ಲಿ 265 ದಶಲಕ್ಷ ಟನ್ (26.5 ಕೋಟಿ ಟನ್) ಬತ್ತ, ಗೋದಿ, ಜೋಳ, ದ್ವಿದಳ ಧಾನ್ಯ. ಎಣ್ಣೆ ಕಾಳು ಉತ್ಪಾದನೆಯಾಗಿದೆ. ಇದು ಸಾಮಾನ್ಯ ಸಾಧನೆ ಅಲ್ಲ. ತೋಟಗಾರಿಕೆಯಲ್ಲಿ ಸಾಕಷ್ಟು ಪ್ರಗತಿ ಆಗುತ್ತಿದೆ. 270 ಮೆಟ್ರಿಕ್ ಟನ್ ಹಣ್ಣು ಮತ್ತು ತರಕಾರಿ ಉತ್ಪತ್ತಿಯಾಗಿದ್ದು, ಕೃಷಿ ಉತ್ತುಂಗದತ್ತ ಸಾಗುತ್ತಿದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ

ಸ್ಟಿಂಗ್‌ ಆಪರೇಷನ್‌ ಬಗ್ಗೆ ಬೇರೆಯವರು ಮಾತನಾಡುವ ಆಗಿಲ್ಲ ಎನ್ನಲು ನೀವೇನು ಸರ್ವಾಧಿಕಾರಿಯೇ ಪ್ರಿಯಾಂಕ್‌ ಖರ್ಗೆ..?

1 ವರ್ಷ ಗ್ಯಾರಂಟಿ ಯೋಜನೆಗಳ ನಿಲ್ಲಿಸಿ, ಹಣವನ್ನು ರೈತರಿಗೆ ನೀಡಿ: ರಾಜ್ಯ ಸರ್ಕಾರಕ್ಕೆ ದಿಂಗಾಲೇಶ್ವರ ಶ್ರೀಗಳ ಆಗ್ರಹ

ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ 18 ನಿಮಿಷದಲ್ಲಿ ಜೀವಂತ ಹೃದಯ ಸಾಗಾಟ!