ದಸರಾಕ್ಕೆ 400 ವಿಶೇಷ ಬಸ್
ಮೈಸೂರು ದಸರಾ ವೀಕ್ಷಣೆಗೆ ರಾಜ್ಯ ಹಾಗೂ ದೇಶದ ವಿವಿಧೆಡೆಗಳಿಂದ ಆಗಮಿಸುವ...
ಕನ್ನಡಪ್ರಭ ವಾರ್ತೆ, ಬೆಂಗಳೂರು ಸೆ.23: ಮೈಸೂರು ದಸರಾ ವೀಕ್ಷಣೆಗೆ ರಾಜ್ಯ ಹಾಗೂ ದೇಶದ ವಿವಿಧೆಡೆಗಳಿಂದ ಆಗಮಿಸುವ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ರಾಜ್ಯ ರಸ್ತೆ ಸಾರಿಗೆ ನಿಗಮ 400 ವಿಶೇಷ ಬಸ್ಗಳ ಸೇವೆ ಕಲ್ಪಿಸುತ್ತಿದೆ.
ಸದ್ಯ ಕಾರ್ಯಾಚರಣೆಯಲ್ಲಿರುವ ವೇಗದೂತ, ವೈಭವ, ರಾಜಹಂಸ, ವೋಲ್ವೊ ಹಾಗೂ ವೋಲ್ವೊ ಮಲ್ಟಿ ಆ್ಯಕ್ಸಲ್ ಸಾರಿಗೆ ಸೇವೆಗಳ ಜತೆಗೆ ಸೆ.25ರಿಂದ ಹೆಚ್ಚುವರಿ ಬಸ್ಗಳ ಸೇವೆ ಒದಗಿಸಲಾಗುತ್ತಿದೆ.
ಬೆಂಗಳೂರಿನ ಮೈಸೂರು ರಸ್ತೆ ಸ್ಯಾಟಲೈಟ್ ಬಸ್ನಿಲ್ದಾಣದಿಂದ ಮೈಸೂರಿಗೆ ಪ್ರತ್ಯೇಕವಾಗಿ 170 ಹೆಚ್ಚುವರಿ ಬಸ್ಸುಗಳು ಕಾರ್ಯಾಚರಣೆ ಮಾಡಲಿವೆ. ಅಲ್ಲದೆ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬಿಜಾಪುರ, ಕಾರವಾರ, ಬಳ್ಳಾರಿ, ಹೊಸಪೇಟೆ, ಗುಲ್ಬರ್ಗ, ರಾಯಚೂರು, ಹೈದ್ರಾಬಾದ್, ಚೆನ್ನೈ, ಊಟಿ, ಸೇಲಂ, ತಿರುಚಿನಾಪಳ್ಳಿ, ಪುದುಕೋಟೆ, ಮಧುರೈ, ತಿರುಚಿ, ಪಣಜಿ, ಶಿರಡಿ, ಮುಂಬೈ ಹಾಗೂ ಪಾಲ್ಘಾಟ್ಗಳಿಗೂ ಮೈಸೂರಿನಿಂದ ವಿಶೇಷ ಬಸ್ಗಳ ಸೇವೆಯಿದೆ.