ಜಿಲ್ಲಾ ಸುದ್ದಿ

ಪಟ್ಟದಕತ್ತಿ ಇರಿಸೋರ್ಯಾರು?

ಅರಮನೆಯ ಖಾಸಗಿ ದರ್ಬಾರ್ ವೇಳೆ ಸಿಂಹಾಸನದ ಮೇಲೆ ಪಟ್ಟದ ಕತ್ತಿಯನ್ನು ಇರಿಸುವವರು ಯಾರು...

ಮೈಸೂರು: ಅರಮನೆಯ ಖಾಸಗಿ ದರ್ಬಾರ್ ವೇಳೆ ಸಿಂಹಾಸನದ ಮೇಲೆ ಪಟ್ಟದ ಕತ್ತಿಯನ್ನು ಇರಿಸುವವರು ಯಾರು?

ದಸರಾ ಮಹೋತ್ಸವಕ್ಕೆ ಸಜ್ಜಾಗುತ್ತಿರುವ ಮೈಸೂರಿನಲ್ಲಿ ಈಗ ಇದೇ ಪ್ರಶ್ನೆ.

ಯಾರೇ ನಿಧನರಾದರೂ ಅರಮನೆ, ಗುರುಮನೆಯಲ್ಲಿ (ಮಠ-ಮಂದಿರ) ಪೂಜೆ ನಿಲ್ಲಬಾರದೆಂಬುದು ನಿಯಮ. ಆದ್ದರಿಂದ ಅರಮನೆ ಪಂಚಾಂಗ ಮತ್ತು ನೀತಿ ನಿಯಮಾವಳಿಯಂತೆ ಎಲ್ಲ ರೀತಿಯ ಆಚರಣೆಗಳೂ ಕಡ್ಡಾಯವಾಗಿ ನೆಡಯಲೇಬೇಕು. ಹಾಗೆಯೇ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನರಾದರು ಎಂಬ ಕಾರಣಕ್ಕೆ ಖಾಸಗಿ ದರ್ಬಾರ್ ನಿಲ್ಲಿಸುವಂತಿಲ್ಲ. ಅದೂ ನಡೆಯಲೇಬೇಕು.

ಹೀಗಿರುವಾಗ ಪ್ರಮೋದಾದೇವಿ ಒಡೆಯರ್ ಅವರು ದಸರಾ ಪೂಜಾ ಕಾರ್ಯಕ್ರಮಗಳು ಮತ್ತು ಖಾಸಗಿ ದರ್ಬಾರ್ ಉಸ್ತುವಾರಿಯನ್ನು ಯಾರಿಗೆ ವಹಿಸುತ್ತಾರೆ ಎಂಬುದು ಚರ್ಚೆಯ ವಿಷಯವಾಗಿದೆ. ಇದು ಅರಮನೆಯ ತೀರಾ ಖಾಸಗಿ ವಿಚಾರವಾಗಿರಬಹುದು. ಆದರೆ ಖಾಸಗಿ ದರ್ಬಾರ್ ನಾಡಿನ ಸಂಸ್ಕೃತಿಯೊಂದಿಗೆ ಮತ್ತು ನಾಡಹಬ್ಬದೊಂದಿಗೆ ಬೆಸೆದುಕೊಂಡಿರುವುದರಿಂದಲೇ ಕುತೂಹಲ ಗರಿದೆದರಿದೆ.

ಶ್ರೀಕಂಠದತ್ತರ ಅಂತ್ಯಕ್ರಿಯೆ ನಡೆಸಿಕೊಟ್ಟ ಚದುರಂಗ ಕಾಂತ ರಾಜೇ ಅರಸ್ ಅವರಿಂದಲೆ ಪೂಜಾ, ವಿಧಿ-ವಿಧಾನಗಳನ್ನು ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಆದರೆ ಈ ಊಹಾಪೋಹ ಹೇಳಿಕೆಗೆ ಪುಷ್ಟಿ ನೀಡುವ ಅಂಶಗಳು ಗೋಚರಿಸಿಲ್ಲ. ಆದರೆ ನಿಯಮದಂತೆ ಪಟ್ಟದ ಕತ್ತಿಯನ್ನು ಸಿಂಹಾಸನದ ಮೇಲೆ ತಂದಿರಿಸುವ ಅರ್ಹತೆ ಇರುವುದು ಒಡೆಯರ್ ಅಥವಾ ಅರಸು ಮನೆತನದವರಿಗೆ ಮಾತ್ರ. ಇದನ್ನು ಬ್ರಾಹ್ಮಣರೂ ನೆರವೇರಿಸುವಂತಿಲ್ಲ.

ಪೂಜೆ ಹೇಗೆ?
ನವರಾತ್ರಿಯ ಮೊದಲ ದಿನ ಪಟ್ಟದ ಆನೆ, ಪಟ್ಟದ ಕುದುರೆ ಮತ್ತು ಪಟ್ಟದ ಹಸುವನ್ನು ಅರಮನೆಗೆ ಕರೆತರಲಾಗುತ್ತದೆ. ಅಂದು ಬೆಳಗ್ಗೆ ಚಾಮುಂಡಿ ತೊಟ್ಟಿಯಲ್ಲಿ ಪಟ್ಟದ ಕತ್ತಿಗೆ ಕಂಕಣ ಕಟ್ಟಲಾಗುತ್ತದೆ.

ಪಟ್ಟದ ಕತ್ತಿಯನ್ನು ದರ್ಬಾರ್ ಹಾಲ್‌ಗೆ ತಂದ ಬಳಿಕ ನವಗ್ರಹ ಕಳಸ ಪೂಜೆ ಆರಂಭವಾಗುತ್ತದೆ. ಕತ್ತಿಯನ್ನು ಸಿಂಹಾಸನಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಿಸಲಾಗುತ್ತದೆ.

ಪ್ರತಿ ಪ್ರದಕ್ಷಿಣಗೂ ಪ್ರತ್ಯೇಕ ಮಂತ್ರ ಇರುತ್ತದೆ. ನವಗ್ರಹ ಪೂಜೆ ಮುಗಿಯುತ್ತಿದ್ದಂತೆಯೇ ಪಟ್ಟದ ಕತ್ತಿಯನ್ನು ಸಿಂಹಾಸನದ ಮೇಲೆ ಇರಿಸಲಾಗುತ್ತದೆ. ನಂತರ ಚಾಮುಂಡಿ ಬೆಟ್ಟ, ಪರಕಾಲಮಠ, ಶೃಂಗೇರಿ ಮಠ, ನಂಜನಗೂಡು ಮತ್ತು ಅರಮನೆ ಒಳಗಿನ ದೇವಸ್ಥಾನಗಳಿಂದ ಬಂದ ಪ್ರಸಾದವನ್ನು ಪಟ್ಟದ ಕತ್ತಿಗೆ ಸಲ್ಲಿಸಲಾಗುತ್ತದೆ. ಅಲ್ಲದೆ ಅರಮನೆ ಧರ್ಮಾಧಿಕಾರಿಗಳು, ಜೋಯಿಸಲು ಮತ್ತು ಪುರೋಹಿತರು ಫಲ ಸಮರ್ಪಣೆ ಮಾಡುತ್ತಾರೆ. ಈ ಎಲ್ಲ ಪೂಜೆಯ ನೇತೃತ್ವವನ್ನು ಅರಮನೆ ಆಸ್ಥಾನ ಧರ್ಮಾಧಿಕಾರಿ ಜನಾರ್ಧನ ಅಯ್ಯಂಗಾರ್ ವಹಿಸುತ್ತಾರೆ.

ಡಿ.ಎನ್.ಮಹೇಂದ್ರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್‌ ಆಪರೇಷನ್‌ ಪ್ರಕರಣ: ಮುಂದಿನ ನಿರ್ಧಾರ ಸಿಎಂ ಡಿಕೆ ಶಿವಕುಮಾರ್`ಗೆ ಬಿಟ್ಟ ಸಂಪುಟ, ಸಾಕ್ಷ್ಯಾಧಾರ ಮೇಲೆ ಮುಂದಿನ ಕ್ರಮ!

15 ವರ್ಷದ ಹಳೆ ವಿಡಿಯೋ ಅದಂತೆ, ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': ‘ಜೈಲರ್ 2’ ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!

ನೀಲಿ ಡ್ರಮ್‌ ಪ್ರಕರಣ: ಮರಣದಂಡನೆ ಶಿಕ್ಷೆ ಪ್ರಕಟ ಬಳಿಕ ಊಟ-ನಿದ್ರೆ ಬಿಟ್ಟು ಕಂಗಾಲಾಗಿರುವ ಮುಸ್ಕಾನ್-ಸಾಹಿಲ್!

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ