ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಮ್ಯಾನ್‌ಹೋಲ್‌ಗೆ ಎರಡು ಬಲಿ

ಮ್ಯಾನ್ ಹೋಲ್‌ನಲ್ಲಿನ ನೀರಿನ ಮಟ್ಟ ಪರೀಕ್ಷಿಸಲು ಹೋಗಿ ಆಯತಪ್ಪಿ ಅದರೊಳಗೆ ಬಿದ್ದ ಇಬ್ಬರು...

ಚಿತ್ರ: ಸಾಂದರ್ಭಿಕ ಚಿತ್ರ
Rashmi Kasaragodu
Updated On : 25 Sept 2014, 9:14 am

ಬೆಂಗಳೂರು: ಮ್ಯಾನ್ ಹೋಲ್‌ನಲ್ಲಿನ ನೀರಿನ ಮಟ್ಟ ಪರೀಕ್ಷಿಸಲು ಹೋಗಿ ಆಯತಪ್ಪಿ ಅದರೊಳಗೆ  ಬಿದ್ದ  ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಹೆಣ್ಣೂರಿನ ನಾಗವಾರದ ಸಾರಾಯಿಪಾಳ್ಯದಲ್ಲಿ ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಮ್ಯಾನ್ ಹೋಲ್ ಮೇಲ್ಭಾಗದಲ್ಲಿ ನಿಂತಿದ್ದ ಹಾಗೂ ಕಾರ್ಮಿಕರನ್ನು ರಕ್ಷಿಸಲು ಹೋಗಿ ತಾನೂ ಒಳಗೆ ಬಿದ್ದಿದ್ದ ಮೇಸ್ತ್ರಿ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆದು ಹಿಂತಿರುಗಿದ್ದಾರೆ.ಕೊತ್ತನೂರು ಗೆದ್ದಲ ಹಳ್ಳಿ ನಿವಾಸಿಗಳಾದ ಶ್ರೀಧರ್ (22) ಹಾಗೂ ಬಂಡ್ರಿ (25) ಮೃತರು.
ಮೇಸ್ತ್ರಿ ಚಂದ್ರಶೇಖರ್ ಅಪಾಯದಿಂದ ಪಾರಾದವರು. ಅಂಬೇಡ್ಕರ್ ಆಸ್ಪತ್ರೆಯಲ್ಲಿ ಮೃತದೇಹ ಇಟ್ಟಿದ್ದು ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ.  ಅವರು ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಿ, ವಾರಸುದಾರರಿಗೆ ಒಪ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಗುತ್ತಿಗೆ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಎಕೋ ಫಿಲ್ ಸಂಸ್ಥೆ  ಹಾಗೂ ಮೇಸ್ತ್ರಿ ವಿರುದ್ಧ ಹೆಣ್ಣೂರು ಠಾಣೆಯಲ್ಲಿ  ದೂರು ದಾಖಲಾಗಿದೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement