ಚಿನ್ನದ ಅಂಬಾರಿಗೆ 15 ಕೋಟಿ ವಿಮೆ
ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯಲ್ಲಿ ಬಳಸಲಾಗುವ ಚಿನ್ನದ ಅಂಬಾರಿಗೆ...
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯಲ್ಲಿ ಬಳಸಲಾಗುವ ಚಿನ್ನದ ಅಂಬಾರಿಗೆ ಜಿಲ್ಲಾಡಳಿತ ಬರೊಬ್ಬರಿ 15 ಕೋಟಿ ರುಪಾಯಿ ವಿಮೆ ಮಾಡಿಸಿದೆ.
ವಿಮೆ ಕುರಿತು ನ್ಯೂ ಇಂಡಿಯಾ ಇನ್ಷೂರೆನ್ಸ್ ಕಂಪನಿಯೊಂದಿಗೆ ಮೈಸೂರು ಜಿಲ್ಲಾ ಆಡಳಿತ ಇಂದು ಒಪ್ಪಂದಕ್ಕೆ ಸಹಿ ಹಾಕಿದೆ. 750 ಕೆ.ಜಿ ತೂಕದ ಚಿನ್ನದ ಅಂಬಾರಿಗೆ 15 ಕೋಟಿ ರುಪಾಯಿ ವಿಮೆ ಮಾಡಿಸಲಾಗಿದ್ದು, ಇದಕ್ಕಾಗಿ ಸುಮಾರು 1 ಲಕ್ಷ ರುಪಾಯಿ ಪ್ರೀಮಿಯಮ್ ಪಾವತಿ ಮಾಡಲಾಗಿದೆ.
ಜಂಬೂ ಸವಾರಿ ವೇಳೆ ಚಿನ್ನದ ಅಂಬಾರಿ ಮೇಲೆ ತಾಯಿ ಚಾಮುಂಡೇಶ್ವರಿ ವಿಗ್ರಹವನ್ನು ಇಟ್ಟು ಬನ್ನಿಮಂಟಪದವರೆಗೆ ಮೆರವಣಿಗೆ ಮಾಡಲಾಗುತ್ತದೆ. ಈ ವೇಳೆ ಏನಾದರು ಅವಘಡಗಳು ಸಂಭವಿಸಿದೆ ಅಥವಾ ಪ್ರಾಣಹಾನಿ, ಆಸ್ತಿಹಾನಿ ಉಂಟಾದರೆ ಎಂಬ ಕಾರಣದಿಂದ ಪ್ರತಿ ವರ್ಷ ಜಿಲ್ಲಾಡಳಿತ ಅಂಬಾರಿಗೆ ವಿಮೆ ಮಾಡಿಸುತ್ತದೆ. ಕಳೆದ ಬಾರಿ ಚಿನ್ನದ ಅಂಬಾರಿಗೆ 9 ಕೋಟಿ ರುಪಾಯಿ ವಿಮೆ ಮಾಡಿಸಲಾಗಿತ್ತು.