ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ನಕಲಿ ಅನುಭವ ಪತ್ರ ನೀಡಿದ 18 ಮಂದಿಯ ಬಂಧನ

ಬಹುರಾಷ್ಟ್ರೀಯ ಸಾಫ್ಟ್‌ವೇರ್ ಕಂಪೆನಿಗಳು ಹಾಗೂ ಅಸ್ತಿತ್ವದಲ್ಲಿಲ್ಲದ ಸಾಫ್ಟ್‌ವೇರ್ ಕಂಪೆನಿಗಳ ಹೆಸರಲ್ಲಿ ನಕಲಿ...

Rashmi Kasaragodu
Updated On : 1 Oct 2014, 4:58 am

ಬೆಂಗಳೂರು: ಬಹುರಾಷ್ಟ್ರೀಯ ಸಾಫ್ಟ್‌ವೇರ್ ಕಂಪೆನಿಗಳು ಹಾಗೂ ಅಸ್ತಿತ್ವದಲ್ಲಿಲ್ಲದ ಸಾಫ್ಟ್‌ವೇರ್ ಕಂಪೆನಿಗಳ ಹೆಸರಲ್ಲಿ ನಕಲಿ ಅನುಭವ ಪತ್ರ ಸೃಷ್ಟಿಸಿ ನಿರುದ್ಯೋಗಿಗಳಿಗೆ ನೀಡಿ ಅವರು ಅಕ್ರಮ ಮಾರ್ಗದಲ್ಲಿ  ಕೆಲಸ ಗಿಟ್ಟಿಸಲು ನೆರವಾಗುತ್ತಿದ್ದ ಅಂತಾರಾಷ್ಟ್ರೀಯ ಜಾಲ ಪತ್ತೆ ಹಚ್ಚಿರುವ ಸಿಸಿಬಿ ಪೊಲೀಸರು 7 ಕಚೇರಿಗಳ ಮೇಲೆ ದಾಳಿ ನಡೆಸಿ 18 ಜನರನ್ನು ಬಂಧಿಸಿದ್ದಾರೆ.
ಜಯನಗರ ನಿವಾಸಿಗಳಾದ ಕಿರಣ್ ಕುಮಾರ್ (35), ರಂಗರಾಜು (35), ಶೇಖ್ ಅಹ್ಮದ್ (39), ಆರ್ ಟಿ ನಗರದ ಬಾಲರಾಜ್ (28), ಜೆ.ಪಿ ನಗರದ ಚಂದ್ರ ರೆಡ್ಡಿ (30), ಸುಬ್ಬರಾವ್ (26), ವೇಣುಗೋಪಾಲ್ (26), ಶ್ರೀನಿವಾಸ್ (34), ಬಿಟಿಎಂ ಬಡಾವಣೆಯ ಚಿನ್ನಾರೆಡ್ಡಿ (27), ರವೀಂದ್ರ ರೆಡ್ಡಿ (25), ಹೇಮಂತ್ (38), ವಿಲ್ಸನ್ ಗಾರ್ಡನ್‌ನ ಲಕ್ಷ್ಮಣ(32), ಆಂಧ್ರ ಪ್ರದೇಶದ ಶೇಖ್ ಆಯುಬ್ (21), ರಾಜೇಶ್ (28), ರಾಮಾಂಜನೇಯಲು (27). ಲೋಕೇಶ್ (25), ಸುರೇಂದ್ರ (27) ಹಾಗು ಕರುಣಾವಲ್ಲರಿ(28) ಬಂಧಿತರು . ಮಂಗಳವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ  ಪತ್ರಿಕಾಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ  ಎಂ.ಎನ್.ರೆಡ್ಡಿ ಪ್ರಕರಣದ ಬಗ್ಗೆ ವಿವರಿಸಿದರು.

ಉದ್ಯೋಗದ ನಕಲಿ ಅನುಭವ ಪತ್ರ ವಿತರಿಸುವ ಬಹುದೊಡ್ಡ ಜಾಲವನ್ನು ಪತ್ತೆ ಹಚ್ಚಲಾಗಿದೆ. ಸಾಫ್ಟ್‌ವೇರ್ ಕಂಪೆನಿಗಳ ಹೆಸರಿನಲ್ಲಿ ನೋಂದಣಿ ಮಾಡಿಸಿ ಮನೆ ಬಾಡಿಗೆ ಪಡೆದು ಆರೋಪಿಗಳು ಕಚೇರಿ ತೆರೆದಿದ್ದರು. ಅಸ್ತಿತ್ವದಲ್ಲಿಲ್ಲದ ಹಾಗು ಕಾರ್ಯ ನಿರ್ವಹಿಸುತ್ತಿರುವ ಸಣ್ಣ ಮಟ್ಟದ ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡು ಅವರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ತಯಾರಿಸುತ್ತಿದ್ದರು. ಅವುಗಳನ್ನು ನಿರುದ್ಯೋಗಿ ಉದ್ಯೋಗಾಕಾಂಕ್ಷಿಗಳಿಗೆ ನೀಡಿ ಸಾವಿರದಿಂದ ಲಕ್ಷದವರಿಗೆ ಸಂಪಾದಿಸುತ್ತಿದ್ದರು' ಎಂದು ಎಂ.ಎನ್ .ರೆಡ್ಡಿ  ಮಾಹಿತಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement