ರಾಮನಗರ: ನಿತ್ಯಾನಂದ ವಿರುದ್ಧದ ಲೈಂಗಿಕ ಕಿರುಕುಳ ರಾಸಲೀಲೆ ಪ್ರಕರಣದ ವಿಚಾರಣೆಯನ್ನು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಏ.15ಕ್ಕೆ ಮುಂದೂಡಿದೆ.
ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಪ್ರಮುಖ ವಿವರಗಳನ್ನು ಒದಗಿಸುವಂತೆ ಆರೋಪಿಗಳ ಪರ ವಕೀಲರು ಕಳೆದ ವಿಚಾರಣೆ ವೇಳೆ ಸಲ್ಲಿಸಿದ್ದ ಮನವಿಗೆ ನ್ಯಾಯಾಲಯ ಸಮ್ಮತಿಸಿತ್ತು. ಅದರಂತೆ ಸಿಐಡಿ ಅಧಿಕಾರಿಗಳು ಮೊಹರು ಮಾಡಿದ ಲಕೋಟೆಯಲ್ಲಿ ಬುಧವಾರ ವಿವರಗಳನ್ನು ಒದಗಿಸಿದರು.
ನಂತರ ನ್ಯಾಯಾಧೀಶರಾದ ಮಂಜುಳಾ ಅವರು ವಿಚಾರಣೆಯನ್ನು ಮುಂದೂಡಿದರು. ದಿನದ ವಿಚಾರಣೆ ವೇಳೆ ಆರೋಪಿಗಳ ಖುದ್ದು ಹಾಜರಿಗೆ ವಿನಾಯಿತಿ ನೀಡಲಾಗಿತ್ತು. ಮುಂದಿನ ವಿಚಾರಣೆಗೆ ಆರೋಪಿಗಳು ಹಾಜರಿರಬೇಕು ಎಂದು ನ್ಯಾಯಾಧೀಶರು ಆದೇಶಿಸಿದರು.