ಬಿಬಿಎಂಪಿ 3 ಭಾಗ ; ಚೆಂಡು ರಾಜಭವನಕ್ಕೆ
ಬಿಬಿಎಂಪಿ ವಿಭಜನೆಗೆ ಸುಗ್ರೀವಾಜ್ಞೆ ಪ್ರಕರಣ ಇದೀಗ ರಾಜ್ಯಪಾಲರ ಅಂಗಳ ತಲುಪಿದೆ. ಆದರೆ, ಪ್ರತಿಪಕ್ಷಗಳು ಸುಗ್ರೀವಾಜ್ಞೆಗೆ ಸಹಿಹಾಕದಂತೆ ರಾಜ್ಯಪಾಲರನ್ನು ...
ಬೆಂಗಳೂರು: ಬಿಬಿಎಂಪಿ ವಿಭಜನೆಗೆ ಸುಗ್ರೀವಾಜ್ಞೆ ಪ್ರಕರಣ ಇದೀಗ ರಾಜ್ಯಪಾಲರ ಅಂಗಳ ತಲುಪಿದೆ. ಆದರೆ, ಪ್ರತಿಪಕ್ಷಗಳು ಸುಗ್ರೀವಾಜ್ಞೆಗೆ ಸಹಿಹಾಕದಂತೆ ರಾಜ್ಯಪಾಲರನ್ನು ಒತ್ತಾಯಿಸಲಿವೆ. ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು, ಕಾರ್ಯಕರ್ತರು ನಗರದಲ್ಲಿ ಗುರು ವಾರ ಪ್ರತಿಭಟನೆ ನಡೆಸಲಿ ದ್ದಾರೆ. ಅಲ್ಲದೆ, ರಾಜ್ಯ ಸರ್ಕಾರ ಪ್ರಸ್ತಾಪಿಸಿರುವ `ವಿಭಜನೆ ಸುಗ್ರೀವಾಜ್ಞೆ'ಗೆ ಸಹಿ ಹಾಕಬಾರದು ಎಂದು ರಾಜ್ಯಪಾಲರಿಗೂ ಮನವಿ ಸಲ್ಲಿಸಲಿದ್ದಾರೆ. ಪಾಲಿಕೆ ಚುನಾವಣೆ ನಡೆಸಲು ಮನಸ್ಸಿಲ್ಲದ ಕಾಂಗ್ರೆಸ್ ಸರ್ಕಾರ, 198ವಾರ್ಡ್‍ಗಳಿಗೆಚುನಾವಣೆ ನಡೆಸಲು ಮೀಸಲು ಪಟ್ಟಿಯನ್ನು ಪ್ರಕಟಿಸಿದೆ. ಆದರೆ, ಅದರ ನಡುವೆಯೇ ಮೂರು ಭಾಗ ಮಾಡುವ ಸುಗ್ರೀವಾಜ್ಞೆಯನ್ನೂ ಜಾರಿ ಮಾಡಿದರೆ ಚುನಾವಣೆ ಮುಂದಕ್ಕೆ ಹಾಕಬಹುದು ಎಂಬ ತಂತ್ರ ರೂಪಿಸಿದೆ. ಹೀಗಾಗಿ ರಾಜ್ಯಪಾಲರ ಮೊರೆ ಹೋಗಲು ನಿರ್ಧರಿಸಲಾಗಿದೆ. ಸರ್ಕಾರದ ವಿರುದಟಛಿ ಪ್ರತಿಭಟನೆಯನ್ನುತೀವ್ರಗೊಳಿಸುವುದಾಗಿಉಭಯ ಪಕ್ಷಗಳು ಘೋಷಿಸಿವೆ. ಗುರುವಾರ ಬೆಳಗ್ಗೆ 10 ಗಂಟೆಗೆ ಬಿಜೆಪಿ ಪ್ರತಿ ಭಟನಾ ರ್ಯಾಲಿ ಹಮ್ಮಿಕೊಂಡಿದೆ. ರಾಜಭವನಕ್ಕೆ ತೆರಳಿ, ರಾಜ್ಯಪಾಲರಿಗೆ ಸಹಿ ಹಾಕದಂತೆ ಮನವಿ ಸಲ್ಲಿಸಲಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.