ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಅಕಾಲಿಕ ವರ್ಷಧಾರೆ; ಸಿಡಿಲಿಗೆ 5 ಬಲಿ

ಅಕಾಲಿಕ ಮಳೆ
Rashmi Kasaragodu
Updated On : 11 Apr 2015, 12:45 pm

ಬೆಂಗಳೂರು: ಅಕಾಲಿಕ ಮಳೆ ಅಬ್ಬರ ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲಿ ಜೋರಾಗಿದ್ದು ಸಿಡಿಲಿಗೆ ಐವರು ಬಲಿಯಾಗಿ ದ್ದಾರೆ. ಶುಕ್ರವಾರ ಸಂಜೆ ಸುರಿದ ಬಿರುಗಾಳಿ,
ಗುಡುಗು ಸಹಿತ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಸಿಂದಗಿ ತಾಲೂಕಿನ ಹಾಳಗೊಂಡಕನಾಳ  ಗ್ರಾಮದಲ್ಲಿ ಹೊಲದಿಂದ ವಾಪಸ್ ಮನೆಗೆ ಬರುತ್ತಿದ್ದ ಶಾರದಾಬಾಯಿ ಗಿರೆಪ್ಪ ತಿಳಗೂಳ (38), ಹೊಲದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಂಡಿ ತಾಲೂಕಿನ ಬೆನೆ ಕ ನ ಹಳ್ಳಿಯಲ್ಲಿ ರಾಜಶೇಖರ
ಸಿದ್ದಪ್ಪ ಹರಿಜನ (25), ಮರದಡಿ ಆಶ್ರಯ ಪಡೆದಿದ್ದ ಕಲಬುರ್ಗಿ ಜಿಲ್ಲೆ ಆಳಂದ ತಾಲೂಕಿನ ಕೊರಳಿ ಗ್ರಾಮದ ಕುರಿಗಾಹಿ ಮಹಿಳೆ ಲಕ್ಷ್ಮಣ ಜವಳಿ(45), ನರೋಣಾದ ರೈತ
ಹಣಮಂತರಾಯ ಶಿವರೆಡ್ಡಿ (22) ಹಾಗೂ ತೋಟದ ಮನೆಯ ಹೊಸ್ತಿಲಲ್ಲಿ ನಿಂತಿದ್ದ ಚಿಂಚೋಳಿ ತಾಲೂಕು ಮರಪಳ್ಳಿ ರೈತ ಶ್ರೀಮಂತ ಬಸವಂತಪ್ಪ ಪೂಜಾರಿ(20) ಸಿಡಿಲು ಬಡಿದು ಮೃತಪಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement