ಹಣ 
ಜಿಲ್ಲಾ ಸುದ್ದಿ

ಪಾಟೀಲರಿಂದ ಮತ್ತೆರಡು ಕಳ್ಳಗಂಟು ಪತ್ತೆ

ಅಭಿವೃದ್ಧಿ ಯೋಜನೆಗೆ ಬಿಡುಗಡೆಯಾಗಿ ಬಳಕೆಯಾಗದೇ ಉಳಿದ ರು. 134 ಕೋಟಿ ಅನುದಾನ ಬ್ಯಾಂಕ್‍ಗಳಲ್ಲಿ ಠೇವಣಿ ಇಟ್ಟು ಸಿಕ್ಕಿ ಹಾಕಿಕೊಂಡಿರುವ...

ಹುಬ್ಬಳ್ಳಿ: ಅಭಿವೃದ್ಧಿ  ಯೋಜನೆಗೆ ಬಿಡುಗಡೆಯಾಗಿ ಬಳಕೆಯಾಗದೇ ಉಳಿದ ರು. 134 ಕೋಟಿ ಅನುದಾನ ಬ್ಯಾಂಕ್‍ಗಳಲ್ಲಿ ಠೇವಣಿ ಇಟ್ಟು ಸಿಕ್ಕಿ ಹಾಕಿಕೊಂಡಿರುವ ಉಪ ಕಾರ್ಯದರ್ಶಿ ರಾಮಕೃಷ್ಣ ಪ್ರಕರಣದ ಬೆನ್ನಲ್ಲೇ ಸಿಂಡಿಕೇಟ್ ಬ್ಯಾಂಕ್‍ನಲ್ಲಿ ರು. 66 ಕೋಟಿ ಹಾಗೂ ಕಾರ್ಪೋರೇಷನ್ ಬ್ಯಾಂಕ್‍ನಲ್ಲಿ ರು. 31 ಕೋಟಿ ಠೇವಣಿ ಇರಿಸಿರುವ ಮತ್ತೆರಡು ಪ್ರತ್ಯೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಇಂಥ ಪ್ರಕರಣಗಳ ತನಿಖೆಗೆ ಸಮಿತಿ ರಚಿಸಲಾಗಿದೆ ಎಂದು ಗ್ರಾಮೀಣಾಬಿsವೃದಿಟಛಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಎಚ್.ಕೆ. ಪಾಟೀಲ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಶುಕ್ರವಾರ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋ ಜನೆಗಳಡಿ ಅಭಿ ವೃದಿಟಛಿ ಕಾರ್ಯಗಳಿಗೆ ಬಿಡುಗಡೆಯಾಗಿ ಬಳಕೆಯಾಗದ ಅನುದಾನವನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತದರ ಅಂಗ ಸಂಸ್ಥೆಗಳು ಬ್ಯಾಂಕ್‍ಗಳಲ್ಲಿ ಹಣ ಠೇವಣಿ ಇರಿಸಿ ದುರ್ಬಳಕೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಇಂಥ ಸಾಕಷ್ಟು ಪ್ರಕರಣಗಳಿರುವ ಸಂದೇಹದ ಹಿನ್ನೆಲೆಯಲ್ಲಿ ತನಿಖೆಗೆ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಪೊನ್ನತಿ ಶ್ರೀಧರ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಲು ಆದೇಶಿಸಲಾಗಿದೆ.
ಈ ಸಮಿತಿಯಲ್ಲಿ ಆಂತರಿಕ ಲೆಕ್ಕ ಪರಿಶೋಧಕಮಹದೇವ, ನಿವೃತ್ತ ಐಎಎಸ್ ಅಧಿಕಾರಿ ಅನ್ವರ್ ಪಾಷ, ಖಾನ್ ಪರ್ವೇಜ್ ಇದ್ದಾರೆ. ಗ್ರಾಮೀಣಾಬಿsವೃದಿಟಛಿ
ಇಲಾಖೆ ಮತ್ತದರ ಅಂಗ ಸಂಸ್ಥೆಗಳು ಯಾವ ಯಾವ ಬ್ಯಾಂಕ್‍ಗಳಲ್ಲಿ ಯಾವ ಹೆಸರಿನಲ್ಲಿ ಖಾತೆ ಹೊಂದಿದೆ? ಎಷ್ಟು ವರ್ಷಗಳಿಂದ ಚಾಲ್ತಿಯಲ್ಲಿವೆ? ಈ ವ್ಯವಹಾರ ಯಾರು ನಿರ್ವಹಿಸಿದ್ದಾರೆ? ಹೂಡಿಕೆಯಾದ ಹಣವೆಷ್ಟು? ಎಂಬಿತ್ಯಾದಿ ಮಾಹಿತಿ ನೀಡಲು ಸಮಿತಿಗೆ ಸೂಚಿಸಲಾಗಿದೆ ಎಂದರು. ರು. 66 ಕೋಟಿ ಹಾಗೂ ರು. 31 ಕೋಟಿ ಠೇವಣಿಯನ್ನು ಯಾರು ಇರಿಸಿದ್ದಾರೆಂಬ ಸಂಪೂರ್ಣ ಮಾಹಿತಿ ಲಭ್ಯ ವಾಗಿಲ್ಲ. ರಾಮಕೃಷ್ಣ ಪ್ರಕರಣದ ತನಿಖೆ ನಡೆಸಿ ತಿಂಗಳೊಳಗಾಗಿ ವರದಿ ನೀಡುವಂತೆ ಸಮಿತಿಗೆ ಸೂಚಿಸಿದ್ದೇನೆ. ಸರ್ಕಾರದ ಹಣ ಒಂದೆಡೆ ನಿಲುಗಡೆ ಮಾಡಿ ದುರ್ಬಳಕೆ ಮಾಡುವುದು ಗಂಭೀರ ಅಪರಾಧ. ಸರ್ಕಾರ ತಪ್ಪಿತಸ್ಥರ ವಿರುದ್ಧ  ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು ಸಾಧಿಸಿದು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ