ಹಾಸನ: ಸಿದ್ದರಾಮಯ್ಯರನ್ನು ತಲೆ ಮೇಲೆ ಕೂರಿಸಿಕೊಂಡೆ. ಅದಕ್ಕಾಗಿ ಈ ಪ್ರತಿಫಲ ಎದುರಿಸುತ್ತಿದ್ದೇನೆ ಎಂದು ಎಚ್.ಡಿ ದೇವೇಗೌಡ ಶುಕ್ರವಾರ ಹೇಳಿದ್ದಾರೆ.
ನಾನು ಸಿದ್ದರಾಮಯ್ಯ ಅವರನ್ನು ತಲೆ ಮೇಲೆ ಕೂರಿಸಿಕೊಂಡಿದ್ದೆ. ಅದರ ಪ್ರತಿಫಲವನ್ನ ನಾನು ಈಗ ಅನುಭವಿಸುತ್ತಿದ್ದೇನೆ. ಮಾಡಿದುಣ್ಣೋ ಮಹಾರಾಯ ಎಂಬ ಸ್ಥಿತಿ ನನ್ನದಾಗಿದೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿಯ 16 ವಾರ್ಡ್ ಗಳಲ್ಲಿ ಒಕ್ಕಲಿಗರು ಗೆಲ್ಲುತ್ತಿದ್ದರು, ಈಗ ಒಕ್ಕಲಿಗರು 1 ವಾರ್ಡ್ ನಲ್ಲೂ ಜಯ ಗಳಿಸುತ್ತಿಲ್ಲ ಇದಕ್ಕೆ ಮೂಲಕ ಕಾರಣ ಸಿದ್ದರಾಮಯ್ಯ ಎಂದು ದೇವೇಗೌಡ ಅವರು ಕಿಡಿ ಕಾರಿದ್ದಾರೆ.