ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ 
ಜಿಲ್ಲಾ ಸುದ್ದಿ

ಕೋರ್ಟ್ ಆದೇಶದಂತೆ ಚುನಾವಣೆ ನಡೆಸಿ: ಸರ್ಕಾರಕ್ಕೆ ದೇವೇಗೌಡ ಆಗ್ರಹ

ಬಿಬಿಎಂಪಿ ವಿಭಜನೆಗೂ ಮುನ್ನ ಮೊದಲು ಹೈಕೋರ್ಟ್ ಆದೇಶದಂತೆ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸಬೇಕು. ಯಾವುದೇ ಸಾಬೂಬು ಹೇಳಲು ಸಾಧ್ಯವಿಲ್ಲ...

ಬೆಂಗಳೂರು: ಬಿಬಿಎಂಪಿ ವಿಭಜನೆಗೂ ಮುನ್ನ ಮೊದಲು ಹೈಕೋರ್ಟ್ ಆದೇಶದಂತೆ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸಬೇಕು. ಯಾವುದೇ ಸಾಬೂಬು ಹೇಳಲು ಸಾಧ್ಯವಿಲ್ಲ.

ಚುನಾವಣೆ ನಡೆಸದಿರಲು ವಿಸರ್ಜನೆ ಅಸ್ತ್ರ ಬಳಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಸರಿಯಲ್ಲ. ಇಂಥ ಸನ್ನಿವೇಶ ಸೃಷ್ಟಿಸಿರುವುದು ಕರ್ನಾಟಕ ಇತಿಹಾಸದಲ್ಲಿಯೇ ನೋಡಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಬಿಎಂಪಿ ಸಂವಿಧಾನಾತ್ಮಕವಾಗಿ ರಚನೆಯಾಗಿರುವ ಸಂಸ್ಥೆ. ಐದು ವರ್ಷಕ್ಕೊಮ್ಮ ಚುನಾವಣೆ ಕಡ್ಡಾಯವಾಗಿ ನಡೆಬೇಕು ಎಂದು 1992-93ರಲ್ಲಿಯೇ ತಿದ್ದುಪಡಿ ಮಾಡಲಾಗಿದೆ. ಅಲ್ಲದೇ, ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸಲು ಹೈಕೋರ್ಟ್ ಸೂಚಿಸಿದೆ. ಹೀಗಾಗಿ ಸರ್ಕಾರವು ಯಾವುದೇ ಸಾಬೂಬು ನೀಡದೆ ಚುನಾವಣೆ ನಡೆಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಆಗ್ರಹಿಸಿದರು.

ಬಿ.ಎಸ್.ಪಾಟೀಲ್ ನೇತೃತ್ವದ ಸಮಿತಿ ಜೂ.15ಕ್ಕೆ ವರದಿ ನೀಡಲಿದೆ. ಅದಕ್ಕೂ ಮುನ್ನವೇ ವಿಭಿಜನೆಗೆ ಮುಂದಾಗಿದೆ. ಅಲ್ಲದೆ, ಪಾಲಿಕೆ ಸದಸ್ಯರ  ಅವಧಿ ಕೇವಲ ಎರಡು ದಿನ ಬಾಕಿ ಇರುವಾಗ ವಿಸರ್ಜನೆ ಮಾಡುವ  ಅಗತ್ಯ ಇರಲಿಲ್ಲ. ಹೈಕೋರ್ಟ್ ಸಹ ವಿಭಜನೆ ಬೇಕಿದ್ದರೆ 2020ರಲ್ಲಿ ಮಾಡಿಕೊಳ್ಳಿ, ಮೊದಲು ಚುನಾವಣೆ ನಡೆಸುವಂತೆ ಸೂಚಿಸಿದೆ. ಬಿಬಿಎಂಪಿಯಲ್ಲಿ ನಡೆದ ಆಕ್ರಮಗಳ ಬಗ್ಗೆ ತನಿಖೆ ನಡೆಸಲು ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ ಎಂಬ ಸಮಜಾಯಿಷಿ ಸರ್ಕಾರ ನೀಡಿದೆ. ತನಿಖೆಗೂ, ಚುನಾವಣೆ ನಡೆಸುವುದಕ್ಕೂ ಯಾವುದೇ ಸಂಬಂಧ ಇಲ್ಲ. ಚುನಾವಣೆ ಮತ್ತು ತನಿಖೆಗೆ ತನ್ನ ಪಾಡಿಗೆ ನಡೆದುಕೊಂಡು ಹೋಗಲಿದ್ದು, ಚುನಾವಣೆ ಮುಂದೂಡಿಕೆಗೆ ಇಲ್ಲದ ಸಾಬೂಬು ನೀಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಅಧಿವೇಶನದಲ್ಲಿ ಜೆಡಿಎಸ್ ಭಾಗಿ
ಬಿಬಿಎಂಪಿ ತ್ರಿಭಜನೆಗಾಗಿ ರಾಜ್ಯ ಸರ್ಕಾರ ಸೋಮವಾರ ಕರೆದಿರುವ ವಿಶೇಷ ಅಧಿವೇಶನದಲ್ಲಿ ಜೆಡಿಎಸ್ ಭಾಗವಹಿಸಲಿದೆ. ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ವಿಶೇಷ ಅಧಿವೇಶನವನ್ನು ಬಹಿಷ್ಕರಿಸುವ ಬಗ್ಗೆ ತೀರ್ಮಾನಿಸಿದ್ದರು. ಆದರೆ, ಬಿಜೆಪಿ ಅಧಿಕೃತ ಪ್ರತಿಪಕ್ಷವಾಗಿದ್ದು, ಅವರು ಭಾಗವಹಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಜೆಡಿಎಸ್‍ನ ಶಾಸಕರು ಭಾಗವಹಿಸುವಂತೆ ಸೂಚಿಸಿದ್ದೇನೆ. ಬಿಜೆಪಿಯ ಜತೆ ಸೇರಿ ಹೋರಾಟ ನಡೆಸಲು ಪಕ್ಷದ ಶಾಸಕರಿಗೆ ತಿಳಿಸಲಾಗಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!