ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಜಿ.ವೆಂಕಟೇಶ್ ಕುಮಾರ್ 
ಜಿಲ್ಲಾ ಸುದ್ದಿ

ಮೈಸೂರು ವಿವಿಯಲ್ಲಿ ವಿದ್ಯಾರ್ಥಿನಿಗೆ ಕಿರುಕುಳ: ನೊಂದ ಯುವತಿ ಪೊಲೀಸರಿಗೆ ದೂರು

ವಿಶ್ವವಿದ್ಯಾಲಯಗಳು ಸಂಶೋಧನಾ ವಿದ್ಯಾರ್ಥಿನಿಯರಿಗೆ ಸುರಕ್ಷಿತ ಸ್ಥಳವಲ್ಲ ಎನ್ನುವ ಮಾತು ಪದೇಪದೇ ಕೇಳಿಬರುತ್ತಿದೆ. ಮೈಸೂರು ವಿವಿಯ ಸಂಶೋಧನಾ ವಿದ್ಯಾರ್ಥಿನಿ ಸರಿತಾ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ ಮಾಸುವ ಮುನ್ನವೇ...

ಮೈಸೂರು: ವಿಶ್ವವಿದ್ಯಾಲಯಗಳು ಸಂಶೋಧನಾ ವಿದ್ಯಾರ್ಥಿನಿಯರಿಗೆ ಸುರಕ್ಷಿತ ಸ್ಥಳವಲ್ಲ ಎನ್ನುವ ಮಾತು ಪದೇಪದೇ ಕೇಳಿಬರುತ್ತಿದೆ. ಮೈಸೂರು  ವಿವಿಯ ಸಂಶೋಧನಾ ವಿದ್ಯಾರ್ಥಿನಿ ಸರಿತಾ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅಂತಹದ್ದೇ ಪ್ರಕರಣ  ತಡವಾಗಿ ಬೆಳಕಿಗೆ ಬಂದಿದೆ.

ಮನಃಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ವೆಂಕಟೇಶ್ ಕುಮಾರ್ ಎಂಬುವವರು ಸಂಶೋಧನಾ ವಿದ್ಯಾರ್ಥಿನಿಯೋರ್ವಳಿಗೆ ಲೈಂಗಿಕ ಕಿರುಕುಳ  ನೀಡುವ ಆರೋಪದ ಮೇಲೆ ಯುವತಿಯೊಬ್ಬಳು ಪ್ರಾಧ್ಯಾಪಕನ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು ಎಂಬ ಪ್ರಕರಣ  ತಡವಾಗಿ ಬೆಳಕಿಗೆ ಬಂದಿದೆ.

ದೂರಿನಲ್ಲಿ ವಿದ್ಯಾರ್ಥಿನಿ, ತಾನು ಮನಃಶಾಸ್ತ್ರ ವಿಭಾಗದ ವಿದ್ಯಾರ್ಥಿನಿಯಾಗಿದ್ದು, ಇದೇ ವಿಭಾಗದ ಪ್ರಾಧ್ಯಾಪಕರಾಗಿರುವ ಪ್ರೊ.ವೆಂಕಟೇಶ್ ಕುಮಾರ್  ಅವರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. 2008ರಿಂದಲೂ ಪ್ರೊ.ವೆಂಕಟೇಶ್ ಕುಮಾರ್ ಅವರ ಪರಿಚಯವಿತ್ತು. ಎಂಎ ಆದ ನಂತರ  ಸಂಶೋಧನಾ ಅಧ್ಯಾಯನಕ್ಕೆಂದು ಇವರ ಬಳಿಯೇ ಅರ್ಜಿ ಸಲ್ಲಿಸಿದ್ದೆ. ಈ ಅರ್ಜಿಯನ್ನು ಮೊದಲು ಅವರು ನಿರಾಕರಿಸಿದ್ದರು. ನಂತರ ಕೆಲವು  ದಿನಗಳಾದ ಮೇಲೆ ಅವರೇ ಫೋನ್ ಮಾಡಿ ಮಾರ್ಗದರ್ಶಕರಾಗುತ್ತೇನೆಂದು ಒಪ್ಪಿಕೊಂಡಿದ್ದರು.

ಸಂಶೋಧನಾ ವಿಭಾಗದಲ್ಲಿ ನಾನೊಬ್ಬಳೇ ಎಂಎ ಮಾಡಿದ್ದೆ. ಹೀಗಾಗಿ ತರಗತಿಯಲ್ಲಿ ಒಬ್ಬಳೇ ಊಟ ಮಾಡುವಾಗ ಪ್ರಾಧ್ಯಾಪಕು ಬರುತ್ತಿದ್ದರು. ನಂತರ ನನ್ನ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳುತ್ತಿದ್ದರು. ಒಂದು ದಿನ ಹೋಟೆಲ್ ಗೆ ಊಟಕ್ಕೆಂದು ಕರೆದುಕೊಂಡು ಹೋಗಿದ್ದರು. ಆಗ ನನ್ನ ಕೈ  ಮುಟ್ಟಿ ನಿನ್ನ ಜೀವನ ಇನ್ನು ಮುಂದೆ ತುಂಬಾ ಚೆನ್ನಾಗಿರುತ್ತದೆ ಎಂದು ಹೇಳಿದ್ದರು.

ಅಂದಿನಿಂದ ಪ್ರೊ.ವೆಂಕಟೇಶ್ ಕುಮಾರ್ ಅವರ ವರ್ತನೆಯಲ್ಲಿ ಬದಲಾವಣೆಯಾಗಿರುವಂತೆ ಕಂಡುಬಂದಿತು. ಬಟ್ಟೆಗಳ ಬಗ್ಗೆ ವರ್ಣಿಸುವುದು  ಮಾತನಾಡುವಾಗ ಬೇರೆ ರೀತಿಯಲ್ಲಿ ಮಾತನಾಡುವುದು. ಇಂತಹ ಮಾತುಗಳಿಗೆ ಪ್ರತಿಕ್ರಿಯೆ ನೀಡದಿದ್ದರೆ ಸಂಶೋಧನೆಗೆ ಸಂಬಂಧಿಸಿದ ಮಾಹಿತಿ  ಅಥವಾ ದಾಖಲೆಗಳಿಗೆ ಸಹಿ ಹಾಕುವುದಿಲ್ಲ. ಬೋದನೆ ಮಾಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದರು.

ಈ ವರ್ತನೆ ನನಗೆ ಕಿರಿಕಿರಿ ಉಂಟಾಗುವಂತೆ ಮಾಡಿತ್ತು. ಕೆಲವು ಬಾರಿ ಮಾರ್ಗದರ್ಶನದ ವೇಳೆ ತನ್ನನ್ನು ಉದ್ದೇಶಿಸಿ ಕೀಳು ಮಟ್ಟದ  ಮಾತುಗಳನ್ನಾಡುತ್ತಿದ್ದರು. ಪ್ರೊಫೆಸರ್ ಅವರ ವರ್ತನೆ ಸಹಿಸಲಾರದೆ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳವುದಾಗಿಯೂ ಆಲೋಚನೆ  ಮಾಡುತ್ತಿದ್ದೆ. ನಂತರ ನನ್ನ ಗೆಳೆಯರು ಬುದ್ಧಿವಾದ ಹೇಳಿದ ಮೇಲೆ ಇಂತಹ ನಿರ್ಧಾರದಿಂದ ಹಿಂದೆ ಸರಿದಿದ್ದೆ ಎಂದು ಯುವತಿ ದೂರಿನಲ್ಲಿ  ಹೇಳಿದ್ದಾಳೆ.

ಕಳೆದ ಮಾರ್ಚ್ 19 ರಂದೇ ಯುವತಿ ಎಫ್ಐಆರ್ ದಾಖಲಿಸಿದ್ದರು. ತಡವಾಗಿ ಬೆಳಕಿಗೆ ಬಂದಿರುವ ಕುರಿತಂತೆ ಹೇಳಿಕೆ ನೀಡಿರುವ ಯುವತಿ  ಪ್ರೊ.ವೆಂಕಟೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡುತ್ತಿರುವುದರಿಂದ ತೊಂದರೆಯಾಗುವ ಭಯದಿಂದ ಈ ವಿಷಯ  ತಿಳಿಸಲು ಹೆದರಿದೆ ಎಂದು ಯುವತಿ ಹೇಳಿದ್ದಾಳೆ.

ಯುವತಿ ದೂರಿನನ್ವಯ ಪ್ರೊ.ವೆಂಕಟೇಶ್ ಕುಮಾರ್ ಅವರ ವಿರುದ್ಧ ಕ್ರಮ ಕೈಗೊಂಡಿರುವ ಮೈಸೂರು ವಿಶ್ವವಿದ್ಯಾಲಯವು ಆರೋಪಿತ ಪ್ರಾಧ್ಯಾಪಕರ  ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ಸಮಿತಿಗೆ ಸೂಚನೆ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ