ಜಿಲ್ಲಾ ಸುದ್ದಿ

ಇಎಸ್‍ಐ ವೈದ್ಯರ ಅರ್ಜಿ ವಜಾ

Mainashree

ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣಕ್ಕೆ ಇಲಾಖೆ ಅನುಮತಿ ನೀಡುವಂತೆ ಕೋರಿ ಸೇವಾನಿರತ ಇಎಸ್‍ಐಸಿ ವೈದ್ಯರು ಸಲ್ಲಿಸಿದ್ದ ರಿಟ್ ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿದೆ.

ಸ್ನಾತಕೋತ್ತರ ಶಿಕ್ಷಣ ಪಡೆಯಲು ಅವಕಾಶವಿದ್ದರೂ, ಇಎಸ್‍ಐ ನಿರ್ದೇಶಕರು ಮತ್ತು ವಿಭಾಗೀಯ ನಿರ್ದೇಶಕರು ಅನುಮತಿ ನೀಡುತ್ತಿಲ್ಲವೆಂದು ದೂರಿ ಸೇವಾ ನಿರತ ವೈದ್ಯರಾದ ಡಾ.ಪ್ರತಿಭಾ ಸೇರಿ 21 ವೈದ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ನಡೆಸಿದ ನ್ಯಾ.ಬಿ.ವಿ.ನಾಗರತ್ನ ಅವರಿದ್ದ ಏಕಸದಸ್ಯ ಪೀಠ, ಸದ್ಯ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆಗೆ ಅರ್ಹವಾಗಿಲ್ಲ. ಈ ಕುರಿತು ತಕರಾರಿದ್ದರೆ ಅರ್ಜಿದಾರರು `ಕೇಂದ್ರ ಆಡಳಿತಾತ್ಮಕ ಪ್ರಾ„ಕಾರ' (ಸಿಎಟಿ) ಮೊರೆಹೋಗುವಂತೆ ಅವಕಾಶ ಕಲ್ಪಿಸಿ ಅರ್ಜಿ ವಜಾಗೊಳಿಸಿದೆ.

SCROLL FOR NEXT