ನವದೆಹಲಿ/ಬೆಂಗಳೂರು:ಪ್ರತಿಷ್ಠಿತಫೆಸಿಫಿಕ್ ಏಷಿಯಾ ಟ್ರಾವೆಲ್ಅಸೋಸಿಯೇಷನ್ (ಪಾಟಾ)ಸಮಾವೇಶಬೆಂಗಳೂರಿನಲ್ಲಿ ಸೆ.6ರಿಂದ ಮೂರುದಿನ ನಡೆಯಲಿದೆ.ಸಮಾವೇಶಉದ್ಘಾಟನೆಗೆ ಪ್ರಧಾನಿ ನರೇಂದ್ರಮೋದಿ ಅವರನ್ನು ಆಹ್ವಾನಿಸಲಾಗಿದೆಎಂದು ಉನ್ನತ ಶಿಕ್ಷಣ ಸಚಿವ ಆರ್.ವಿದೇಶಪಾಂಡೆ ತಿಳಿಸಿದ್ದಾರೆ.
ಪ್ರಧಾನಮಂತ್ರಿಗಳನ್ನು ಏಪ್ರಿಲ್ 23ರಂದುಭೇಟಿ ಮಾಡಿ ಸಮಾವೇಶಕ್ಕೆ ಆಗಮಿಸುವಂತೆಆಮಂತ್ರಿಸಲಾಗಿದೆ.ಮುಖ್ಯಮಂತ್ರಿಸಿದ್ದರಾಮಯ್ಯ ಅವರು ಸಮಾವೇಶಕ್ಕೆಆಗಮಿಸುವಂತೆ ಕೋರಿ ಮನವಿಕಳುಹಿಸಿದ್ದರು. ಸಮಾವೇಶದಿಂದಕೇವಲ ಕರ್ನಾಟಕ ಪ್ರವಾಸೋದ್ಯಮಕ್ಕೆಮಾತ್ರವಲ್ಲದೇ ಭಾರತದ ಪ್ರವಾಸೋದ್ಯಮಕ್ಕೂಅನುಕೂಲವಾಗಲಿದೆ. ಪ್ರಧಾನಮಂತ್ರಿಗಳು ಸಕಾರಾತ್ಮಕವಾಗಿಸ್ಪಂದಿಸಿದ್ದಾರೆ ಎಂದು ಅವರುಹೇಳಿದ್ದಾರೆ.
ರಾಜ್ಯದಲ್ಲಿಎಎಸ್ಐ (ಪ್ರಾಚ್ಯವಸ್ತುಸಂಶೋಧನಾ ಇಲಾಖೆ)ವ್ಯಾಪ್ತಿಯಲ್ಲಿರುವಪ್ರವಾಸೋದ್ಯಮ ಕೇಂದ್ರಗಳಲ್ಲಿಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಎಎಸ್ಐನಿಂದ ಅನುಮತಿಪಡೆಯಬೇಕಿದೆ. ಈನಿಟ್ಟಿನಲ್ಲಿ ಎಎಸ್ಐ ನಿಯಮಾವಳಿಸಡಿಲಿಸುವಂತೆ ಪ್ರಧಾನ ಮಂತ್ರಿಗಳಿಗೆ,ಕೇಂದ್ರಪ್ರವಾಸೋದ್ಯಮ ಸಚಿವರು,ಸಂಸ್ಕೃತಿಸಚಿವರು ಹಾಗೂ ಎಎಸ್ಐ ಡಿಜಿಅವರಿಗೆ ಮನವರಿಕೆ ಮಾಡಿಕೊಡಲಾಯಿತು.ಇದಕ್ಕೆ ಪ್ರಧಾನಮಂತ್ರಿಗಳು ಸಕಾರಾತ್ಮಕವಾಗಿಸ್ಪಂದಿಸಿದ್ದಾರೆ ಎಂದು ಅವರುತಿಳಿಸಿದರು.
ಸ್ವದೇಶದರ್ಶನ ಪ್ರಸಾದ ಯೋಜನೆಗಳಡಿಕರ್ನಾಟಕ ಯಾತ್ರಾ ಸ್ಥಳಗಳನ್ನುಆಯ್ಕೆ ಮಾಡಿಕೊಳ್ಳುವಂತೆ ಮನವಿಮಾಡಿದ್ದೇವೆ.ಸ್ವದೇಶ ಯೋಜನೆಯಡಿಕರ್ನಾಟಕವನ್ನು ಹೊರತು ಪಡಿಸಿದೇಶದ ಇತರ 12 ನಗರಆಯ್ಕೆ ಮಾಡಲಾಗಿದೆ ಎಂದರು.
ವಿಕೇಂದೀಕರಣಕ್ಕೆಆಗ್ರಹ
ರಾಜ್ಯದಕರಾವಳಿ ಪ್ರದೇಶ ಹಾಗೂ ಅಲ್ಲಿನಪ್ರವಾಸೋದ್ಯಮದ ಬಗ್ಗೆ ಪ್ರಸ್ತಾಪಿಸಿದಅವರು ಸಿಆರ್ ಝಡ್ ನಿಯಮದಲ್ಲಿ ಸಡಿಲಿಕೆ ಮಾಡದಿದ್ದರೆ ಅಭಿವೃದ್ಧಿಅಸಾಧ್ಯ.ಸ್ವಾಮಿನಾಥನ್ಶಿಫಾರಸ್ಸಿನಂತೆ ನಿಯಮ ರೂಪಿಸುವಅಗತ್ಯವಿದೆ ಹಾಗೂ ಅದರಂತೆರಾಜ್ಯದಲ್ಲಿ 42ಕಡಲತೀರ ಹಾಗೂ 4ದ್ವೀಪಗಳನ್ನುಗುರುತಿಸಿ ಕೇಂದ್ರಕ್ಕೆ ಪ್ರಸ್ತಾವನೆಸಲ್ಲಿಸಿದೆ.