ಬೆಂಗಳೂರು: ಮತದಾನ ಕಡ್ಡಾಯ ಮಾಡುವ ರಾಜ್ಯದ ಬಹು ನಿರೀಕ್ಷಿತ ಪಂಚಾಯತ್ ರಾಜ್ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದು. ಈಗ ಕಾಯ್ದೆಯಾಗಿ ಅನುಷ್ಠಾನೊಗೊಂಡಿದೆ. ಹೀಗಾಗಿ ಮೇ ಕೊನೆಯ ಹಾಗೂ ಜೂನ್ ಮೊದಲ ವಾರದಲ್ಲಿ ನಡೆಯುವ 6083 ಗ್ರಾಮ ಪಂಚಾಯಿತಿಗಳ ಚುನಾವಣೆಯಲ್ಲಿ ಇದು ಜಾರಿಗೆ ಬರಲಿದೆ.
ಹೊಸದಾಗಿ ರಚನೆಯಾಗಿರುವ 439 ಸೇರಿದಂತೆ 6083 ಗ್ರಾ.ಪಂ. ಹಾಗೂ ಮುಂದೆ ನಡೆಯುವ ಎಲ್ಲ ಪಂಚಾಯಿತಿ ಚುನಾವಣೆಗೆ ಮತದಾನ ಕಡ್ಡಾಯ. ಅಲ್ಲದೇ ಅಧ್ಯಕ್ಷ
ಉಪಾಧ್ಯಕ್ಷರ ಅವಧಿ 5 ವರ್ಷಗಳಾಗಲಿದೆ. ಪರಿಶಿಷ್ಟರು ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾದ ಪ್ರವರ್ಗ ಮೀಸಲಿನ ಸರದಿ ಹತ್ತು ವರ್ಷಗಳಿಗೆ ಮುಂದುವರಿಯಲಿದೆ. ಶೇ. 50ಸ್ಥಾನ ಮಹಿಳೆಯರಿಗೆ ಮೀಸಲು. ಈ ಕಾಯಿದೆ ಮೂಲಕ ಪಂಚಾಯಿತಿ ಚುನಾವಣೆಗಳಲ್ಲೂ ನೋಟಾ ವ್ಯವಸ್ಥೆ ಜಾರಿಗೆ ಬರಲಿದೆ.
ವಿಧಾನ ಮಂಡಲದಿಂದ ಅಂಗೀಕೃತ ವಿಧೇಯಕದ ಕೆಲ ಅಂಶಗಳಿಗೆ ರಾಜ್ಯಪಾಲರು ವಿವರಣೆ ಕೇಳಿದ್ದರು. ಅಡ್ವೋಕೇಟ್ ಜನರಲ್ ಅಭಿಪ್ರಾಯವನ್ನೂ ಕೇಳಿದ್ದರು.