ವಿಧಾನಮಂಡಲ ಅಧಿವೇಶನ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಕೊನೆ ಕ್ಷಣದ ಮಂಡನೆಗೆ ಸಭಾತ್ಯಾಗದ ಆಕ್ರೋಶ

ಅಧಿವೇಶನದ ಕೊನೆಯಲ್ಲಿ ಮೂರು ವಿಧೇಯಕಕ್ಕೆ ಒಪ್ಪಿಗೆ ಪಡೆಯುವ ಸರ್ಕಾರದ ಸಾಹಸಕ್ಕೆ ವಿರೋಧ ಪಕ್ಷಗಳು ಅಡ್ಡಿಪಡಿಸಿದ ಪ್ರಸಂಗ ಶನಿವಾರ ನಡೆಯಿತು. ಆದರೆ, ಪ್ರತಿಪಕ್ಷಗಳ ಸಭಾತ್ಯಾಗದ ನಡುವೆಯೇ ಸರ್ಕಾರ ಮೂರು ವಿಧೇಯಕಕ್ಕೆ ಸದನದ ಒಪ್ಪಿಗೆ ಪಡೆದುಕೊಂಡಿತು...

ವಿಧಾನ ಪರಿಷತ್: ಅಧಿವೇಶನದ ಕೊನೆಯಲ್ಲಿ ಮೂರು ವಿಧೇಯಕಕ್ಕೆ ಒಪ್ಪಿಗೆ ಪಡೆಯುವ ಸರ್ಕಾರದ ಸಾಹಸಕ್ಕೆ ವಿರೋಧ ಪಕ್ಷಗಳು ಅಡ್ಡಿಪಡಿಸಿದ ಪ್ರಸಂಗ ಶನಿವಾರ ನಡೆಯಿತು. ಆದರೆ, ಪ್ರತಿಪಕ್ಷಗಳ ಸಭಾತ್ಯಾಗದ ನಡುವೆಯೇ ಸರ್ಕಾರ ಮೂರು ವಿಧೇಯಕಕ್ಕೆ ಸದನದ ಒಪ್ಪಿಗೆ ಪಡೆದುಕೊಂಡಿತು.

ಶನಿವಾರ ಅಧಿವೇಶನದಲ್ಲಿ ಉಪ ಸಭಾಪತಿ ಚುನಾವಣೆಗಷ್ಟೆ ಸೀಮಿತವಾಗಿತ್ತು. ಆದರೆ, ಉಪಸಭಾಪತಿ ಆಯ್ಕೆ ನಂತರ ಮೂರು ಬಿಲ್ ಒಪ್ಪಿಗೆಗೆ ಸರ್ಕಾರ ಮುಂದಾಯಿತು. ತಕ್ಷಣವೇ
ಪ್ರತಿಕ್ರಿಯೆ ನೀಡಿದ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ, ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ, ಹಿರಿಯ ಸದಸ್ಯ ಶಾಣಪ್ಪ, ಗಣೇಶ್ ಕಾರ್ಣಿಕ್ ಅವರು ಕೊನೆ ಹಂತದಲ್ಲಿ
ವಿಧೇಯಕವನ್ನು ತರುವುದು ಒಳ್ಳೆಯ ಬೆಳವಣಿಗೆಯಲ್ಲ, ನಾವು ಒಪ್ಪಿಗೆ ಕೊಡಲು ಸಾಧ್ಯವೇ ಇಲ್ಲ. ಸೆಪ್ಟೆಂಬರ್‍ನಲ್ಲಿ ನಡೆಯುವ ವಿಶೇಷ ಅಧಿವೇಶನದಲ್ಲಿ ತನ್ನಿ ಸಂತೋಷದಿಂದ
ಒಪ್ಪಿಗೆ ಕೊಡುತ್ತೇವೆಂದು ಪಟ್ಟು ಹಿಡಿದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಕಾನೂನು ಸಚಿವ ಟಿ.ಬಿ. ಜಯಚಂದ್ರ ಹಾಗೂ ಸ್ವತಃ ಮುಖ್ಯಮಂತ್ರಿ ಸಿದ್ದರಾಮ
ಯ್ಯನವರು ಪ್ರತಿಪಕ್ಷಗಳ ಮನವೊಲಿಕೆಗೆ ಪ್ರಯತ್ನಿಸಿದರು. ಆದರೆ, ಪ್ರತಿಪಕ್ಷಗಳು ಸರ್ಕಾರದ ಮಾತು ಕೇಳಲು ಸಿದಟಛಿವರಲಿಲ್ಲ. ತರಾತುರಿಯಲ್ಲಿ ಮೂರು ವಿಧೇಯಕಕ್ಕೆ ಒಪ್ಪಿಗೆ
ನೀಡುವುದ ಸರಿಯಲ್ಲ, ಚರ್ಚೆಯಾಗಬೇಕು.

ಈ ಹಿನ್ನೆಲೆಯಲ್ಲಿ ನೀವು ಬೇಕಿದ್ದರೆ ವಿಧೇಯಕವನ್ನು ಪಾಸ್ ಮಾಡಿಕೊಳ್ಳಿ ಎಂದು ಸಭಾತ್ಯಾಗ ನಡೆಸಿದರು. ಪ್ರತಿಪಕ್ಷ ಸದಸ್ಯರ ಅನುಪಸ್ಥಿತಿಯಲ್ಲಿ ಕರ್ನಾಟಕ ರಾಜ್ಯ ಮೋಟಾರು ವಾಹನಗಳ (ವಿಶೇಷ ಉಪಬಂಧಗಳ) ವಿಧೇಯಕ, ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ, ಕರ್ನಾಟಕ ಕುಲಾಂತರಿ ಮತ್ತು ತಳಿ ವಿಜ್ಞಾನದ ಪ್ರಕಾರ ಮಾರ್ಪಾಟಾದ ಹತ್ತಿ ಬೀಜಗಳ (ಮಾರಾಟ ಬೆಲೆಯ  ನಿಗದಿ ಮತ್ತು ಪರಿಹಾರದ ಸಂದಾಯ) ವಿಧೇಯಕಕ್ಕೆ ಸರ್ಕಾರ ಸದನದ ಒಪ್ಪಿಗೆ ಪಡೆದುಕೊಂಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು

ಚಿಂತಾಮಣಿಯ Dictator, ನಿನ್ನ ವಿರುದ್ಧ ಸಮರ ನಿರಂತರ: ಎಂಸಿ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಮತ್ತೆ ಕಿಡಿ

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ, ಕಾರು ಆಪೋಷನ, ಕೂದಲೆಳೆ ಅಂತರದಲ್ಲಿ ಚಾಲಕ ಬಚಾವ್-Video