ಫಲಪುಷ್ಪ ಪ್ರದರ್ಶನದಲ್ಲಿ ರಾಣಿ ಪ್ರಮೋದಾ ದೇವಿ 
ಜಿಲ್ಲಾ ಸುದ್ದಿ

ಫಲಪುಷ್ಪ ಪ್ರದರ್ಶನಕ್ಕೆ ಅದ್ಧೂರಿ ಚಾಲನೆ

ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಶುಕ್ರವಾರ ಮೈಸೂರಿನ ರಾಣಿ ಪ್ರಮೋದಾದೇವಿಯವರಿಂದ ಅದ್ಧೂರಿ ಚಾಲನೆ ದೊರೆಯಿತು...

ಬೆಂಗಳೂರು: ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಶುಕ್ರವಾರ ಮೈಸೂರಿನ ರಾಣಿ ಪ್ರಮೋದಾದೇವಿಯವರಿಂದ ಅದ್ಧೂರಿ ಚಾಲನೆ ದೊರೆಯಿತು. ಪ್ರಮೋದಾ ದೇವಿ, ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಮೈಸೂರು ಬ್ಯಾಂಡ್, ಅಶ್ವದಳ, ಸುಮಂಗಲಿಯರು ಕುಂಭ ಕಲಶಗಳ ಮೂಲಕ ವೇದಮಂತ್ರ ಘೋಷ, ನಾದಸ್ವರದೊಂದಿಗೆ ಬರಮಾಡಿಕೊಳ್ಳಲಾಯಿತು. ಗಾಜಿನ ಅರಮನೆಯಲ್ಲಿ ಸಾವಿರಾರು ಹೂವುಗಳಿಂದ ಸಿದ್ಧಗೊಂಡಿದ್ದ ಬೆಂಗಳೂರು ಅರಮನೆಯನ್ನು ನೋಡಿದರೆ ನಿಜವಾದ ಅರಮನೆಯೇ ನಾಚುವಂತಿತ್ತು. ಅಲ್ಲಲ್ಲಿ ಹೂವಿನ ಕುಂಡಗಳು, ಹೂವಿನ ಕಮಾನು ನೋಡುಗರ ಗಮನ ಸೆಳೆಯುತ್ತಿದ್ದವು. ಆರ್ಕಿಡ್ಸ್, ಆಂಥೋರಿಯಂ, ಟ್ಯಾಬಿರೋಸ್, ಸಿಲೋಶಿಯಾ, ಜರ್ಬೆರಾ, ಗುಲಾಬಿ, ಪೂಷಿಯಾ ಸೈಕ್ಲೊಮನ್, ಜಿನಿಯಾ ಹೂವುಗಳೆಲ್ಲವನ್ನೂ ಉಪಯೋಗಿಸಿ ಅರಮನೆಯನ್ನು ಸಿದ್ಧಗೊಳಿಸಲಾಗಿತ್ತು.

ವಿಶೇಷ ಪರಿಣಿತರ 25ರಿಂದ 30 ಜನರ ತಂಡ ಸುಮಾರು 15 ದಿನಗಳ ಕಾಲ ವಿನ್ಯಾಸಗೊಳಿಸಿ ಸುಮಾರು 3 ಲಕ್ಷಕ್ಕೂ ಹೆಚ್ಚಿನ ಡಚ್ ತಳಿಯ ವಿಶೇಷ ಗುಲಾಬಿ ಹೂವನ್ನು ಬಳಸಿಆಕರ್ಷಕವಾಗಿ ಮೂಡಿಬರುವಂತೆ ಮಾಡಿದ್ದರು. ಪುಷ್ಪಪ್ರದರ್ಶನದಲ್ಲಿ ಇರಿಸಿದ್ದ ಹೂವುಗಳ ಜತೆಗೆ ಅದರ ಹೆಸರನ್ನು ಬರೆದಿರುವುದು ಅನೇಕ ಶಾಲಾ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿತ್ತು. ಯದುವಂಶದ ಚಾಮರಾಜ ಒಡೆಯರ್, ಮುಮ್ಮಡಿ ಕೃಷ್ಣರಾಜ ಒಡೆಯರ್, ನಾಲ್ವಡಿ ಕೃಷ್ಮರಾಜ  ಒಡೆಯರ್ ಮತ್ತು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕಲಾಕೃತಿಗಳು ಈ ಬಾರಿಯ ವಿಶೇಷವಾಗಿತ್ತು.

 ಆ ವಿಗ್ರಹಗಳೊಂದಿಗೆರಾಣಿ ಪ್ರಮೋದಾ ದೇವಿ ಮಹಾರಾಜ  ಯದುವೀರ ಅವರು ಫೋಟೋ ಕ್ಲಿಕ್ಕಿಸಿಕೊಂಡ ಬಗೆ ವಿಶೇಷವಾಗಿತ್ತು. ಗಾಜಿನ ಮನೆಯ ಪಕ್ಕ ಪಲ್ಲಕ್ಕಿ ಹಾಗೂ ರಾಜಸಿಂಹಾಸನಗಳು, ಆವರಣದಾಚೆ 4 ಫಿರಂಗಿಗಳ ಜತೆಗೆ ಸಸ್ಯ ತೋಟ, ವಾದ್ಯರಂಗ ಪ್ರದೇಶದಲ್ಲಿ ಭಾರತ ಸಂಸ್ಕೃತಿಯ ಪ್ರತೀಕವಾದ ವಿವಿಧ ಬಗೆಯ ವಾದ್ಯ ಪರಿಕರಗಳಾದ ಹಾರ್ಮೋನಿಯಂ, ಸ್ಯಾಕ್ಸೊಫೋನ್, ಗ್ರಾಮಫೋನ್ ಮತ್ತು ಮೃದಂಗ ವಿನ್ಯಾಸವು ಮೆರುಗನ್ನು ಹೆಚ್ಚಿಸಿದ್ದವು. ಹಾಪ್‍ಕಾಮ್ಸ್  ವತಿಯಿಂದ ಹಿಂದೆಂದೂ ನೋಡಿರದ ದೊಣ್ಣೆ ಮೆಣಸಿನಕಾಯಿ (ಕ್ಯಾಪ್ಸಿಕಂ) ಆನೆ ಆಕೃತಿ, ಕಲಾವಿದೆ ಗೌರಿಯವರಿಂದ ಮೂಡಿಬಂದ ಕಲಾಂ ಅವರ ಕಲಾಕೃತಿ ಸುಂದರವಾಗಿತ್ತು. ಮಹಿಳೆಯರು, ಮಕ್ಕಳು, ಯುವತಿಯರೆಲ್ಲರೂ ಆಕೃತಿಗಳೊಂದಿಗೆ ತಮ್ಮ ಚಿತ್ರಗಳನ್ನು ಕ್ಲಿಕ್ಕಿಸಿಕೊಂಡರು.

ಲಾಲ್‍ಬಾಗ್ ಸಸ್ಯತೋಟದ ಹಸಿರಿಗೆ ಮತ್ತಷ್ಟು ಬಣ್ಣ ತುಂಬಿ ನೋಡುಗರ ಕಣ್ಣಿಗೆ ಆಕರ್ಷಣೆಯುಂಟು ಮಾಡಲು ಲಾಲ್‍ಬಾಗ್‍ನ ಎಲ್ಲ ಆಯ್ದ ಪ್ರದೇಶಗಳಲ್ಲಿ ಆಕರ್ಷಕ ಟಬ್‍ಗಳಲ್ಲಿ ಆಳೆತ್ತೆರದ ಟೋಪಿಯರಿ ಗಿಡಗಳು, ಬಣ್ಣಬಣ್ಣದ ಚಿತ್ತಾರದ ದರ್ಶನ ನೀಡಬಲ್ಲ ತರಹೇವಾರಿ ಪೊದರು ಹೂಗಿಡಗಳನ್ನು ಗುಂಪುಗುಂಪಾಗಿ ನೆಟ್ಟಿದ್ದು ಆಕರ್ಷಣೆಗೆ ಪಾತ್ರವಾಗಿದೆ. ವಯಸ್ಕರಿಗೆ 50 ಹಾಗೂ ಮಕ್ಕಳಿಗೆ 10 ಪ್ರವೇಶ ಶುಲ್ಕ ವಿಧಿಸಲಾಗಿದೆ. ಕಾರ್ಯಕ್ರಮ ಇನ್ನು ಒಂದು ವಾರ ನಡೆಯಲಿದ್ದು ಆ.16 ರವರೆಗೆ ಪ್ರದರ್ಶನ ನಡೆಯಲಿದ್ದು. ಆಗಸ್ಟ್ 14 ಮತ್ತು ಆಗಸ್ಟ್ 15 ರಂದು ಶಾಲಾ ಮಕ್ಕಳಿಗೆ ಉಚಿತ ಪ್ರವೇಶ.
 
ಬೆಂಗಳೂರು ಅರಮನೆ ಹಾಗೂ ಮಹಾರಾಜರ ಕೊಡುಗೆಯನ್ನು ಬಿಂಬಿಸುವ ಮೂರ್ತಿಗಳ ಪ್ರದರ್ಶನ ನಾಡಿನ ಗೌರವವನ್ನು ಹೆಚ್ಚಿಸುತ್ತದೆ. ವಿವಿಧ ಜಾತಿ, ದೇಶಗಳ ಹೂವುಗಳನ್ನು ಒಂದೇ ಸೂರಿನಡಿಯಲ್ಲಿ ತಂದು ಜನತೆ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದಾರೆ. ಪರಿಸರ ನಿರ್ವಹಣೆ, ಗಿಡ ಮರಗಳ ಸಂರಕ್ಷಣೆಣೆ ಹೇಗೆ ಮಾಡಬೇಕು ಎನ್ನುವುದಕ್ಕೆ ಲಾಲ್‍ಬಾಗ್ ಸಾಕ್ಷಿಯಾಗಿದೆ.
 ಪ್ರಮೋದಾದೇವಿ, ಮೈಸೂರು ರಾಣಿ

ಪರಿಸರ ಕಾಳಜಿ ಇಂದು ಕಳೆದುಹೋಗುತ್ತಿದ್ದು ಅದಕ್ಕೆ ಪುನರ್ಜೀವನದ ಅಗತ್ಯವಿದೆಯ ಪುಷ್ಪಗಳ ತೋಟ, ತಾರಸಿ ತೋಟಗಳು, ಕೈ ತೋಟಗಳನ್ನು ಎಲ್ಲರ ಮನೆಯಲ್ಲೂ ಮಾಡಬೇಕು. ಅದರಿಂದ ಮನಸ್ಸಿಗೆ ಆನಂದ ದೊರೆಯುವುದಲ್ಲದೇ ಪರಿಸರ ಸಂರಕ್ಷಣೆ ಕಾರ್ಯವನ್ನೂ ಮಾಡಿದಂತಾಗುತ್ತದೆ.
- ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಸೂರು ಮಹಾರಾಜ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ