ಲೋಕಾಯುಕ್ತ ಸಂಸ್ಥೆ 
ಜಿಲ್ಲಾ ಸುದ್ದಿ

ಲೋಕಾ ನಾಶಕ್ಕೆ ಮುಂದಾದ ಸರ್ಕಾರ: ಜಗದೀಶ್ ಶೆಟ್ಟರ್ ಆರೋಪ

ರಿಜಿಸ್ಟ್ರಾರ್ ಹುದ್ದೆಗೆ ಐಎಎಸ್ ಅಧಿಕಾರಿ ಜಾಫರ್ ಅವರನ್ನು ನೇಮಿಸುವ ಮೂಲಕ ಐಎಎಸ್ ಲಾಬಿಯನ್ನು ರಕ್ಷಿಸಲು ಹೊರಟಿದೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.

ಬೆಂಗಳೂರು: ಲೋಕಾಯುಕ್ತ ಸಂಸ್ಥೆಯನ್ನು ನಾಶ ಮಾಡಲು ಸರ್ಕಾರ ಮುಂದಾಗಿದ್ದು, ರಿಜಿಸ್ಟ್ರಾರ್ ಹುದ್ದೆಗೆ ಐಎಎಸ್ ಅಧಿಕಾರಿ ಜಾಫರ್ ಅವರನ್ನು ನೇಮಿಸುವ ಮೂಲಕ ಐಎಎಸ್ ಲಾಬಿಯನ್ನು ರಕ್ಷಿಸಲು ಹೊರಟಿದೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.

ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದಾಗ ಜಾಫರ್ ಅವರು ಹಲವು ಆರೋಪಗಳನ್ನು ಹೊತ್ತುಕೊಂಡಿದ್ದರು. ಲೋಕಾಯುಕ್ತ ರಿಜಿಸ್ಟ್ರಾರ್ ಮತ್ತು ಉಪ ರಿಜಿಸ್ಟ್ರಾರ್ ಹುದ್ದೆಗೆ ಜಿಲ್ಲಾ ನ್ಯಾಯಾಧೀರನ್ನು ನೇಮಕ ಮಾಡಲಾಗುತ್ತದೆ. ಆದರೆ, ಆರೋಪಿತ ಅಧಿಕಾರಿಯನ್ನು ಈ ಹುದ್ದೆಗೆ ನೇಮಕ ಮಾಡುವ ಮೂಲಕ ಸರ್ಕಾರ ನ್ಯಾಯಾಂಗಕ್ಕೆ ಅಪಮಾನ ಮಾಡಿದೆ ಎಂದು ಅಭಿಪ್ರಾಯಪಟ್ಟರು.

ಲೋಕಾಯುಕ್ತದ ಡೆಪ್ಯೂಟಿ ರಿಜಿಸ್ಟ್ರಾರ್ ಹಾಗೂ ಅಸಿಸ್ಟಂಟ್ ರಿಜಿಸ್ಟ್ರಾರ್ ಹುದ್ದೆಗಳಲ್ಲಿ ಅನೇಕ ಮಂದಿ ಜಿಲ್ಲಾ ನ್ಯಾಯಾಧೀಶರು ಇರುತ್ತಾರೆ. ಅವರ ಮೇಲೆ ಐಎಎಸ್ ಅಧಿಕಾರಿಯನ್ನು ರಿಜಿಸ್ಟ್ರಾರ್ ಆಗಿ ನೇಮಿಸಿದರೆ ಐಎಎಸ್ ಅಧಿಕಾರಿಗಳು ನ್ಯಾಯಾಧೀಶರಿಗಿಂತ ಎತ್ತರಕ್ಕೆ ಹೋಗಿ ಕೂರುತ್ತಾರೆ. ಇದು ಕೆಳ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಂದಿಸುತ್ತದೆ. ವಾಸ್ತವವಾಗಿ ಈ ಹುದ್ದೆಗೆ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ಮುಣುಕಿ ನರೇಂದ್ರಕುಮಾರ್ ಬಸವರಾಜ್ ಎಂಬುವವರನ್ನು ನೇಮಕ ಮಾಡುವಂತೆ ಶಿಫಾರಸು ಮಾಡಿತ್ತು.

ಆದರೆ, ಸರ್ಕಾರ ಈ  ಶಿಫಾರಸು ಉಲ್ಲಂಘಿಸಿ ಜಾಫರ್ ಅವರನ್ನು ನೇಮಕ ಮಾಡಿದೆ ಎಂದು ಅವರು ಆರೋಪಿಸಿದರು. 1984ರಲ್ಲಿ ಲೋಕಾಯುಕ್ತ ಸಂಸ್ಥೆ ಅಧಿಕಾರಕ್ಕೆ ಬಂದ ನಂತರ 1988ರಲ್ಲಿ ಮಾತ್ರ ಇಬ್ಬರು ಐಎಎಸ್ ಅಅಧಿಕಾರಿಗಳನ್ನು ಸಂಸ್ಥೆಗೆ ನೇಮಕ ಮÁಡಲಾಗಿತ್ತು. ಅದು ಕೆಲವು ತಿಂಗಳುಗಳಿಗೆ ಸೀಮಿತವಾಗುವಂತೆ ಇತ್ತು. ಇದಾದ ನಂತರ ಇಪ್ಪತ್ತೇಳು ವರ್ಷಗಳ ಕಾಲ ಐಎಎಸ್ ಅಧಿಕಾರಿ ನೇಮಕವಾಗಿರಲಿಲ್ಲ.

ಸರ್ಕಾರಕ್ಕೆ ಮೊದಲು ಲೋಕಾಯುಕ್ತ ಸಂಸ್ಥೆ ನಾಶವಾಗಬೇಕಿದೆ ಎಂದು ಶೆಟ್ಟರ್ ಆರೋಪಿಸಿದರು. ಲೋಕಾಯುಕ್ತದಲ್ಲಿ ಐಎಎಸ್ ಅಧಿಕಾರಿಗಳ ವಿರುದ್ಧ  850  ಪ್ರಕರಣಗಳು ಮೊಕದ್ದಮೆಗಳು ದಾಖಲಾಗಿವೆ. ಈ ಪ್ರಕರಣಗಳನ್ನು ಮುಚ್ಚಿ ಹಾಕಲು ಸರ್ಕಾರ ಯತ್ನಿಸುತ್ತಿದೆಯೇ ಎಂಬ ಅನುಮಾನ ಬರುತ್ತಿದೆ. ಸರ್ಕಾರ ತಕ್ಷಣ ಈ ಆದೇಶ ಹಿಂಪಡೆಯದಿದ್ದರೆ ರಾಜಾದ್ಯಂತ ಬಿಜೆಪಿ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು. ಲೋಕಾಯುಕ್ತರ ನೇಮಕದಲ್ಲಿ ಲಂಚ ವ್ಯವಹಾರ ನಡೆದಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ನನ್ನ ಕಾಲದಲ್ಲಿ ಭಾಸ್ಕರ್ ರಾವ್ ನೇಮಕ ನಡೆದಿದ್ದರೂ ಅದು ಕೇವಲ ಜಗದೀಶ್ ಶೆಟ್ಟರ್ ಮಾಡಿರುವ ನೇಮಕವಲ್ಲ. ಅಂದು ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ, ವಿಧಾನಪರಿಷತ್ ಪ್ರತಿಪಕ್ಷ ನಾಯಕರು, ವಿಧಾನಸಭೆ, ವಿಧಾನಪರಿಷತ್ ಅಧ್ಯಕ್ಷರು ಮುಖ್ಯ ನ್ಯಾಯಮೂರ್ತಿಗಳು ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚುನಾವಣಾ ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!