ಬಿಬಿಎಂಪಿ ಕಚೇರಿ 
ಜಿಲ್ಲಾ ಸುದ್ದಿ

ಬಿಬಿಎಂಪಿ ಅಭ್ಯರ್ಥಿ ಆಯ್ಕೆ; ಒಕ್ಕಲಿಗರದ್ದೇ ಸಿಂಹಪಾಲು

ಬಿಬಿಎಂಪಿ ಚುನಾವಣೆಗಳಲ್ಲಿ ಕರ್ನಾಟಕದ ದೊಡ್ಡ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಗೆ ಉಪಯೋಗಿಸುತ್ತಿರುವ ಮೊದಲ ಮಾನದಂಡ ಜಾತಿ ಮತ್ತು ಆ ಜಾತಿಯ ಪ್ರಾಬಲ್ಯ!

ಬೆಂಗಳೂರು: ಬಿಬಿಎಂಪಿ ಚುನಾವಣೆಗಳಲ್ಲಿ ಕರ್ನಾಟಕದ ದೊಡ್ಡ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಗೆ ಉಪಯೋಗಿಸುತ್ತಿರುವ ಮೊದಲ ಮಾನದಂಡ ಜಾತಿ ಮತ್ತು ಆ ಜಾತಿಯ ಪ್ರಾಬಲ್ಯ!

ಒಂದು ನಿರ್ಧಿಷ್ಟ ಸಮುದಾಯಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಹೆಚ್ಚಿನ ಸೀಟುಗಳನ್ನು ನೀಡಿದೆ. ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳು ಈ ಎರಡು ಪಕ್ಷದ ಆಯ್ಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿ ಎಲ್ಲ ೧೯೮ ವಾರ್ಡ್ ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಜೆ ಡಿ ಎಸ್ ೧೯೫ ವಾರ್ಡ್ ಗಳಲ್ಲಿ ಸ್ಪರ್ಧಿಸುತ್ತಿದೆ. ಕಾಂಗ್ರೆಸ್ ಪಕ್ಷ ೪೯ ಒಕ್ಕಲಿಗ ಅಭ್ಯರ್ಥಿಗಳಿಗೆ ಸ್ಪರ್ಧೆಗೆ ಅವಕಾಶ ನಿಡಿದ್ದಾರೆ, ಬಿಜೆಪಿ ೪೫ ಒಕ್ಕಲಿಗ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಪಕ್ಷದ ಡಿ ಕೆ ಶಿವಕುಮಾರ್ ಮತ್ತು ಕೃಷ್ಣ ಭೈರೇಗೌಡ ಮತ್ತು ಬಿಜೆಪಿ ಪಕ್ಷದ ಆರ್ ಅಶೋಕ್ ಮತ್ತು ಸದಾನಂದ ಗೌಡ ಈ ಸಮುದಾಯದವರೇ ಆಗಿದ್ದು ಇವರು ಮಾತು ಅಭ್ಯರ್ಥಿಗಳ ಆಯ್ಕೆಯಲ್ಲಿ ಮುಂಚೂಣಿಯಲ್ಲಿದೆ ಎನ್ನಲಾಗಿದೆ.

ಅಲ್ಲದೆ ರೆಡ್ಡಿ ಸಮುದಾಯ ಕೂಡ ಒಳ್ಳೆಯ ಸಂಖ್ಯೆಯನ್ನು ಗಳಿಸಿದ್ದು ಕಾಂಗ್ರೆಸ್ ಪಕ್ಷ ೧೫ ಮತ್ತು ಬಿಜೆಪಿ ೧೫ ಸೀಟುಗಳನ್ನು ಈ ಸಮುದಾಯಕ್ಕೆ ನೀಡಿದೆ. ಇನ್ನುಳಿದಂತೆ ಹಿಂದುಳಿದ ಸಮುದಾಯಗಳಲ್ಲಿ ಕುರುಬ ಜನಾಂಗದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನ ಪಡೆದಿದ್ದಾರೆ. ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗ ಎರಡನೆ ಅತಿ ದೊಡ್ಡ ಸಮುದಾಯವಾಗಿ ಹೊರ ಹೊಮ್ಮಿದೆ.

ಕಾಂಗ್ರೆಸ್ ೨೩ ಮುಸ್ಲಿಂ ಅಭ್ಯರ್ಥಿಗಳನ್ನು ೩ ಕ್ರಿಶ್ಚಿಯನ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ, ಬಿಜೆಪಿ ೫ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ, ಹಾಗೂ ಯಾವುದೇ ಕ್ರಿಶ್ಚಿಯನ್ ಅಭ್ಯರ್ಥಿಗೆ ಅವಕಾಶ ನೀಡಿಲ್ಲ.

ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಜಾತಿ/ಸಮುದಾಯ ಆಧಾರಿತ ಸೀಟುಗಳನ್ನು ಹಂಚಿಕೆ ಮಾಡಿರುವುದು ಹೀಗಿದೆ.
ಸಮುದಾಯ       ಕಾಂಗ್ರೆಸ್       ಬಿಜೆಪಿ

ಒಕ್ಕಳಿಗೆ               ೪೯              ೪೫
ಪಜಾ/ಪವ            ೩೫              ೩೦
ಕುರುಬ                ೨೩              ೧೯
ಮುಸ್ಲಿಂ                ೨೩               ೫
ರೆಡ್ಡಿ                    ೧೫            ೧೪
ಲಿಂಗಾಯಿತ           ೩                ೩
ಬ್ರಾಹ್ಮಣ               ೨                ೬

 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!