ಬೆಂಗಳೂರು: ಲೋಕಾಯುಕ್ತ ರಿಜಿಸ್ಟಾರ್ ಹುದ್ದೆಗೆ ಐಎಸ್ ಅಧಿಕಾರಿ ಡಾ.ಪಿ.ಸಿ ಜಾಫರ್ ನೇಮಕ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿ ತಿದ್ದುಪಡಿ ಅರ್ಜಿ ಸಲ್ಲಿಸುವಂತೆ ಹೈಕೋರ್ಟ್ ಅರ್ಜಿ ದಾರರ ಪರ ವಕೀಲರಿಗೆ ತಿಳಿಸಿದೆ.
ಜಾಫರ್ ನೇಮಕ ಪ್ರಶ್ನಿಸಿ ವಕೀಲ ಆನಂದಮೂರ್ತಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು, ವಿಚಾರಣೆ ನಡೆಸಿದ ನ್ಯಾ. ಜಿ.ನರೇಂದರ್ ಅವರ ವಿಭಾಗೀಯ ಪೀಠ, ಲೋಕಾಯುಕ್ತ ರಿಜಿಸ್ಟಾರ್ ನೇಮಕ ಕಾನೂನು ಬಾಹಿರ ಎಂದು ಹೇಗೆ ಹೇಳುತ್ತಿರಿ. ನಿಯಮದಲ್ಲಿ ಐಎಎಸ್ ಅಧಿಕಾರಿಯನ್ನು ಸಹ ರಿಜಿಸ್ಟಾರ್ ಆಗಿ ನೇಮಿಸಬಹುದೆಂದು ಇದೆಯಲ್ಲ ಎಂದು ಪ್ರಶ್ನಿಸಿತ್ತು.
ಇದಕ್ಕೆ ಉತ್ತರಿಸಿದ ಅರ್ಜಿದಾರರ ಪರ ವಕೀಲ ಅರುಣ್ ಶ್ಯಾಮ್ ಈ ಹುದ್ದೆಗೆ ನೇಮಕ ಮಾಡಬೇಕಾದಲ್ಲಿ ಲೋಕಾಯುಕ್ತರ ಒಪ್ಪಿಗೆ ಪಡೆದಿರಬೇಕು, ಇಲ್ಲಿ ಅದನ್ನು ಪಾಲಿಸಲಾಗಿಲ್ಲ. ಕರ್ನಾಟಕ ಲೋಕಾಯುಕ್ತ ನಿಯಮ 1988ರ ಪ್ರಕರಾವೂ ನಡೆದಿಲ್ಲ ಎಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ನೇಮಕಾತಿ ನಿಯಮ ಪ್ರಶ್ನಿಸಿ ತಿದ್ದುಪಡಿ ಅರ್ಜಿ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು 2 ವಾರಕ್ಕೆ ಮುಂದೂಡಿತು.