ಮುಂದುವರಿದ ರೈತರ ಆತ್ಮಹತ್ಯೆ: ಸಾಲಕ್ಕೆ ಎಂಟು ಬಲಿ (ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಮುಂದುವರಿದ ರೈತರ ಆತ್ಮಹತ್ಯೆ: ಸಾಲಕ್ಕೆ ಎಂಟು ಬಲಿ

ರಾಜ್ಯದಲ್ಲಿ ಸಾಲಬಾಧೆಯ ಸುಳಿಯಲ್ಲಿ ಸಿಲುಕಿ ಸೋಮವಾರ ಮತ್ತೆ ಎಂಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಇನ್ನೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ...

ಬೆಂಗಳೂರು: ರಾಜ್ಯದಲ್ಲಿ ಸಾಲಬಾಧೆಯ ಸುಳಿಯಲ್ಲಿ ಸಿಲುಕಿ ಸೋಮವಾರ ಮತ್ತೆ ಎಂಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಇನ್ನೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಕುಣಿಗಲ್ ತಾಲೂಕಿನ ಆಲಪ್ಪನಗುಡ್ಡೆಯ ರೈತ ಫಯಾಜ್ (48) ವಿಷ ಸೇವಿಸಿದ್ದಾರೆ. ಮಳವಳ್ಳಿ ತಾಲೂಕಿನ ದೇವೀರದ ಬಸವೇಗಡ (55) ವಿಷ ಕುಡಿದಿದ್ದಾರೆ. ಕಬ್ಬು ಬೆಳೆಯಲ್ಲಿ ನಷ್ಟವಾಗಿದ್ದಲ್ಲದೆ, ರು.5 ಲಕ್ಷ ಸಾಲವಿತ್ತು. ಹೊಳಲ್ಕೆರೆ ತಾಲೂಕಿನ ಶಿವಪುರ ಗ್ರಾಮದ ಸೋಮಶೇಖರ್ (34) ನೇಣಿಗೆ ಶರಣಾಗಿದ್ದಾರೆ.ಬ್ಯಾಂಕ್‍ನಲ್ಲಿ ರು.1 ಲಕ್ಷ ಸಾಲ ಮಾಡಿದ್ದರು. ಮುದ್ದೇಬಿಹಾಳ ತಾಲೂಕಿನ ನಾಲತವಾಡ ದ ರೈತ ಬಾಪುಸಾಹೇಬ ಅಣ್ಣಸಾಹೇಬ ದೇಶಮುಖ (50) ನೇಣುಬಿಗಿದುಕೊಂಡಿದ್ದಾರೆ.

ಇವರಿಗೆ ಮೊದಲು 11.5 ಎಕರೆ ಜಮೀನಿತ್ತು. ಬ್ಯಾಂಕ್ ಮತ್ತು ಖಾಸಗಿ ಸಾಕಷ್ಟು ಸಾಲವಿದ್ದರಿಂದ 10 ಎಕರೆ ಜಮೀನನ್ನು ಮಾರಿದ್ದರು. ನವಲಗುಂದ ತಾಲೂಕಿನ ಬಳ್ಳೂರು ಗ್ರಾಮದ ಶಿವನಗೌಡ ನಿಂಗನಗೌಡ ಫಕ್ಕೀರಗೌಡ (58) ವಿಷ ಸೇವಿಸಿದ್ದಾರೆ. 4.32 ಎಕರೆ ಹೊಲವಿತ್ತು. ರು.3.50 ಸಾವಿರ ಸಾಲವಿತ್ತು. ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿ ತೆಂಕನಕೊಪ್ಪಲು ಗ್ರಾಮದ ತ್ಯಾಗರಾಜ ಚಾರಿ (40) ನೇಣಿಗೆ ಕೊರಳೊಡ್ಡಿದ್ದಾರೆ. ಚಿಂಚೋಳಿ ತಾಲೂಕಿನ ಪೋಲಕಪಳ್ಳಿ ತಾಂಡಾದ ಸಾಮರಾವ ಸೆಟ್ಟಿ ಚವ್ಹಾಣ (30) ವಿಷ ಸೇವಿಸಿದ್ದಾರೆ. ಯಾದಗಿರಿ ತಾಲೂಕು ಖಾನಾಪುರದ ಖಾನಾಪುರದ ಮೊನಪ್ಪ (55) ಸೋಮವಾರ ರಾತ್ರಿ ಹೊಲದಲ್ಲಿ ವಿಷ ಸೇವಿಸಿ ಮೃತಪಟ್ಟಿದ್ದಾರೆ. ರು.1 ಲಕ್ಷ ಬ್ಯಾಂಕ್ ಸಾಲ, ರು.3.5 ಲಕ್ಷ ಕೈಸಾಲ ಮಾಡಿದ್ದರು ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್